ಮಹಿಳೆಯರ ಚಂಡೆ ಸಾಧನೆಗೆ ಶ್ಲಾಘನೆ: ಮೂರು ತಿಂಗಳಲ್ಲಿ ದೊಡ್ಡ ಹೆಜ್ಜೆ –  ಪ್ರದೀಪ್. ಕೆ

Blue and Red Voter Education Banner 20260321 185055 0000 scaled ಮಹಿಳೆಯರ ಚಂಡೆ ಸಾಧನೆಗೆ ಶ್ಲಾಘನೆ: ಮೂರು ತಿಂಗಳಲ್ಲಿ ದೊಡ್ಡ ಹೆಜ್ಜೆ -  ಪ್ರದೀಪ್. ಕೆ
Spread the love

ಹೊಸನಗರ: ಹಿಳೆಯರು ಚಂಡೆ ಕಲಿಯುವುದು ಸುಲಭದ ಮಾತಲ್ಲ ಅದರೂ ಹೊಸನಗರ ತಾಲ್ಲೂಕಿನ ಮಹಿಳೆಯರು ಮೂರು ತಿಂಗಳಲ್ಲಿ ಚಂಡೆ ಕಲಿತು ನಾವು ಯಾರಿಗೂ ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಎಂದು ಶ್ರೀಧರ್ಮಸ್ಥಳ ಗ್ರಾಮೀಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಪ್ರದೀಪ್ ಕೆ ಯವರು ಹೇಳಿದರು.

ಹೊಸನಗರ ತಾಲ್ಲೂಕು ಕೋಡೂರು ವಲಯದ ಮಾವಿನಕಟ್ಟೆ ಶಿವಾನಿ ಜ್ಞಾನ ವಿಕಾಸ ಕೆಂದ್ರದಲ್ಲಿ  ಸೃಜನಶೀಲ ಕಾರ್ಯಕ್ರಮದಲ್ಲಿ 3 ತಿಂಗಳುಗಳ ಕಾಲ ಚಂಡೆ ತರಗತಿ ಸಮಾರೋಪ ಸಮಾರಂಭವನ್ನು ಎರ್ಪಡಿಸಲಾಗಿದ್ದು ಈ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಹೊಸನಗರ ತಾಲ್ಲೂಕಿನ ಮಹಿಳೆಯರು 3 ತಿಂಗಳುಗಳ ಕಾಲ  ಶ್ರದ್ಧೆಯ ಮನಸ್ಸಿನಿಂದ ಚಂಡೆ ಬಾರಿಸುವುದು ಕಲಿತಿದ್ದಾರೆ ನಾವು ಯಾವುದೇ ಹಬ್ಬ ಹುಣ್ಣಿಮೆಗಳಿಗೆ ಬೇರೆ ರಾಜ್ಯದವರನ್ನು ಇನ್ನೂ ಮುಂದೆ ಕರೆಸುವ ಅಗತ್ಯವಿಲ್ಲ   ಜ್ಞಾನ ವಿಕಾಸ ಕೇಂದ್ರದ ಆಶ್ರಯದಲ್ಲಿ ನಡೆದ ಚಂಡೆ ತರಬೇತಿ ಒಕ್ಕೂಟದ ಅಧ್ಯಕ್ಷ ಹರೀಶ್ ಈ ಚಂಡೆ ತರಗತಿಯನ್ನು ಮಾವಿನಕಟ್ಟೆಯಲ್ಲಿ ನಡೆಸಲು ಅನುಮತಿ ನೀಡಿದ್ದು ಈ ಭಾಗದ ಮಹಿಳೆಯರಿಗೆ ಅನುಕೂಲಕರವಾಗಿದೆ ಈ ಭಾಗದ ಮಹಿಳೆಯರು  ಚಂಡೆ ಕಲಿಕೆಯನ್ನು ಮುಂದುವರೆಸಿಕೊಂಡು ಹೋಗಬೇಕೆಂದು ಹಾಗೂ ಇದರಿಂದ ಎಲ್ಲರಿಗೂ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಸಂತಾ ಅವರು ವಹಿಸಿ ಮಾತನಾಡಿ ನಮ್ಮಂತವರು 4 ಗೋಡೆಗಳ ಮಧ್ಯೆ ಇರುವಂತಹ ಮಹಿಳೆಯರಿಗೆ  ಮಹಿಳಾ ಜ್ಞಾನ ವಿಕಾಸ ಕೇಂದ್ರದವರು ಚೆಂಡೆಯನ್ನು ಕಲಿಸಿದ್ದಾರೆ ಇದು ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ  ಮಾಲತಿ ಹಾಗೂ ಚಂಡೆ ತರಬೇತಿ ನೀಡಿದ ಶ್ರೀನಿವಾಸ್ ಆಚಾರ್ಯ, ಕೋಡೂರು ವಲಯದ ಮೇಲ್ವಿಚಾರಕ ಉಮಾ, ಸೇವಾ ಪ್ರತಿನಿಧಿ ರೇಖಾ, ಕೇಂದ್ರ ಸದಸ್ಯರಾದ ಶಾರದ, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶಾಂತಕುಮಾರಿ, ರಜಿನಿ, ಕೇಂದ್ರದ ಸದಸ್ಯರು ತರಬೇತಿ ಪಡೆದ ಎಲ್ಲ ಸದಸ್ಯರು  ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *