ಆನಂದಪುರ :ಕತ್ತಲಲ್ಲಿ ಕಾದಿದ್ದ ಅಪಾಯ-  ಹಾವು ಕಚ್ಚಿ ರೈತ ಸಾ*ವು

Blue and Red Voter Education Banner 20260318 134441 0000 scaled ಆನಂದಪುರ :ಕತ್ತಲಲ್ಲಿ ಕಾದಿದ್ದ ಅಪಾಯ-  ಹಾವು ಕಚ್ಚಿ ರೈತ ಸಾ*ವು
Spread the love

ಆನಂದಪುರ: ತೋಟಕ್ಕೆ ನೀರು ಹಾಯಿಸಲು ತೆರಳಿದ್ದ ರೈತರೊಬ್ಬರು ಹಾವು ಕಚ್ಚಿ ಮೃತಪಟ್ಟ ದುರ್ಘಟನೆ ಸಾಗರ ತಾಲೂಕಿನ ಆನಂದಪುರ ಸಮೀಪದ ಗೌತಮಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಹುಚ್ಚಪ್ಪ ಎಂ (65) ಮೃತಪಟ್ಟ ವ್ಯಕ್ತಿ. ಮಂಗಳವಾರ ರಾತ್ರಿ ಸುಮಾರು 8:30ರ ವೇಳೆಗೆ ತಮ್ಮ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ವೇಳೆ ವಿಷಕಾರಿ ಹಾವು ಕಚ್ಚಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಹಾವು ಕಚ್ಚಿದ ತಕ್ಷಣವೇ ಅವರು ಮನೆಗೆ ಮರಳಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ತಕ್ಷಣವೇ ಅವರನ್ನು ಆನಂದಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು . ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 9:45ರ ವೇಳೆಗೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


fb img 17738051899407430651285817549440 ಆನಂದಪುರ :ಕತ್ತಲಲ್ಲಿ ಕಾದಿದ್ದ ಅಪಾಯ-  ಹಾವು ಕಚ್ಚಿ ರೈತ ಸಾ*ವು
fb img 17738054976608120506639665423421 ಆನಂದಪುರ :ಕತ್ತಲಲ್ಲಿ ಕಾದಿದ್ದ ಅಪಾಯ-  ಹಾವು ಕಚ್ಚಿ ರೈತ ಸಾ*ವು

Leave a Reply

Your email address will not be published. Required fields are marked *