ರಿಪ್ಪನ್‌ಪೇಟೆ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆಯ ಶತಮಾನೋತ್ಸವ ಆಚರಣೆಯ ಅಂಗವಾಗಿ ಗುರುವಾರ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಹಳೆಯ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಶಾಲೆಯ 100ನೇ ವರ್ಷದ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ರಾಜ್ಯಕ್ಕೆ ಮಾದರಿಯಾಗುವ ರೀತಿಯಲ್ಲಿ ಆಚರಿಸಲು ಸಂಕಲ್ಪಿಸಲಾಯಿತು.
ಸಭೆಯಲ್ಲಿ ಶತಮಾನೋತ್ಸವ ಸಮಿತಿಯನ್ನು ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಆರ್.ಎ. ಚಾಬುಸಾಬ್, ಅಧ್ಯಕ್ಷರಾಗಿ ನಿರೂಪ್ ಕುಮಾರ್ ಹಾಗೂ ಕಾರ್ಯಾಧ್ಯಕ್ಷರಾಗಿ ಸುರೇಶ್ ಸಿಂಗ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಸುಧೀಂದ್ರ ಪೂಜಾರಿ ಮತ್ತು ಆಸೀಫ್ ಭಾಷಾ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಉಮೇಶ್, ಹಬೀಬ್ ಸಾಬ್, ಪ್ರೇಮ್‌ನಾಥ್, ರಾ. ಸೋಮಶೇಖರ್ ಜೋಗಿ ಹಾಗೂ ಆರ್.ಎನ್. ಮಂಜುನಾಥ್ ಅವರನ್ನು ನೇಮಕ ಮಾಡಲಾಗಿದೆ.
ಸಂಘಟನಾ ಕಾರ್ಯದರ್ಶಿಗಳಾಗಿ ರಫಿ, ಹಸನಬ್ಬ, ಸೆಬಾಸ್ಟಿನ್, ಶೀಲಾ ಆರ್.ಡಿ., ದೇವರಾಜ್ ಹಾಗೂ ಪ್ರವೀಣಾಚಾರ್ ಆಯ್ಕೆಯಾಗಿದ್ದಾರೆ. ಮಾಧ್ಯಮ ಕಾರ್ಯದರ್ಶಿಗಳಾಗಿ ಚಿದಾನಂದ ಸ್ವಾಮಿ ಹಾಗೂ ಎನ್. ಕಾರ್ತಿಕ್ ಕೌಂಡಿನ್ಯ, ಖಜಾಂಚಿಯಾಗಿ ಶಾಲೆಯ ಮುಖ್ಯೋಪಾಧ್ಯಾಯರಾದ ಅಶೋಕ್ ಎಂ.ಇ. ಅವರನ್ನು ಆಯ್ಕೆ ಮಾಡಲಾಯಿತು.
ಇನ್ನು ನಿರ್ದೇಶಕರಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಮಂಜಪ್ಪ, ಭೀಮರಾಜ್ ದೊಡ್ಡಿನಕೊಪ್ಪ, ಶ್ರೀಧರ್ ಚಿಗುರು, ಶಿವಪ್ಪ ಗೌಡ, ಪರಶುರಾಮ್ ಕೆರೆಹಳ್ಳಿ, ಉಮೇಶ್ ಆರ್.ಯು., ಶಿವರಾಜ್ ಡಿ.ಪ್ರಭು, ರವಿಚಂದ್ರನ ವೈ., ಈಶ್ವರ್ ಶೆಟ್ಟಿ, ಗಣೇಶ್, ಈಶ್ವರ, ಸುದೇಶ್ ಆರ್.ಡಿ., ವಿನಾಯಕ ಕೆರೆಹಳ್ಳಿ, ಮುರುಳಿ ಕೆ.ವೈ., ಜಗದೀಶ್ ನೇಮಣ್ಣ, ಸಾಯಿನಾಥ್ ಹಾಗೂ ಹೇಮಕ್ಕ ಸೇರಿದಂತೆ ಹಲವರನ್ನು ಸಮಿತಿಗೆ ನೇಮಕ ಮಾಡಲಾಗಿದೆ.
ಶಾಲೆಯ ಶತಮಾನೋತ್ಸವವನ್ನು ಕೇವಲ ಒಂದು ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಶಾಲೆಯೊಂದಿಗೆ ನಂಟು ಹೊಂದಿರುವ ಹಳೆಯ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಒಗ್ಗೂಡಿಸುವ ಉದ್ದೇಶವನ್ನು ಸಮಿತಿ ಹೊಂದಿದೆ.
ಎಲ್ಲಾ ಹಳೆಯ ವಿದ್ಯಾರ್ಥಿಗಳು ಸೇರಿದಂತೆ ಉದ್ಯಮಿಗಳು, ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿರುವವರನ್ನು ಗುರುತಿಸಿ ಸಂಪರ್ಕಿಸುವ ಮೂಲಕ, ಸಾಮಾನ್ಯ ಹಿನ್ನೆಲೆಯಿಂದ ಅಸಾಮಾನ್ಯ ಸಾಧನೆ ಮಾಡಿದವರನ್ನೂ ಶತಮಾನೋತ್ಸವ ಕಾರ್ಯಕ್ರಮದೊಂದಿಗೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿದೆ.
ಶಾಲೆಯ 100ನೇ ವರ್ಷದ ಸಂಭ್ರಮವನ್ನು ಅದ್ಧೂರಿಯಾಗಿ ಮಾತ್ರವಲ್ಲದೆ, ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಉಪಯುಕ್ತವಾಗುವಂತಹ ಅರ್ಥಪೂರ್ಣ ಕಾರ್ಯಕ್ರಮಗಳ ಮೂಲಕ ಆಚರಿಸಿ, ರಾಜ್ಯಕ್ಕೆ ಮಾದರಿಯಾಗುವಂತೆ ರೂಪಿಸುವ ಸಂಕಲ್ಪವನ್ನು ಸಭೆಯಲ್ಲಿ ಕೈಗೊಳ್ಳಲಾಯಿತು.
















Leave a Reply