ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!

Screenshot 20260606 125539 Canva ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!
Spread the love
img 20260110 wa00003487521749704773619 ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!

ಹೊಸನಗರ : ಶಿವಮೊಗ್ಗ-ಉಡುಪಿ ಗಡಿಯ ಹುಲಿಕಲ್ (ಬಾಳೆಬರೇ) ಘಾಟಿಯಲ್ಲಿ ಸಂಚರಿಸುತ್ತಿದ್ದ ಶ್ರೀ ದುರ್ಗಾಂಬ ಸಂಸ್ಥೆಯ ಬಸ್‌ಗೆ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ.

ಆದೃಷ್ಟವಶಾತ್, ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಸುರಕ್ಷಿತವಾಗಿ ಹೊರಬಂದಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಪ್ರಕರಣ ವರದಿಯಾಗಿಲ್ಲ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊದಲು ಬಸ್‌ನಿಂದ ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಬೆಂಕಿ ವ್ಯಾಪಿಸಿದೆ ಎನ್ನಲಾಗಿದೆ. ಘಟನೆಗೆ ನಿಖರ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ದೊರೆಯುವ ಸಾಧ್ಯತೆ ಇದೆ.

ಘಟನೆಯಿಂದ ಕೆಲಕಾಲ ರಸ್ತೆ ಸಂಚಾರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು..

img 20260528 wa00281772023031880800713 ಹುಲಿಕಲ್ ಘಾಟಿಯಲ್ಲಿ ದಿಢೀರ್ ಹೊತ್ತಿ ಉರಿದ ಬಸ್!!

Leave a Reply

Your email address will not be published. Required fields are marked *