ರಾಕಿಂಗ್ ಸ್ಟಾರ್ ಯಶ್ಗೆ 40ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಇದೇ ವೇಳೆ, ಅಭಿಮಾನಿಗಳು ನಿರೀಕ್ಷೆಯಿಂದ ಕಾಯುತ್ತಿದ್ದ `ಟಾಕ್ಸಿಕ್’ ಚಿತ್ರದ ಟೀಸರ್ ರಿಲೀಸ್ ಆಗಿದೆ. ಬೂಟುಗಾಲಲ್ಲಿ ಬುಲೆಟ್ಸ್ ಬಿಡ್ತಾ ಸಖತ್ ರಗಡ್ ಆಗಿ ಯಶ್ ಎಂಟ್ರಿ ಕೊಟ್ಟಿದ್ದಾರೆ.
‘ಟಾಕ್ಸಿಕ್’ ಸಿನಿಮಾದ ಟೀಸರ್ನಲ್ಲಿ ಯಶ್ ನ್ಯೂ ಗೆಟಪ್ನಲ್ಲಿ ಅಬ್ಬರಿಸಿದ್ದಾರೆ. ಹಾಲಿವುಡ್ ರೇಂಜ್ನಲ್ಲಿ ಚಿತ್ರದ ಟೀಸರ್ ಮೂಡಿ ಬಂದಿದೆ. ಸ್ಮಶಾನದ ದೃಶ್ಯದಿಂದ ಟೀಸರ್ ಶುರುವಾಗುತ್ತದೆ. ಅಂತಿಮ ಸಂಸ್ಕಾರ ನಡೆಯುತ್ತಿರುವಾಗ ಒಂದು ಕಾರು ಬಂದು ಕಂಪೌಂಡ್ ಹೊರಗೆ ಕ್ರ್ಯಾಶ್ ಆಗಿ ನಿಲ್ಲುತ್ತದೆ. ಕಾರ್ ಒಳಗೆ ಯಶ್ ಯುವತಿಯೊಂದಿಗೆ ರೊಮ್ಯಾಂಟಿಕ್ ಆಗಿರುತ್ತಾರೆ. ಇಬ್ಬರ ಹಸಿ ಬಿಸಿ ದೃಶ್ಯಗಳನ್ನು ತೋರಿಸಲಾಗಿದೆ.
ಟೀಸರ್ ನಲ್ಲಿ ಬೂಟುಗಾಲಿಂದ ಬುಲೆಟ್ಸ್ ಬಿಡುತ್ತಾ ಸಖತ್ ರಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಬ್ಲ್ಯಾಕ್ ಬ್ಲೇಜರ್ ಧರಿಸಿ ಹೊರಗೆ ಬರೋ ರಾಯ (ಯಶ್) ಸ್ಮಶಾನದಲ್ಲಿ ಧ್ವಂಸ ಮಾಡುತ್ತಾನೆ. ಹೀಗೆ ಸಾಗೋ ದೃಶ್ಯದ ಕೊನೆಯಲ್ಲಿ ‘ ಡ್ಯಾಡ್ ಈಸ್ ಹೋಮ್ ‘ಎನ್ನುತ್ತಾ ರಾಕಿ ಭಾಯ್ ಡೈಲಾಗ್ ಹೊಡೆದಿದ್ದಾರೆ.
ಒಟ್ನಲ್ಲಿ ಟಾಕ್ಸಿಕ್’ ಟೀಸರ್ ಅದ್ಧೂರಿಯಾಗಿ ಮೂಡಿ ಬಂದಿದೆ. ಯಶ್ ನಯಾ ಲುಕ್ ನೋಡಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ಅಭಿಮಾನಿಗಳು ಸಿನಿಮಾಗಾಗಿ ಕಾಯ್ತಿದ್ದಾರೆ.
ನಿರ್ದೇಶಕಿ ಗೀತು ಜೊತೆ ಯಶ್ ಕೂಡ ಕಥೆ ಬರೆದಿದ್ದಾರೆ. ಈ ಚಿತ್ರದಲ್ಲಿ ಯಶ್ ಜೊತೆ ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ನಯನತಾರಾ, ಹುಮಾ ಖುರೇಶಿ, ತಾರಾ ಸುತಾರಿಯಾ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಟಾಕ್ಸಿಕ್’ ಚಿತ್ರವು ಕನ್ನಡ, ಹಿಂದಿ ಸೇರಿದಂತೆ ಬಹುಭಾಷೆಗಳಲ್ಲಿ ಮಾ.19ರಂದು ರಿಲೀಸ್ ಆಗಲಿದೆ. ಯಶ್ ಜೊತೆ ಸೇರಿ ಕೆವಿಎನ್ ಸಂಸ್ಥೆ ಈ ಚಿತ್ರಕ್ಕೆ ಬಂಡವಾಳ ಹೂಡಿದೆ.











Leave a Reply