ದಿನಸಿ ವ್ಯಾಪಾರಿ ಜಯವಂತ್ ನಾಯಕ್ ನಿಧನ

Addaheading 20261007 200613 0000 ದಿನಸಿ ವ್ಯಾಪಾರಿ ಜಯವಂತ್ ನಾಯಕ್ ನಿಧನ
Spread the love

ರಿಪ್ಪನ್‌ಪೇಟೆ: ಪಟ್ಟಣದ ತಿಲಕ್ ನಗರ ನಿವಾಸಿ ಹಾಗೂ ಹಿರಿಯ ದಿನಸಿ ವ್ಯಾಪಾರಿ ಜನ್ಸಾಲೆ ಜಯವಂತ್ ನಾಯಕ್ (91) ಅವರು ವಯೋಸಹಜ ಕಾರಣಗಳಿಂದ ನಿಧನರಾದರು.
   ರಿಪ್ಪನ್‌ಪೇಟೆ ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿರುವ ಜೆ.ಎನ್. ಸ್ಟೋರ್ಸ್ ಮಾಲೀಕರಾಗಿದ್ದ ಜಯವಂತ್ ನಾಯಕ್ ಅವರು ಹಲವು ವರ್ಷಗಳಿಂದ ವ್ಯಾಪಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಮೂಲಕ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
   ಮೃತರ ಅಂತ್ಯಕ್ರಿಯೆ ಬುಧವಾರ ರಿಪ್ಪನ್‌ಪೇಟೆಯ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.
   ಮೃತರು ಪತ್ನಿ, ಐವರು ಪುತ್ರಿಯರು, ಓರ್ವ ಪುತ್ರ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!