ಬಟ್ಟೆಮಲ್ಲಪ್ಪ: ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾರ್ಥಿಗಳಿಗೆ ತಾರಮಂಡಲ ಚಿತ್ರಕಲಾ ಪ್ರಶಸ್ತಿ

Blue and Red Voter Education Banner 20260328 210626 0000 1 scaled ಬಟ್ಟೆಮಲ್ಲಪ್ಪ: ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾರ್ಥಿಗಳಿಗೆ ತಾರಮಂಡಲ ಚಿತ್ರಕಲಾ ಪ್ರಶಸ್ತಿ
Spread the love

ಬಟ್ಟೆಮಲ್ಲಪ್ಪ : ಇಲ್ಲಿನ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿಗಳು ಚಿತ್ರದುರ್ಗ ತಾರಮಂಡಲ ರಾಷ್ಟ್ರೀಯ ಚಿತ್ರಕಲಾ ಸ್ಪರ್ಧೆಯಲ್ಲಿ ಅತೀ ಹೆಚ್ಚಿನ ಪ್ರಶಸ್ತಿಗಳೊಂದಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.



ಖಗೋಳ ವಿಜ್ಞಾನದ ಮೇಲೆ ವಿಶೇಷ ಕೆಲಸ ಮಾಡುತ್ತಿರುವ ಚಳ್ಳೆಕೆರೆ ಯರ್ರಿಸ್ವಾಮಿ ನೇತೃತ್ವದ ಚಿತ್ರದುರ್ಗ ತಾರಮಂಡಲ ಸಂಸ್ಥೆ ಪ್ರತಿವರ್ಷ ಮಕ್ಕಳಿಗೆ ರಾಷ್ಟ್ರ ಮಟ್ಟದ ಚಿತ್ರಕಲಾ ಸ್ಪರ್ಧೆ ಏರ್ಪಡಿಸುತ್ತಾ ಬರುತ್ತಿದೆ.

img 20260328 wa00317210505902827702656 ಬಟ್ಟೆಮಲ್ಲಪ್ಪ: ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾರ್ಥಿಗಳಿಗೆ ತಾರಮಂಡಲ ಚಿತ್ರಕಲಾ ಪ್ರಶಸ್ತಿ

ಇದರಲ್ಲಿ 2025- 26ನೇ ಸಾಲಿನ ಸ್ಪರ್ಧೆಯಲ್ಲಿ  ಬಟ್ಟೆಮಲ್ಲಪ್ಪದ ಶ್ರೀ ವ್ಯಾಸ ಮಹರ್ಷಿ ಗುರುಕುಲದ ವಿದ್ಯಾರ್ಥಿಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅತೀ ಹೆಚ್ಚಿನ ಪ್ರಶಸ್ತಿ ಪಡೆಯುವ ಮೂಲಕ ಸಮಗ್ರ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಇದರಲ್ಲಿ 7ನೇ ತರಗತಿ ವಿದ್ಯಾರ್ಥಿನಿ ಖುಷಿ ಎಸ್ ರಾಷ್ಟ್ರೀಯ ಮಟ್ಟದಲ್ಲಿ ದ್ವಿತೀಯ ಸ್ಥಾನ, 6ನೇ ತರಗತಿ ವಿದ್ಯಾರ್ಥಿನಿ ಆದ್ವಿನಿ ಎನ್ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ, ಜಿಲ್ಲಾ ಮಟ್ಟದಲ್ಲಿ 5ನೇ ತರಗತಿ ವಿದ್ಯಾರ್ಥಿನಿ ಚಿನ್ಮಯಿ ಎಂ. ಬ್ಯಾಣದ ದ್ವಿತೀಯ ಹಾಗೂ 4ನೇ ತರಗತಿ ವಿದ್ಯಾರ್ಥಿನಿ ಪ್ರಣಮ್ಯ ಆರ್ ತೃತೀಯ ಸ್ಥಾನ ಹಾಗೂ ತಾಲ್ಲೂಕು ಮಟ್ಟದಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಸೋನುಶ್ರೀ ಮತ್ತು 1ನೇ ತರಗತಿ ವಿದ್ಯಾರ್ಥಿನಿ ಅನಾಮಿಕ ವಿ. ಎಸ್ ತೃತೀಯ ಸ್ಥಾನ ಪಡೆದಿದ್ದಾರೆ. ಹಾಗೂ ಶಾಲಾ ಹಂತದಲ್ಲಿ 45 ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ಗುರುಕುಲದ ಸಹ ಶಿಕ್ಷಕಿ ವಿದ್ಯಾ ಮಂಜುನಾಥ್ ನಾಯ್ಕ್ ಅವರು ರಾಷ್ಟ್ರ ಮಟ್ಟದ ಅತ್ಯುತ್ತಮ ಸಂಘಟಕ ಶಿಕ್ಷಕಿ ಪ್ರಶಸ್ತಿ ಪಡೆದುಕೊಂಡಿದ್ದು. ಪ್ರಶಸ್ತಿ ವಿಜೇತರನ್ನು ಗುರುಕುಲ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ್ ಎಸ್. ಬ್ಯಾಣದ ಹಾಗೂ ಹಿರಿಯ ಮಾರ್ಗದರ್ಶಕ ಹಾಗೂ ನಿವೃತ್ತ ಸೈನಿಕ ಕೆ. ಪಿ. ಕೃಷ್ಣಮೂರ್ತಿ ಅವರುಗಳು ಅಭಿನಂದಿಸಿದ್ದಾರೆ.

img 20260110 wa00005695032567680094747 ಬಟ್ಟೆಮಲ್ಲಪ್ಪ: ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾರ್ಥಿಗಳಿಗೆ ತಾರಮಂಡಲ ಚಿತ್ರಕಲಾ ಪ್ರಶಸ್ತಿ
img 20260324 wa00561826646826046965676 ಬಟ್ಟೆಮಲ್ಲಪ್ಪ: ಶ್ರೀ ವ್ಯಾಸ ಮಹರ್ಷಿ ಗುರುಕುಲ ವಿದ್ಯಾರ್ಥಿಗಳಿಗೆ ತಾರಮಂಡಲ ಚಿತ್ರಕಲಾ ಪ್ರಶಸ್ತಿ

Leave a Reply

Your email address will not be published. Required fields are marked *