ಕಿಚ್ಚನ ‘ಮಾರ್ಕ್‌’ ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್-ಕಟೌಟ್‌ಗೆ ಮದ್ಯಾಭಿಷೇಕ

IMG 20251225 WA0193 ಕಿಚ್ಚನ 'ಮಾರ್ಕ್‌' ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್-ಕಟೌಟ್‌ಗೆ ಮದ್ಯಾಭಿಷೇಕ
Spread the love

ಶಿವಮೊಗ್ಗದಲ್ಲಿ ‘ಮಾರ್ಕ್’ ಹವಾ: ಥಿಯೇಟರ್ ಹೌಸ್ ಫುಲ್

ಶಿವಮೊಗ್ಗ: ರಾಜ್ಯಾದ್ಯಂತ ಇಂದು (ಡಿ.25) ತೆರೆಕಂಡ ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಮಲೆನಾಡು ಭಾಗದಲ್ಲೂ ಭಾರೀ ಸಂಭ್ರಮದೊಂದಿಗೆ ಬಿಡುಗಡೆಯಾಗಿದೆ. ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿನ ಚಿತ್ರಮಂದಿರಗಳ ಮುಂದೆ ಅಭಿಮಾನಿಗಳ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.ನಗರದ ಮಲ್ಲಿಕಾರ್ಜುನ ಟಾಕೀಸ್ ಹಾಗೂ ಭಾರತ್ ಸಿನಿಮಾಸ್‌ನಲ್ಲಿ ‘ಮಾರ್ಕ್’ ಸಿನಿಮಾ ಪ್ರದರ್ಶನ ಆರಂಭಗೊಂಡಿದ್ದು, ಬೆಳಿಗ್ಗೆ 6.30ಕ್ಕೆ ಮೊದಲ ಪ್ರದರ್ಶನ ಆರಂಭವಾಯಿತು. ವಿಶೇಷವಾಗಿ ಭಾರತ್ ಸಿನಿಮಾಸ್‌ನಲ್ಲಿ ಒಂದೇ ದಿನಕ್ಕೆ 10ಕ್ಕೂ ಹೆಚ್ಚು ಶೋಗಳನ್ನು ಸಿನಿಪ್ರಿಯರಿಗಾಗಿ ವ್ಯವಸ್ಥೆ ಮಾಡಲಾಗಿದೆ.

img 20251225 wa0187867599204131570093 ಕಿಚ್ಚನ 'ಮಾರ್ಕ್‌' ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್-ಕಟೌಟ್‌ಗೆ ಮದ್ಯಾಭಿಷೇಕ
ಮದ್ಯಾಭಿಷೇಕ ಮಾಡುತ್ತಿರುವ ‘ಹುಚ್ಚ’ ನ ಅಭಿಮಾನ

  ಮಲ್ಲಿಕಾರ್ಜುನ ಟಾಕೀಸ್ ಮುಂಭಾಗದಲ್ಲಿ ಕಿಚ್ಚ ಸುದೀಪ್ ಅವರ ಭಾರೀ ಕಟೌಟ್‌ಗಳನ್ನು ನಿರ್ಮಿಸಿ, ಅಭಿಮಾನಿಗಳು ಮದ್ಯಾಭಿಷೇಕ ಮಾಡುವ ಮೂಲಕ ತಮ್ಮ  ಹುಚ್ಚನ ಮೇಲಿರುವ ಅಭಿಮಾನ ವ್ಯಕ್ತಪಡಿಸಿದರು. ಚಿತ್ರಮಂದಿರದ ಮುಂಭಾಗದಲ್ಲಿ ಕಟೌಟ್‌ಗಳು, ಪ್ಲೆಕ್ಸ್‌ಗಳು ರಾರಾಜಿಸುತ್ತಿದ್ದು, ಸ್ಕ್ರೀನ್ ಮುಂದೆ ಸುದೀಪ್ ಅವರ ಫೋಟೋ ಇರುವ ಬಾವುಟಗಳನ್ನು ಹಿಡಿದು ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿದರು.

img 20251217 wa01911740270551503892359 ಕಿಚ್ಚನ 'ಮಾರ್ಕ್‌' ಗೆ ಫ್ಯಾನ್ಸ್ ಫುಲ್ ಮಾರ್ಕ್ಸ್-ಕಟೌಟ್‌ಗೆ ಮದ್ಯಾಭಿಷೇಕ


 ಚಿತ್ರ ವೀಕ್ಷಿಸಿದ ಅಭಿಮಾನಿಗಳು ನಾಡಿ ನ್ಯೂಸ್ ನೊಂದಿಗೆ ಮಾತನಾಡಿ, ಚಿತ್ರದ ಕಥೆ, ಸುದೀಪ್ ಅವರ ಅಭಿನಯ ಹಾಗೂ ಆಕ್ಷನ್ ದೃಶ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಶಿವಮೊಗ್ಗದಲ್ಲಿ ‘ಮಾರ್ಕ್’ ಸಿನಿಮಾ ಬಿಡುಗಡೆಯೊಂದಿಗೆ ಅಭಿಮಾನಿಗಳ ಉತ್ಸಾಹ ಮುಗಿಲು ಮುಟ್ಟಿದ್ದು, ಮಲೆನಾಡಿನಲ್ಲಿ ಕಿಚ್ಚನ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ.


Spread the love

Leave a Reply

Your email address will not be published. Required fields are marked *