ಶಾಸಕ ಬೇಳೂರು ಅವರಿಂದ ವಿದ್ಯಾರ್ಥಿ ನಿಲಯ ಕಟ್ಟಡದ ಶಂಕುಸ್ಥಾಪನೆ
ಹೊಸನಗರ: ಈಡಿಗ ಸಮುದಾಯದ ಜನರು ಅಡಿಕೆ ಬೆಳೆದು ಕಾರು, ಬೈಕು ಕೊಂಡು ಆರ್ಥಿಕವಾಗಿ ಕೊಂಚ ಚೇತರಿಕೆ ಕಂಡಿದ್ದಾರೆ. ಇದಕ್ಕೆ ಕಾರಣ ನಮ್ಮ ಸಮುದಾಯದ ಹಿರಿಯರಾದ ಎಸ್. ಬಂಗಾರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರ ಹೋರಾಟವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಪಟ್ಟಣದ ಆರ್ಯ ಈಡಿಗ ಸಂಘದ ನೂತನ ಸಭಾಭವನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.ಈಡಿಗ ಸಮಾಜದ ಒಳಿತಿಗಾಗಿ ಎಲ್ಲರೂ ಸಂಘಟರಾಗಿ ಶ್ರಮ ಪಡಬೇಕಿದೆ. ಹಿಂದೆ ಹೋರಾಟ ಮಾಡಿದವರ ಹಾದಿಯಲ್ಲಿ ನಾವು ಸಾಗಬೇಕಿದೆ. ಬಗರ್ ಹುಕುಂ ಸೇರಿದಂತೆ ಸಮಸ್ಯೆಗಳು ಇನ್ನೂ ಸಾಕಷ್ಟಿವೆ. ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಒಂದಾಗಿ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಈಡಿಗ ಸಮುದಾಯ ಎಲ್ಲಾ ಸಮುದಾಯಗಳಿಗೆ ಮಾದರಿ ಯಾಗಬೇಕು. ಯಾರೊಂದಿಗೂ ದ್ವೇಷ ಮನೋಭಾವನೆ ಬೇಡ ಎಂದು ಕಿವಿಮಾತು ಹೇಳಿದರು.ಹಿರಿಯ ರಾಜಕಾರಣಿ ಕಾಗೋಡು ತಿಮ್ಮಪ್ಪ, ಮಧು ಬಂಗಾರಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ಅವರನ್ನು ಶ್ಲಾಘಿಸಿದರು. ವಿದ್ಯಾರ್ಥಿ ನಿಲಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸುವಂತೆ ತಿಳಿಸಿದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ತಮ್ಮ ಅಧಿಕಾರವಧಿಯಲ್ಲಿ ಈಡಿಗ ಸಮುದಾಯದ ಅಭಿವೃದ್ಧಿಗಾಗಿ ಮಾಡಿದ ಕಾರ್ಯಗಳು ಹಾಗೂ ಸರಕಾರದಿಂದ ಲಭ್ಯವಾದ ಅನುದಾನದ ವಿವರಗಳನ್ನು ಪ್ರಸ್ತಾಪಿಸಿದರು. ಆಡಳಿತದಲ್ಲಿ ಇರುವವರಿಗೆ ಹೆಚ್ಚಿನ ಜವಾಬ್ದಾರಿ ಅಗತ್ಯ. ಸಮುದಾಯದ ಒಳಿತಿಗಾಗಿ ಹೆಚ್ಚಿನ ಶ್ರಮ ವಹಿಸಬೇಕು ಎಂದರು.

ಸಂಘದ ಅಧ್ಯಕ್ಷ ಬಿ.ಪಿ.ರಾಮಚಂದ್ರ ಪ್ರಾಸ್ತಾವಿಕಮಾತನಾಡಿದರು. ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥಾನದ ರೇಣುಕಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಾಜಿ ಶಾಸಕ ಡಾ.ಜಿ.ಡಿ.ನಾರಾಯಣಪ್ಪ, ಕಲಗೋಡು ರತ್ನಾಕರ, ಸುರೇಶ್ ಸ್ವಾಮಿರಾವ್, ಶ್ವೇತಾ ಬಂಡಿ, ಆರ್ಯ ಈಡಿಗ ಸಂಘದ ಜಿಲ್ಲಾಧ್ಯಕ್ಷ ಹುಲ್ತಿಕೊಪ್ಪ ಶ್ರೀಧರ್,ಉಮೇಶ್, ಎಂ.ಪಿ ಸುರೇಶ್, ಯೋಗೇಂದ್ರಪ್ಪ,ಶ್ರೀ ಷಣ್ಮುಖಪ್ಪ ವಕೀಲರು ಕುರುಂಬಳ್ಳಿ,ಮಂಡಾಣಿ ಮೋಹನ, ಬಸವರಾಜ್, ಸತೀಶ ಕಾಲಸಿ, ಬಿ.ಜಿ ನಾಗರಾಜ್, ಸಣ್ಣಕ್ಕಿ ಮಂಜು, ಬಿ.ಜಿ. ಸತ್ಯನಾರಾಯಣ, ಮಂಡಾಣಿ, ಪುಟ್ಟಸ್ವಾಮಿ,ಶ್ರೀ ಎರಗಿ ಉಮೇಶ್ ಹಾಗೂ ಕಾರ್ಯದರ್ಶಿಯಾದ ಶ್ರೀ ಯೋಗೇಂದ್ರಪ್ಪ ತ್ರಿಣಿವೆ, ನಿರ್ದೇಶಕ ಮಂಡಳಿಯ ಶ್ರೀ ಷಣ್ಮುಖಪ್ಪ ವಕೀಲರು ಹೊಸನಗರ, ಶ್ರೀ ವಾಸುದೇವ ಹಾರೇಕೊಪ್ಪ, ಶ್ರೀ ಬಿ.ಜಿ. ನಾಗರಾಜ ಹೊಸನಗರ, ಶ್ರೀ ಎಂ.ಟಿ. ಟಾಕಪ್ಪ ಮಂಡಾನಿ, ಶ್ರೀ ಜಿ.ಬಿ. ಶ್ರೀಧರ ಗುಡ್ಡಕೊಪ್ಪ ಚಕ್ರಾನಗರ, ಶ್ರೀ ಬಿ.ಇ. ಚಂದ್ರಶೇಖರ ಬಾಳೇಹಳ್ಳಿ, ಶ್ರೀ ಯೋಗೇಂದ್ರ ಕಲ್ಲಿ, ಶ್ರೀ ಕೆ.ಎನ್. ನಾಗರಾಜ ಕಡೇಕಲ್ಲು, ಶ್ರೀ ಕೃಷ್ಣಮೂರ್ತಿ ಹುಲುಗಾರು, ಶ್ರೀ ಉಮಾಕರ ಕಾನುಗೋಡು, ಶ್ರೀ ಸತೀಶ ಕಾಲಸಸಿ, ಶ್ರೀ ಚಂದ್ರಪ್ಪ ಕೊಡಸೆ, ಶ್ರೀ ಮುರುಳೀದರ ಬಿ.ಇ. ಹೊಸನಗರ, ಶ್ರೀ ಎಂ.ಪಿ. ಸುರೇಶ್ ಹೊಸನಗರ ಹಾಗೂ ಶ್ರೀ ಎಸ್.ಕೆ. ರಾಜು ಸೋಗೋಡು,ಶ್ರೀ ಮಂಜಪ್ಪ ಆನೆಗದ್ದೆ, ಶ್ರೀ ರಾಮಚಂದ್ರ ವಕೀಲರು ಹಿರೇಜೇನಿ, ಶ್ರೀ ಟಿ.ಡಿ. ಗಣಪತಿ, ಶ್ರೀ ಮೋಹನ್ ಮಂಡಾನಿ, ಶ್ರೀ ಶ್ರೀಪತಿ ವಾಟಗದ್ದೆ, ಶ್ರೀ ಹೆಚ್. ಶ್ರೀಧರ ಸೋರೆಕೊಪ್ಪ, ಶ್ರೀ ಗೋಪಾಲ ಕಟ್ಟಿನಹೊಳೆ, ಶ್ರೀ ಗೋಪಾಲ ಕರಿಮನೆ, ಶ್ರೀ ಸುಬ್ರಮಣ್ಯ ಸಾವಂತೂರು ಹಾಗೂ ಶ್ರೀ ಟೀಕಪ್ಪ ಕೆರೆಕೊಪ್ಪ ,ಶ್ರೀ ಓಂರಾಜ್ ಕೆ.ವೈ ಕುರುಂಬಳ್ಳಿ, ಮತ್ತು ಇತರರಿದ್ದರು.
















Leave a Reply