ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು ಮಾರ್ಕ್ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮ್ಯಾಕ್ಸ್ ಸಕ್ಸಸ್ ಬಳಿಕ ಕಿಚ್ಚ ಸುದೀಪ್ ಹಾಗೂ ವಿಜಯ್ ಕಾರ್ತಿಕೇಯ ಈ ಪ್ರಾಜೆಕ್ಟ್ ಗಾಗಿ ಕೈ ಜೋಡಿಸಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಒದರ ನಡುವೆ ಚಿತ್ರದ ಪಾರ್ಟಿ ಹಾಡು ಕೂಡ ಭರ್ಜರಿ ಸೌಂಡ್ ಮಾಡ್ತಿದೆ.

ಮಾರ್ಕ್ ಸಿನಿಮಾದ ಮಸ್ತ್ ಮಲೈಕಾ ಸಾಂಗ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿಯೂ ಸಾನ್ವಿ ಸುದೀಪ್ ಕಂಠಕ್ಕೆ ಸಂಗೀತ ಪ್ರಿಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮಸ್ತ್ ಮಲೈಕಾ ಹಾಡಿಗೆ ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಧ್ವನಿ ನೀಡಿದ್ದಾರೆ. ಮಗಳ ಕಂಠಕ್ಕೆ ಕಿಚ್ಚ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ. ಡಿ.15ರಂದು ರಿಲೀಸ್ ಆದ ಮಸ್ತ್ ಮಲೈಕಾ ಸಾಂಗ್ ಈಗ ಯೂಟ್ಯೂಬ್ ನಲ್ಲಿ ಮಿಲಿಯನ್ ಗಟ್ಟಲೇ ವಿವ್ಸ್ ಗಿಟ್ಟಿಸಿಕೊಳ್ತಿದೆ. ಇದೇ ಡಿ.25ಕ್ಕೆ ಮಾರ್ಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಮಸ್ತ್ ಮಲೈಕಾ ಸಾನ್ವಿ ಅವರ ಮೊದಲ ಹಾಡು ಅನ್ನೋದು ವಿಶೇಷ. ಸಿನಿಮಾ ರಂಗದಲ್ಲಿ ಅಥವಾ ಸಂಗೀತ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬುವುದು ಸಾನ್ವಿ ಕನಸಂತೆ. ಆ ಕನಸಿನಂತೆ ಅವರು ಸಾಗುತ್ತಿದ್ದಾರೆ. ಅದು ಅಪ್ಪನ ಚಿತ್ರದ ಮೂಲಕ ಪೂರ್ಣ ಪ್ರಮಾಣದ ಗಾಯಕಿಯಾಗಿ ಸಾನ್ವಿ ಹೊರ ಹೊಮ್ಮಿದ್ದಾರೆ.
ಈ ಹಿಂದೆ ನಟ ನಾನಿ ಅಭಿನಯದ ‘ಹಿಟ್ 3’ ಚಿತ್ರದ ಮೂಲಕ ಸಾನ್ವಿ ಸುದೀಪ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ಹಿಟ್ 3 ರ ಥೀಮ್ ಸಾಂಗ್ ‘ಪೊರಟಮೆ 3.0’ ಗೆ ಸಾನ್ವಿ ಧ್ವನಿ ನೀಡಿದ್ದಾರೆ. ಇದೀಗ ತನ್ನ ತಂದೆ ನಟಿಸಿರುವ ಚಿತ್ರದ ಮೂಲಕವೇ ಸಾನ್ವಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ.
‘ಸತ್ಯ ಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್’ ಮೂಲಕ ಮಾರ್ಕ್ ಸಿನಿಮಾ ನಿರ್ಮಾಣ ಆಗಿದೆ. ಸುದೀಪ್ ಜೊತೆ ದೀಪ್ಷಿಕಾ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಗುರು ಸೋಮಸುಂರಂ, ಗೋಪಾಲಕೃಷ್ಣ ದೇಶಪಾಂಡೆ, ಡ್ರ್ಯಾಗನ್ ಮಂಜು, ಅರ್ಚನಾ ಕೊಟ್ಟಿಗೆ, ಮಹಾಂತೇಶ್ ಹಿರೇಮಠ್, ಶೈನ್ ಟಾಮ್ ಚಾಕೋ , ಯೋಗಿ ಬಾಬು ಮುಂತಾದವರು ನಟಿಸಿದ್ದಾರೆ.











ಎಸ್ ಎಂ.
ನಾಡಿ ನ್ಯೂಸ್ ಗೆ ಶುಭವಾಗಲಿ. ಮಲೆನಾಡಿನ ಜನರ ಮೆಚ್ಚುಗೆ ಪಾತ್ರವಾಗಲಿ.