33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ

ನಿವೃತ್ತ ಸೈನಿಕ ಕೆ.ವಿ ಕೃಷ್ಣಮೂರ್ತಿಗೆ ರಿಪ್ಪನ್‌ಪೇಟೆಯಲ್ಲಿ ಅದ್ದೂರಿ ಸ್ವಾಗತ 20260608 210024 0000 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ
Spread the love
img 20260110 wa00007564275401884053567 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ

ಹೊಸನಗರ: ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಹೊಲಗಾರು ಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಮಾಲತಿ ಬಿ.ಆರ್ ಅವರ ನಿವೃತ್ತಿ ಪ್ರಯುಕ್ತ ಬೀಳ್ಕೊಡುಗೆ ಹಾಗೂ ಸೇವಾ ಅಭಿನಂದನಾ ಕಾರ್ಯಕ್ರಮವು ನಡೆಯಿತು.

ಆನಂದಪುರ 20260608 153202 00002378882172659635385 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಓ ಗಣೇಶ್ ಶಿಕ್ಷಕ ವೃತ್ತಿಯ ಮಹತ್ವ ಹಾಗೂ ಶಿಕ್ಷಕ-ವಿದ್ಯಾರ್ಥಿಗಳ ಬಾಂಧವ್ಯದ ಕುರಿತು ವಿವರಿಸಿ, ಶಿಕ್ಷಕಿ ಮಾಲತಿಯವರ ಸೇವಾ ಅನುಭವ ಅಪಾರ, ಅವರ ಮುಂದಿನ ನಿವೃತ್ತಿ ಜೀವನವು ಸುಖವಾಗಿರಲಿ ಎಂದು ಅವರು ಹೇಳಿದರು.

ಎಸ್‌ಡಿಎಂಸಿ ಅಧ್ಯಕ್ಷ ಅರುಣ್ ಅವರ ಅಧ್ಯಕ್ಷತೆ ವಹಿಸಿದ್ದರು.
ಶಾಲೆಯ ಎಸ್‌ಡಿಎಂಸಿ, ವಿದ್ಯಾರ್ಥಿಗಳು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವತಿಯಿಂದ ಶ್ರೀಮತಿ ಮಾಲತಿ ಬಿ.ಆರ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು ತಮ್ಮ 33 ವರ್ಷದ ಸೇವಾ ಅನುಭವವನ್ನು ಹಂಚಿಕೊಂಡು ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಸಾನ್ವಿ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಶಿಕ್ಷಕಿ ನಾಗರತ್ನ ನಿರೂಪಿಸಿ, ಸುಮಲತಾ ವಂದಿಸಿದರು.

ಈ ಸಂದರ್ಭದಲ್ಲಿ ಸಿ. ಆರ್, ಪಿ ಮಹೇಶ್ , ನಾಗಭೂಷಣ , ರೇಖಾ, ಮಹಾಬಲಗಿರಿ , ಸತೀಶ್ , ಕುಸುಮಾಕ್ಷಿ , ಸುಮಿತ್ರ, ಸುಮಲತಾ

ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪೋಷಕರು, ಹಳೆ ವಿದ್ಯಾರ್ಥಿಗಳು, ಶಿಕ್ಷಕರು, ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.

ವರದಿ: ಮಣಿಕಂಠ ಡಿ. ಎಸ್

img 20260608 wa00787034526020001950809 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ
img 20260604 wa00396562756818746813914 33 ವರ್ಷದ ಸೇವೆಗೆ ಗೌರವ: ಶಿಕ್ಷಕಿ ಮಾಲತಿ ಬಿ.ಆರ್ ಅವರಿಗೆ ಬೀಳ್ಕೊಡುಗೆ

Leave a Reply

Your email address will not be published. Required fields are marked *