ಕೋಣಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿರುವ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಕೋಣಂದೂರಿನ ರಾಷ್ಟ್ರೀಯ ವಿಜ್ಞಾನ ಕಾಲೇಜು, ಈ ವರ್ಷದ ಫಲಿತಾಂಶದಲ್ಲಿ ಶೇ.100 ಸಾಧನೆ ದಾಖಲಿಸುವ ಮೂಲಕ ಮತ್ತೊಮ್ಮೆ ತನ್ನ ಮೇಲುಗೈ ಸಾಧಿಸಿದೆ.
ಸಾಧನೆಯಲ್ಲಿ ಸಿಂಚನ 98.83% ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕೆ.ವಿ ವಿಧಾತ್ರಿ 96.00%, ಚಾಂದಿನಿ ಕೆ.ಎಂ 95.83%, ಅನನ್ಯ ವೈ.ಪಿ 95.67% ಅಂಕಗಳನ್ನು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಜೊತೆಗೆ ಆದರ್ಶ 92.50%, ತನ್ಮಯ ಹೆಚ್.ಪಿ 90.50%, ಹೇಮಂತ್ ಎಸ್ 89.83%, ನಾಗಶ್ರೀ ಟಿ.ಜಿ 89.17%, ದೀಕ್ಷಾ ಎನ್.ಡಿ 89.00%, ಹರ್ಷಿತ್ ಹೆಚ್.ಪಿ 88.00%, ಸಿಂಚನ ಎನ್ 85.50%, ಅಮೋಘ ಸಿ.ಸಿ 85.00% ಮತ್ತು ಶ್ರೇಯ ಕೆ.ಆರ್ 85.00% ಅಂಕಗಳನ್ನು ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಮುಖ್ಯವಾಗಿ, ಕಾಲೇಜಿನ ಶೇ.40 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿರುವುದು ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ.

ಈ ಅಪೂರ್ವ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಸಿಬ್ಬಂದಿಯವರ ನಿರಂತರ ಪರಿಶ್ರಮ, ಪೋಷಕರ ಬೆಂಬಲ ಹಾಗೂ ವಿದ್ಯಾರ್ಥಿಗಳ ಶ್ರದ್ಧೆ ಕಾರಣವಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಪೋಷಕರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.















Leave a Reply