ಅಕ್ರಮ ಗೋ ಸಾಗಾಣಿಕೆ – ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??

Screenshot 20260518 181132 Canva ಅಕ್ರಮ ಗೋ ಸಾಗಾಣಿಕೆ - ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??
Spread the love
img 20260110 wa00008720959026555632030 ಅಕ್ರಮ ಗೋ ಸಾಗಾಣಿಕೆ - ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??

ಶಿವಮೊಗ್ಗ : ಕ್ರೀದ್ ಹಬ್ಬದ ಸಂದರ್ಭದಲ್ಲಿ ಗೋವುಗಳ ಅಕ್ರಮ ಸಾಗಾಣೆ ಮತ್ತು ಹತ್ಯೆಯನ್ನು ತಡೆಗಟ್ಟಬೇಕು ಎಂದು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಆಗ್ರಹಿಸಿದೆ.


ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಜರಂಗದ ಪ್ರಾಂತ ಸುರಕ್ಷಾ ಪ್ರಮುಖ್ ರಾಜೇಶ್‌ಗೌಡ ಮಾತನಾಡಿ, ಬಕ್ರೀದ್ ಹಬ್ಬದ ಹಿನ್ನಲೆಯಲ್ಲಿ ಶಿವಮೊಗ್ಗವೂ ಸೇರಿದಂತೆ ರಾಜ್ಯಾದ್ಯಂತ ಕಾನೂನುಬಾಹಿರ ವಾಗಿ ಗೋವಂಶದ ಸಾಗಾಣಿಕೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗೋವಂಶ ಬಲಿ ನಡೆಯುವ ಸಾಧ್ಯತೆಯಿದ್ದು, ಇದನ್ನು ತಡೆ ಗಟ್ಟಲು ಪೊಲೀಸರು ಕಠಿಣ ಕಾನೂನುಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

img 20260427 wa00131363802618785558720 ಅಕ್ರಮ ಗೋ ಸಾಗಾಣಿಕೆ - ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??

ಅಕ್ರಮ ಕಸಾಯಿಖಾನೆ ಗಳನ್ನು ಗುರುತಿಸಿ, ದಾಳಿಮಾಡಿ ಶಾಶ್ವತವಾಗಿ ನಿಲ್ಲಿಸಬೇಕು. ಜಾನುವಾರು ಹತ್ಯೆ ನಡೆದ ಮನೆ ಕಟ್ಟಡ, ಖಾಲಿ ಜಮೀನುಗಳನ್ನು ಜಪ್ತಿಮಾಡಬೇಕು. ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳ ಬೇಕು. ಆರೋಪಿಗಳಿಗೆ 7 ವರ್ಷ
ಶಿಕ್ಷೆ ಹಾಗೂ ಪ್ರತಿ ಜಾನುವಾರಿಗೆ 1ಲಕ್ಷ ರೂ. ದಂಡ ವಿಧಿಸಬೇಕು. ಬೀಟ್ ಪೊಲೀಸರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಒತ್ತಾಯಿಸಿದರು.

ಈ ಅಕ್ರಮ ಕಸಾಯಿಖಾನೆಗಳಲ್ಲಿ ಮಾಂಸ ಖರೀದಿಸುವವರನ್ನು ಅಪರಾಧಿ ಎಂದು ಪರಿಗಣಿಸಿ ಶಿಕ್ಷೆ ನೀಡಬೇಕು. ಮಾಂಸವನ್ನು ವಶಪಡಿಸಿ ಕೊಂಡು ತನಿಖೆ ನಡೆಸಬೇಕು ಗೋವಧೆ ಮಾಡಿದ ಪ್ರಕರಣಗಳಲ್ಲಿ ಜಾಮೀನು ಪಡೆದು ಹೊರಗಿರುವ ಆರೋಪಿಗಳನ್ನು ಕರೆಯಿಸಿ ಎಚ್ಚರಿಕೆ ನೀಡಬೇಕು. ಬಕ್ರೀದ್ ಸಂದರ್ಭದಲ್ಲಿ ಪ್ರಾಣಿಗಳ ವಧೆ ಯಾಗದಂತೆ ನಿಷೇಧ ಇರುವ ಬಗ್ಗೆ ಪೊಲೀಸ್ ಇಲಾಖೆ ವ್ಯಾಪಾಕ ಪ್ರಚಾರ ಮಾಡಬೇಕು ಎಂದರು.

img 20260324 wa00563689427481958368937 ಅಕ್ರಮ ಗೋ ಸಾಗಾಣಿಕೆ - ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??

ಅಲ್ಲದೆ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯತಡೆ ಕಾಯ್ದೆ ಮತ್ತು ಆಹಾರ ಸುರಕ್ಷತೆ. ಗುಣಮಟ್ಟ ಕಾಯ್ದೆ, ಕಸಾಯಿ ಖಾನೆ ನಿಯಮಾವಳಿ, ಪ್ರಾಣಿಗಳ ಸಾಗಾಟ ನಿಯಮಾವಳಿ ಮುಂತಾದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕು. ಹಿಂದೂಗಳಿಗೆ ಪೂಜನೀಯವಾಗಿರುವ ಗೋಮಾತೆಯನ್ನು ಸಂವಿಧಾನದ ಚೌಕಿಟ್ಟಿನಲ್ಲಿ ರಕ್ಷಿಸಲು ವಿಶ್ವ  ಹಿಂದೂ ಪರಿಷತ್ ಬಜರಂಗದಳ ಬದ್ದವಾಗಿದೆ ಎಂದರು.

ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಸಾಮರಸ್ಯ ಪ್ರಮುಖ್ ರಮೇಶ್ ಬಾಬು ಮಾತನಾಡಿ. ಶಾಲಾ-ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಬಗ್ಗೆ ನೂತನ ಆದೇಶಹೊರಡಿಸಿ ಮತ್ತೆ ವಿದ್ಯಾರ್ಥಿಗಳಲ್ಲಿ ಸರ್ಕಾರ ಗೊಂದಲ ಮೂಡಿಸಿ ಮತ್ತೆ ಹಿಜಾಬ್ ವಿವಾದ ಪ್ರಾರಂಭಿಸಿದೆ. ಗುರುಕುಲ ಪದ್ಧತಿಯಿ೦ದಲೂ ಸಮಾನತೆಯ ದೃಷ್ಟಿಯಿಂದ ವಸ್ತಸಂಹಿತೆ ಇದ್ದು, ಈಗ ಹೊಸದಾಗಿ ಹಿಜಾಬ್‌ಗೆ ಅನುಮತಿ ನೀಡಿದ್ದು ಸರಿಯಲ್ಲ. ಇದೇ ರೀತಿ ವಿದ್ಯಾರ್ಥಿಗಳಲ್ಲಿ ತಾರತಮ್ಯ ಮತ್ತು ಅಸಾಮಾನ್ಯತೆ ಹುಟ್ಟಿಸುವ ಕೆಲಸ ಸರ್ಕಾರ ಮುಂದುವರಿಸಿದ್ದಲ್ಲಿ ಕೇಸರಿ ಅಭಿಯಾನವನ್ನು ಆರಂಭಿಸುತ್ತೇವೆ.

ತ್ರಿಶೂಲಧಾರಿಯಾಗಿಯೂ ಬರುತ್ತೇವೆ. ನಾವು ಮೊದಲಿ ನಿಂದಲೂ ಸಂಸ್ಕಾರ-ಸಂಸ್ಕೃತಿ ಯನ್ನು ಗೌರವಿಸುವವರು. ಮಕ್ಕ ಳಲ್ಲಿ ವಿಷಬೀಜ ಬಿತ್ತುವ ಸರ್ಕಾರದ ಈ ಕ್ರಮ ಸರಿಯಲ್ಲ, ಇತ್ತೀಚೆಗೆ ಪರೀಕ್ಷಾ ಕೇಂದ್ರಕ್ಕೆ ತೆರಳುವಾಗ ಜನಿವಾರ, ಮಂಗಳಸೂತ್ರ ಕಿತ್ತಿದ್ದನ್ನು ನೋಡಿದ್ದೇವೆ. ಸರ್ಕಾರದ ದ್ವಂದ್ವ ನೀತಿಯನ್ನು ವಿರೋಧಿಸುತ್ತೇವೆ ಎಂದರು.

ಸುರೇಶ್‌ ಬಾಬು ಮಾತನಾಡಿ, ಸರ್ಕಾರದ ದ್ವಂದ್ವ ನೀತಿಯಿಂದ ವಿದ್ಯಾರ್ಥಿಗಳಲ್ಲಿ ಸಾಮರಸ್ಯ ಭಾವನೆ ಕದಡುತ್ತಿದೆ. ರಾಜ್ಯದಲ್ಲಿ ಅಶಾಂತಿ, ಮಕ್ಕಳಲ್ಲಿ ವೈಷಮ್ಯ ಬಿತ್ತುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈಗಾಗಲೇ ಹೈಕೋರ್ಟ್ ಸ್ಪಷ್ಟವಾಗಿ ಹಿಜಾಬ್ ನಿಷೇಧಿಸಿ, ತೀರ್ಪು ನೀಡಿದೆ. ಹೈಕೋರ್ಟ್‌ಗಿಂತ ಸರ್ಕಾರ ದೊಡ್ಡದಾ…? ಎಂದು ಪ್ರಶ್ನಿಸಿದ ಅವರು, ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆ ಬಾಕಿ ಇರುವಾಗ ಸರ್ಕಾರದ ಈ ಆದೇಶ ನ್ಯಾಯಾಲಯದ ಆದೇಶ ಉಲ್ಲಂಘನೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ವಡಿವೇಲು ರಾಘವನ್, ಅಂಕುಶ್, ಶಕುಂ ತಲಾ, ಯೋಗೀಶ್ ನಾಯಕ್ ಮೊದಲಾದವರಿದ್ದರು.

img 20260515 wa00066897716619853718837 ಅಕ್ರಮ ಗೋ ಸಾಗಾಣಿಕೆ - ಹತ್ಯೆ ತಡೆಯಲು ಬಜರಂಗದಳ ಪಟ್ಟು | ಹಿಜಾಬ್ ಅವಕಾಶ ಹೈಕೋರ್ಟ್ ಗಿಂತ ಸರ್ಕಾರದ ದೊಡ್ಡದಾ ??

Leave a Reply

Your email address will not be published. Required fields are marked *