ಸರ್ಕಾರಿ ಶಿಕ್ಷಣದಲ್ಲೇ ಶ್ರೇಷ್ಠತೆ: ಒಂದೇ ಕುಟುಂಬ ದಿಂದ ಅಕ್ಕ–ತಮ್ಮನ ಡಬಲ್ ರ‍್ಯಾಂಕ್
ಎನ್.ಕಾರ್ತಿಕ್ ಕೌಂಡಿನ್ಯ
ರಿಪ್ಪನ್ ಪೇಟೆ: ಈ ಬಾರಿಯ ದ್ವೀತಿಯ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಫಲಿತಾಂಶವು ಒಂದು ಕುಟುಂಬಕ್ಕೆ ಅತ್ಯಂತ ವಿಶೇಷವಾಗಿದೆ. ಅಕ್ಕ ತಮ್ಮ ಸೇರಿ ಮಾಡಿದ ಶೈಕ್ಷಣಿಕ ಮ್ಯಾಜಿಕ್ ಸಾಧನೆ ಎಂತಹದ್ದು ಗೋತ್ತಾ!!
ಒಂದೇ ಕುಟುಂಬದ ಇಬ್ಬರು ದಿವ್ಯಶ್ರೀ ಮತ್ತು ದೀಕ್ಷಿತ್ ಕಾಲೇಜಿಗೆ ಫಸ್ಟ್ ರಾಂಕ್ ಪಡೆದ ಕಥೆ ಇದು!
ತಂದೆ ರಮೇಶ್ ಬಿ.ಕೆ ತಾಯಿ ಲತಾ ಜಿ ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮದವರು ಗಾರೆ ಕೆಲಸ ಮಾಡಿ ದಿನಗೂಲಿ ಕೆಲಸದ ಆಧಾರದಲ್ಲಿ ಕೆಲಸವನ್ನು ಮಾಡಿ ತಮ್ಮದೇ ಆದ ಸ್ವಾಭಿಮಾನದ ಜೀವನವನ್ನು ಕಟ್ಟಿಕೊಂಡವರು ಇವರಿಗೆ ಇಬ್ಬರು ಮಕ್ಕಳು . ಇವರು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಮಾಜದ ಮುನ್ನಲೆಯಲ್ಲಿ ನಿಂತವರಲ್ಲ ತಮ್ಮದೇ ಆದ ಪ್ರಪಂಚದಲ್ಲಿ ಸ್ವಂತಿಕೆಯಲ್ಲಿ ಬದುಕುತ್ತಿರುವವರು.
ಈ ಬಾರಿಯ ದ್ವಿತೀಯ ಪಿಯುಸಿಯಲ್ಲಿ ಮಗಳು ದಿವ್ಯಶ್ರೀ ಕಾಲೇಜಿಗೆ ಫಸ್ಟ್ ರ‍್ಯಾಂಕ್ ಪಡೆದರೆ , ಎಸ್ ಎಸ್ ಎಲ್ ಸಿಯಲ್ಲಿ ಮಗ ದೀಕ್ಷಿತ್ ಫಸ್ಟ್ ರಾಂಕ್ ..ಆಹಾ! ಕೇಳೋಕೆ ನೋಡಿ ಎಷ್ಟು ಖುಷಿಯಾಗುತ್ತದೆ .

ಹೌದು, ರಿಪ್ಪನ್ ಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ದಿವ್ಯಶ್ರಿ ಈ ಬಾರಿಯ ದ್ವೀತಿಯ ಪಿಯುಸಿಯಲ್ಲಿ 600ಕ್ಕೆ 569 ಅಂಕ ಪಡೆದು ಕಾಲೇಜಿಗೆ ಫಸ್ಟ್ ರಾಂಕ್ ಪಡೆದಿದ್ದಾರೆ. ತಮ್ಮ ದೀಕ್ಷಿತ್ ಎಸ್ ಎಸ್ ಎಲ್ ಸಿಯಲ್ಲಿ 607 ಅಂಕ ಪಡೆದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಗೆ ಫಸ್ಟ್ ರಾಂಕ್ ಪಡೆದ್ದಿದ್ದಾನೆ.
ನಮ್ಮೊಂದಿಗೆ ಮಾತನಾಡುತ್ತಾ ದಿವ್ಯಶ್ರೀ ಹೇಳುತ್ತಾಳೆ ತನಗೆ ಕಾರಣಾಂತರಗಳಿಂದ 10ನೇ ತರಗತಿಯಲ್ಲಿ Rank ಪಡೆಯಲು ಸಾಧ್ಯವಾಗಿಲ್ಲ ಅದನ್ನೆ ಚಲವಾಗಿ ತೆಗೆದುಕೊಂಡು ತನ್ನ ಕಠಿಣ ಪರಿಶ್ರಮ ದಿಂದ ವಿಜ್ಞಾನ ವಿಭಾಗದಲ್ಲಿ ಅತ್ಯುತ್ತಮ ಅಂಕ ಪಡೆದೆ ಅಂತ ಹೇಳುವಾಗ ಈಕೆ ತನ್ನ ಕುಟುಂಬದ ಆತ್ಮ ಗೌರವವನ್ನು ಹೆಚ್ಚಿಸಿದ್ದು ನೂರಕ್ಕೆ ನೂರರಷ್ಟು. ವಿದ್ಯಾರ್ಥಿನಿಯ ಈ ಸಾಧನೆಯನ್ನು ನೋಡಿ ನಾನಂತು ತುಂಬಾ ಖುಷಿಪಟ್ಟಿದಂತೂ ಸತ್ಯ ಅಷ್ಟೇ ಅಲ್ಲ ಒಂದೇ ಕುಟುಂಬದಲ್ಲಿ ಒಂದೇ ವರ್ಷದಲ್ಲಿ ಇಬ್ಬರೂ ಫಸ್ಟ್ ರಾಂಕ್ ಪಡೆದಿದ್ದು ನಮ್ಮ ಭಾಗದಲ್ಲಿ ಇದೆ ಮೊದಲು.
ಈಗಷ್ಟೇ ನೀಟ್ ಪರೀಕ್ಷೆ ಪೂರೈಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದಾಳೆ. ಮುಂದೆ ಮಹತ್ತರ ಆಶಯಗಳನ್ನು ಹೊತ್ತು ಕನಸು ಕಂಡಿದ್ದಾಳೆ.
ಇನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಎಸ್ ಎಸ್ ಎಲ್ ಸಿಯನ್ನು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ದೀಕ್ಷಿತ್ ಈ ಬಾರಿ ಕಾಲೇಜಿಗೆ ಪ್ರಥಮ ಅಗ್ರಗಣ್ಯ ಓದುನೊಂದಿಗೆ ಜೊತೆಗೆ ತಂದೆ ಸಹಕಾರಿಯಾಗಿ ನಿಂತು ತನ್ನ ನಿರಂತರ ಪರಿಶ್ರಮ ದಿಂದ 625 ಕ್ಕೆ 607( 97.28%) ಅಂಕ ಪಡೆದಿದ್ದಾನೆ. ಈತ ಚಿಕ್ಕ ವಯಸ್ಸಿನಿಂದಲೇ ಉತ್ತಮ ಅಂಕಗಳನ್ನು ಬೇಟೆಯಾಡುತ್ತಿದ್ದ ಯಾವಾಗಲೂ ಕ್ಲಾಸ್ ನಲ್ಲಿ ಇವನೇ ಫಸ್ಟ್ ಹಾಗೇ ಎಸ್ ಎಸ್ ಎಲ್ ಸಿಗೆ ಕಾಲೇಜಿಗೆ ಫಸ್ಟ್ ಬಂದಿದ್ದಾನೆ ಈತನ ಏಕಾಗ್ರತೆ ,ಕಠಿಣ ಪರಿಶ್ರಮ ಶಾಲೆಯ ಶಿಕ್ಷಕರ ತರಬೇತಿಯ ಪರಿಶ್ರಮ ಇವನ ಸಾಧನೆಯ ಕೈಗನ್ನಡಿಯಾಗಿದೆ. ಮುಂದಿನ ಶಿಕ್ಷಣವನ್ನು ಪಿಯುಸಿಯಲ್ಲಿ ಕಂಪ್ಯೂಟರ್ ಸೈನ್ಸ್ ಮಾಡಬೇಕೆಂಬ ತನ್ನ ಹಂಬಲವನ್ನು ವ್ಯಕ್ತಪಡಿಸಿದ್ದಾನೆ ಆತನಿಗೆ ಶುಭವಾಗಲಿ.
ಮಕ್ಕಳು ಓದಿ ಒಳ್ಳೆ ಅಂಕ ಪಡಿಬೇಕು ಅಂತ ಎಲ್ಲಾ ಪೋಷಕರಿಗಂತೂ ಇದ್ದೆ ಇರೋತ್ತೆ ಅದರಂತೆ ನಮಗೂ ಇತ್ತು. ನಾವು ಅಂದುಕೊಂಡಕ್ಕಿಂತ ಹೆಚ್ಚು ಸಂತೋಷವನ್ನೂ ಇವರಿಬ್ಬರು ನಮ್ಮಿಬ್ಬರಿಗೆ ಕೊಟ್ಟಿದ್ದಾರೆ. ನಾವಂತೂ ಶಾಲೆಗೆ ಹೋಗಿ ಓದಲಿಕ್ಕೆ ಆಗಿಲ್ಲ ನಮ್ಮ ಮಕ್ಕಳು ನಮ್ಮ ಆಸೆನ ನೆರವೇರಿಸಿದ್ದಾರೆ ಅಂತ ಭಾವನಾತ್ಮಕವಾಗಿ ಹಂಚಿಕೊಂಡಿದಷ್ಟೆ ಅಲ್ಲದೇ ನಮ್ಮಂತಹ ಬಡವರು ಇಂದಿನ ವ್ಯವಸ್ಥೆಯಲ್ಲಿ ಇವರ ಮುಂದಿನ ಶಿಕ್ಷಣದ ವೆಚ್ಚ ಭರಿಸೋದು ಹೇಗೆ ಅಂತ ಚಿಂತೆನು ಕಾಡುತ್ತಿದೆ ಅಂತ ಹೇಳಿದರು.
ಅಜ್ಜ ಕಲ್ಲಪ್ಪ ಅಜ್ಜಿ ಲಕ್ಷಮ್ಮ ಮೊಮ್ಮಕ್ಕಳ ಈ ಸಾಧನೆಯನ್ನು ನೋಡಿ. ನಮಗೆಲ್ಲ ಶಾಲೆಗೆ ಹೊಗಲಿಕ್ಕೆ ಆಗಿಲ್ಲ ಮೊಮ್ಮಕ್ಕಳು ಪಡೆದ ಅಂಕಗಳಿಂದ ನಮ್ಮ ಜೀವನಕ್ಕೆ ಬೇಕಾದಷ್ಟು ಖುಷಿ ಸಿಕ್ತು ಅಂತ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಬಡ ಕುಟುಂಬ ದಿಂದ ಜನಿಸಿ ಬಾನೆತ್ತರಕ್ಕೆ ಬೆಳೆಯುವ ಕನಸುಗಳನ್ನು ಕಾಣುತ್ತಿರುವ ಈ ಅಕ್ಕ -ತಮ್ಮ ಸೇರಿ ಈ ಹಿಂದೆ ಸರ್ಕಾರಿ ಶಾಲೆ – ಕಾಲೇಜು ಅಂತ ಮುಗು ಮುರಿಯುವ ಕಾಲವನ್ನು ಈ GEN -Z ಗಳು ದೂರ ಮಾಡಿದಂತೂ ಸತ್ಯ . ಈ ಅಕ್ಕ ತಮ್ಮನ ಸಾಧನೆಗೆ ಶುಭ ಹಾರೈಸೋಣ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ದಿವ್ಯಶ್ರೀ ಮತ್ತು ದೀಕ್ಷಿತ್ ಗೆ ನಾಡಿ ಮೀಡಿಯಾ ಹೌಸ್ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು ಮುಂದಿನ ನಿಮ್ಮ ಎಲ್ಲಾ ಶೈಕ್ಷಣಿಕ ಆಶಯಗಳು ಈಡೇರಲಿ ಎಂದು ಆಶಿಸುತ್ತೇವೆ.
ಹಿಂದಿನ ಹಿನ್ನಡೆಯನ್ನೇ ಪ್ರೇರಣೆಯಾಗಿ ತೆಗೆದುಕೊಂಡು ಹೆಚ್ಚು ಪರಿಶ್ರಮ ಪಟ್ಟೆ. ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಬೆಂಬಲದಿಂದ ಈ ಸಾಧನೆ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಇದೆ,”
- ದಿವ್ಯಶ್ರೀ ಪಿಯುಸಿ ಟಾಪರ್
“ಓದಿನ ಜೊತೆಗೆ ಮನೆಯ ಕೆಲಸಕ್ಕೂ ಸಮಯ ನೀಡುತ್ತಿದ್ದೆ. ಶಿಕ್ಷಕರ ಮಾರ್ಗದರ್ಶನ ಮತ್ತು ಪೋಷಕರ ಪ್ರೋತ್ಸಾಹದಿಂದ ಈ ಸಾಧನೆ ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಇನ್ನಷ್ಟು ಸಾಧನೆ ಮಾಡುವ ಉದ್ದೇಶವಿದೆ,”
- ದೀಕ್ಷಿತ್ ಆರ್, ಎಸ್ ಎಸ್ ಎಲ್ ಸಿ ಟಾಪರ್
“ನಮ್ಮ ಕಷ್ಟದ ನಡುವೆಯೂ ಮಕ್ಕಳು ಇಂತಹ ಸಾಧನೆ ಮಾಡಿದುದು ತುಂಬಾ ಹೆಮ್ಮೆ. ನಾವು ಸಾಧಿಸಲಾರದ ಕನಸುಗಳನ್ನು ಅವರು ನನಸು ಮಾಡಿದ್ದಾರೆ,”
- ರಮೇಶ್ ಬಿ.ಕೆ, ತಂದೆ



















Leave a Reply