
ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದ ವಿಸ್ತರಣಾ ನಿರ್ದೇಶನಾಲಯದ ರೈತರ ತರಬೇತಿ ಸಂಸ್ಥೆಯ ವತಿಯಿಂದ “ಸಾಂಬಾರು ಬೆಳೆಗಳ ಕೃಷಿ: ಕಾಳುಮೆಣಸು ಮತ್ತು ಏಲಕ್ಕಿ” ಕುರಿತು ಒಂದು ದಿನದ ವಿಶೇಷ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಈ ತರಬೇತಿ ಕಾರ್ಯಕ್ರಮವು ಜೂನ್ 9 ರಂದು ಬೆಳಗ್ಗೆ 10 ಗಂಟೆಗೆ ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿರುವ ವಿಶ್ವವಿದ್ಯಾಲಯದ ವರದಾ ಬ್ಲಾಕ್ನ ನೆಲ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರೈತರ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.
ಸಾಂಬಾರು ಬೆಳೆಗಳ ಆಧುನಿಕ ಕೃಷಿ ಪದ್ಧತಿ, ಬೆಳೆ ನಿರ್ವಹಣೆ, ಉತ್ಪಾದನೆ ಹೆಚ್ಚಿಸುವ ತಂತ್ರಜ್ಞಾನಗಳು ಹಾಗೂ ಮಾರುಕಟ್ಟೆ ಸಂಬಂಧಿತ ಮಾಹಿತಿಯನ್ನು ರೈತರಿಗೆ ಈ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
ತರಬೇತಿ ಕಾರ್ಯಕ್ರಮವು ಸಂಪೂರ್ಣ ಉಚಿತವಾಗಿದ್ದು, ಮೊದಲಿಗೆ ನೋಂದಾಯಿಸಿಕೊಳ್ಳುವ 50 ರೈತರಿಗೆ ಆದ್ಯತೆ ನೀಡಲಾಗುತ್ತದೆ. ಹೆಸರು ಹಾಗೂ ವಿಳಾಸವನ್ನು ನೋಂದಾಯಿಸಿದ ರೈತರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ರೈತರು ಸಂಸ್ಥೆಯ ಸಿಬ್ಬಂದಿಗೆ ವಾಟ್ಸಪ್ ಸಂದೇಶದ ಮೂಲಕ ಹೆಸರು ನೋಂದಾಯಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9483162891, 9958324261, 8618715599 ಹಾಗೂ 9448312978 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.










Leave a Reply