ಮಾರ್ಚ್ 31ರಂದು ಹೊಸನಗರ ಪಟ್ಟಣದ ಮತದಾರ ಮ್ಯಾಪಿಂಗ್ ಕ್ಯಾಂಪ್: ತಹಶೀಲ್ದಾರ್ ಭರತ್‌ರಾಜ್

Blue and Red Voter Education Banner 20260329 140757 0000 scaled ಮಾರ್ಚ್ 31ರಂದು ಹೊಸನಗರ ಪಟ್ಟಣದ ಮತದಾರ ಮ್ಯಾಪಿಂಗ್ ಕ್ಯಾಂಪ್: ತಹಶೀಲ್ದಾರ್ ಭರತ್‌ರಾಜ್
Spread the love

ಹೊಸನಗರ: ರಾಜ್ಯಾದ್ಯಂತ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದ್ದು, ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯದ ಪ್ರಗತಿ ತೀರಾ ನಿಧಾನವಾಗಿದೆ. ಬಾಕಿ ಉಳಿದಿರುವ ಮ್ಯಾಪಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಮಾರ್ಚ್ 31ರಂದು ಮಂಗಳವಾರ ವಿಶೇಷ ಕ್ಯಾಂಪ್ ಆಯೋಜಿಸಲಾಗಿದೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಡಿ.ಎಸ್ ಸಮುದಾಯ ಭವನದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮ್ಯಾಪಿಂಗ್ ಕ್ಯಾಂಪ್ ನಡೆಯಲಿದ್ದು, ಸಂಬಂಧಿತ ಅಧಿಕಾರಿಗಳು ಸ್ಥಳದಲ್ಲೇ ಉಪಸ್ಥಿತರಿರುತ್ತಾರೆ ಎಂದು ತಹಶೀಲ್ದಾರ್ ಭರತ್‌ರಾಜ್ ತಿಳಿಸಿದ್ದಾರೆ.2002ರ ನಂತರ ಮದುವೆಯಾಗಿ ಹೊಸನಗರಕ್ಕೆ ಬಂದವರು ಹಾಗೂ ಇನ್ನೂ ಮ್ಯಾಪಿಂಗ್ ಮಾಡಿಸಿಕೊಳ್ಳದವರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಇದೀಗಾಗಲೇ ಪಟ್ಟಣ ಪಂಚಾಯಿತಿ ವತಿಯಿಂದ ಜಾಗೃತಿ ಅಭಿಯಾನ ನಡೆಯುತ್ತಿದ್ದು, ಮ್ಯಾಪಿಂಗ್ ಮಾಡಿಸಿಕೊಳ್ಳದವರು ಮುಂದಿನ ಚುನಾವಣೆಗಳಲ್ಲಿ ಮತದಾನ ಹಕ್ಕು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

img 20260110 wa00005402587261503184739 ಮಾರ್ಚ್ 31ರಂದು ಹೊಸನಗರ ಪಟ್ಟಣದ ಮತದಾರ ಮ್ಯಾಪಿಂಗ್ ಕ್ಯಾಂಪ್: ತಹಶೀಲ್ದಾರ್ ಭರತ್‌ರಾಜ್
img 20260324 wa00567733417216153363113 ಮಾರ್ಚ್ 31ರಂದು ಹೊಸನಗರ ಪಟ್ಟಣದ ಮತದಾರ ಮ್ಯಾಪಿಂಗ್ ಕ್ಯಾಂಪ್: ತಹಶೀಲ್ದಾರ್ ಭರತ್‌ರಾಜ್

Leave a Reply

Your email address will not be published. Required fields are marked *