ಹಿಂದೂ ಸಮಾಜವನ್ನು ಸಂಘಟಿಸುವುದೇ ಗಣೇಶೋತ್ಸವದ ಏಕಮೇವ ಆದ್ಯತೆಯಾಗಿರಲಿ: ಕು.ಕವಿತಾ ಆಚಾರ್ಯ ಮುದೂರು

Addaheading 20260920 194904 0000 ಹಿಂದೂ ಸಮಾಜವನ್ನು ಸಂಘಟಿಸುವುದೇ ಗಣೇಶೋತ್ಸವದ ಏಕಮೇವ ಆದ್ಯತೆಯಾಗಿರಲಿ: ಕು.ಕವಿತಾ ಆಚಾರ್ಯ ಮುದೂರು
Spread the love

ರಿಪ್ಪನ್‌ಪೇಟೆ: ಗಣೇಶ ಹಬ್ಬವು ಕೇವಲ ಆಡಂಬರಕ್ಕೆ ಸೀಮಿತವಾಗದೆ, ಸರ್ವಜನಾಂಗವನ್ನು ಒಂದುಗೂಡಿಸುವ ಶ್ರದ್ಧಾ-ಭಕ್ತಿಯ ಪ್ರತೀಕವಾಗಬೇಕು ಎಂದು ಕುಂದಾಪುರದ ಕುಮಾರಿ ಕವಿತಾ ಆಚಾರ್ಯ ಮುದೂರು ಅಭಿಪ್ರಾಯಪಟ್ಟರು.
   ಪಟ್ಟಣದ  ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 59ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು.
   ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ಲೋಕಮಾನ್ಯ ಬಾಲಗಂಗಾಧರ ತಿಲಕರು ಸಮಾಜವನ್ನು ಸಂಘಟಿಸುವ ಸದುದ್ದೇಶದಿಂದ ಸಾರ್ವಜನಿಕ ಗಣೇಶೋತ್ಸವಕ್ಕೆ ನಾಂದಿ ಹಾಡಿದರು ಪ್ರಸ್ತುತ ಈಗ ಹಿಂದೂ ಸಮಾಜವನ್ನು ಸಂಘಟಿಸುವುದೇ ಗಣೇಶೋತ್ಸವದ ಏಕಮೇವ ಆದ್ಯತೆಯಾಗಿರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಗಣೇಶನ ಮೂರ್ತಿಯನ್ನು ವಿಚಿತ್ರ ಭಂಗಿಗಳಲ್ಲಿ ಪ್ರತಿಷ್ಠಾಪಿಸುವುದು ಹಾಗೂ ಕರ್ಕಶ ಡಿಜೆ ಶಬ್ದ, ಅನ್ಯಭಾಷೆಯ ಹಾಡುಗಳಿಗೆ ಕುಣಿಯುವ ಮೂಲಕ ಹಬ್ಬದ ಪಾವಿತ್ರ್ಯತೆಯನ್ನು ಹಾಳುಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿ ಎಂದು ಅವರು ತೀವ್ರ ಕಳವಳ ವ್ಯಕ್ತಪಡಿಸಿದರು.

   ಪ್ರಕೃತಿಯೇ ದೇವರು ಎಂಬ ತತ್ವದಡಿ ಮಣ್ಣಿನ ಮೂರ್ತಿಯನ್ನು ಪೂಜಿಸುವುದು ಭಾರತೀಯ ಸಂಸ್ಕೃತಿ. ಭಕ್ತಿ-ಭಾವ, ಜಾನಪದ ಸಂಸ್ಕೃತಿಯ ಬದಲು ಮೋಜು-ಮಸ್ತಿ ಮತ್ತು ಭಿನ್ನಾಭಿಪ್ರಾಯಗಳಿಗೆ ಆಸ್ಪದ ನೀಡದೆ, ಸನಾತನ ಧರ್ಮದ ತಳಹದಿಯ ಮೇಲೆ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಕಲ್ಪವನ್ನು ಯುವಪೀಳಿಗೆ ಮಾಡಬೇಕಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು 59ನೇ ವರ್ಷದ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಧೀಂದ್ರ ಪೂಜಾರಿ ವಹಿಸಿದ್ದರು.
  ಈ ಸಂದರ್ಭದಲ್ಲಿ ಆರ್.ಎಚ್. ಶ್ರೀನಿವಾಸ ಆಚಾರ್ ದಂಪತಿ, ಬೆಳ್ಳೂರು ಲೋಲಾಕ್ಷಿ ನಾಗರಾಜ್ ಹಾಗೂ ಉಪನ್ಯಾಸಕಿ ಕುಮಾರಿ ಕವಿತಾ ಆಚಾರ್ಯ ಮುದೂರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
  ಸಭಾ ಕಾರ್ಯಕ್ರಮದ ಬಳಿಕ ರಿಪ್ಪನ್‌ಪೇಟೆಯ ಶಾರದಾಂಬ ಸಾಂಸ್ಕೃತಿಕ ಕಲಾಕೇಂದ್ರದ ವಿದ್ಯಾರ್ಥಿಗಳಿಂದ ಆಕರ್ಷಕ ಭರತನಾಟ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

file 000000003f5c8208a0b120fec3430d9d7735416199400026659 ಹಿಂದೂ ಸಮಾಜವನ್ನು ಸಂಘಟಿಸುವುದೇ ಗಣೇಶೋತ್ಸವದ ಏಕಮೇವ ಆದ್ಯತೆಯಾಗಿರಲಿ: ಕು.ಕವಿತಾ ಆಚಾರ್ಯ ಮುದೂರು

Leave a Reply

Your email address will not be published. Required fields are marked *

error: Content is protected !!