ರಿಪ್ಪನ್ ಪೇಟೆ: ಭಾರತಿ ಟೀಚರ್ ಏಳನೇ ತರಗತಿ ಎಂಬ ಚಲನ ಚಿತ್ರ ತಂಡವು ಈ ಭಾಗದ ಪ್ರಮೋಷನ್ ಕಾರ್ಯಕ್ರಮವು ಮೂಗುಡ್ತಿ ಬಲಮುರಿ ಮಹಾಗಣಪತಿ ದೇವಸ್ಥಾನ ದಿಂದ ಪ್ರಾರಂಭವಾಯಿತು.ಚಿತ್ರ ತಂಡ ಶ್ರೀ ದೇವರ ಆರ್ಶೀವಾದ ಪಡೆದು ಚಲನಚಿತ್ರದ ಕುರಿತು ಹಂಚಿಕೊಂಡರು.


ನಾಯಕ ನಟ ರೋಹಿತ್ ಮಾತನಾಡಿ ನಮ್ಮ ಭಾರತಿ ಟೀಚರ್ ಕನ್ನಡಚಲನ ಚಿತ್ರವೂ ಜನವರಿ 16 ರಿಂದ ಬಿಡುಗಡೆಗೊಂಡಿದೆ. ಪ್ರತಿಯೊಬ್ಬರು ಈ ನಮ್ಮ ತಂಡದ ಚಲನ ಚಿತ್ರವನ್ನು ನೋಡಿ .ಕಲಿಯುವ ಹಂತದಲ್ಲಿರುವ ಮಕ್ಕಳು ತಮ್ಮನ್ನು ಚಿಕ್ಕವರು ಎಂದು ಭಾವಿಸುತ್ತಾರೆ ಆದರೆ ಕಲಿಸುವ ಹಂತಕ್ಕೆ ಬದಲಾದಾಗ ಅವರ ವ್ಯಕ್ತಿತ್ವ ಪ್ರೌಢವಾಗುತ್ತದೆ ವಿಕಸನಗೊಳ್ಳುತ್ತದೆ ಸಾಮಾಜಿಕ ಒಡನಾಟಗಳು ಅವರಲ್ಲಿ ಸಾಮಾಜಿಕ ಜಾಗೃತಿಯನ್ನು ಕೂಡ ತರುತ್ತದೆ ಇಂತಹ ವಿಶೇಷ ಸಂದೇಶವನ್ನು ಸಾರುವಂತಹ ಚಲನಚಿತ್ರ ಆಗಿದೆ ಹಾಗಾಗಿ ಮಕ್ಕಳು ಮತ್ತು ಕುಟುಂಬ ಸಮೇತರಾಗಿ ಈ ಚಲನಚಿತ್ರ ನೋಡಿ ಹರಸಿ ಎಂದು ವಿನಂತಿಸಿದರು.

ನಾಯಕ ನಟ ರೋಹಿತ್ ರಾಘವೇಂದ್ರ ,ಕ್ರಿಯೇಟಿವ್ ಹೆಡ್ ವೆಂಕಟ್ ಗೌಡ ,ನಿರ್ಮಾಪಕರು ರಾಘವೇಂದ್ರ ರೆಡ್ಡಿ ಸಾರಥ್ಯದ ಚಿತ್ರವು, ಎಂ ಎಲ್ ಪ್ರಸನ್ನ ನಿರ್ದೇಶನದಲ್ಲಿ ಕಥೆ ಚಿತ್ರಕಥೆ ಸಂಭಾಷಣೆ ಸಾಹಿತ್ಯ ಸಂಗೀತ ಮೂಡಿಬಂದಿದೆ.
ವಿಶೇಷ ಪಾತ್ರದಲ್ಲಿ ಆದಿತ್ಯ, ಸಚಿವರಾದ ಸಂತೋಷ್ ಎಸ್ ನಟಿಸಿರುವುದು ಈ ಚಿತ್ರದ ವಿಶೇಷ.
ಹಿರಿಯ ಕಲಾವಿದರಾದ ಸಿಹಿ ಕಹಿ ಚಂದ್ರು ಮತ್ತು ಕುಮಾರಿ ಯಶಿಕಾ, ಗೋವಿಂದೇಗೌಡ, ಅಶ್ವಿನ್ ಹಾಸನ್, ದಿವ್ಯ ಅಂಚನ್, ಬೆನಕ ನಂಜಪ್ಪಣ್ಣ, ಸೌಜನ್ಯ ಸುನಿಲ್, ಎಂಜಿ ರಂಗಸ್ವಾಮಿ ನಟಿಸಿದ್ದಾರೆ.
ಇಂದಿನ ಕಾರ್ಯಕ್ರಮದಲ್ಲಿ ಸುಮಂಗಳ ಕಾಳನಾಯ್ಕ, ಪ್ರವೀಣ್ ಕುಮಾರ್ ವಕೀಲರು, ರಾಘವೇಂದ್ರ ತಲ್ನೇರಿ,ಬಸವರಾಜ್ ಹೆದ್ದಾರಿಪುರ, ರೂಪ ಪ್ರವೀಣ್ ಭಟ್, ಕಾರ್ತಿಕ್ ಜೆ ಎಂ, ಜನಾರ್ಧನ್ ಆಚಾರ್ಯ, ಅರುಣ್ ಕುಮಾರ್ ಡಿ, ಅಭಿಷೇಕ್ ಎಂ ಕೆ, ರಾಘವೇಂದ್ರ ಎಂ ಎಂ, ಶ್ರೀನಿವಾಸ್ ಆಚಾರ್ಯ, ಪ್ರವೀಣ್ ಭಟ್ ಹೆದ್ದಾರಿಪುರ, ಪ್ರವೀಣ್ ಪಿ ಎಸ್, ಗುರುರಾಜ್ ಗೌಡ್ರು, ಯತೀಶ್ ಎಂಎಸ್, ಸುಭಾಷ್ ಚಂದ್ರ ಆಚಾರ್ಯ, ರಾಘವೇಂದ್ರ ಭಟ್ ಮೂಗುಡ್ತಿ, ನಿಶ್ಚಲ ಎಂ ವೈ, ಇನ್ನಿತರದಿದ್ದರು.












Leave a Reply