ಇಂದಿನ ವೇಗದ ಜೀವನದಲ್ಲಿ ಪ್ರತಿಯೊಬ್ಬರು ಒಂದಲ್ಲ ಒಂದು ಸಮಸ್ಯೆ, ಕಿರಿಕಿರಿ ,ಒತ್ತಡಗಳು ಕಾಡುತ್ತಿರಬಹುದು ಅದರಿಂದ ನಮ್ಮ ನೆಮ್ಮದಿಯನ್ನು ಕಿತ್ತುಕೊಳ್ಳುತ್ತಿರುವುದು ಸ್ವತಃ ನಮಗೆ ಅರಿವಿಗೆ ಬಂದಿರಬಹುದು.
ಆದರೆ ,ದಿನವಿಡೀ ಎಷ್ಟೇ ಕಷ್ಟಗಳಿದ್ದರೂ ,ಪ್ರತಿಯೊಬ್ಬರಿಗೂ ರಾತ್ರಿ ನೆಮ್ಮದಿ ಸುಖ ನಿದ್ರೆಯ ಅವಶ್ಯಕತೆ ಇದ್ದೆ ಇದೆ. ಅದರಿಂದ ಮುಂದಿನ ದಿನವನ್ನು ಎದುರಿಸಲು ನಮಗೆ ಶಕ್ತಿ ಹೆಚ್ಚಾಗುತ್ತದೆ ಎಂದು ಅರಿಯೋಣ.
ದಿನದ ಸರ್ವ ಆತಂಕಗಳನ್ನು ಮನಸ್ಸಿನಲ್ಲೆ ಇಟ್ಟುಕೊಂಡು ಮಲಗುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ವ್ಯತಿರಿಕ್ತವಾಗಿ ಪರಿಣಾಮ ಬೀರುವ ಸಾಧ್ಯತೆಗಳು ಇವೆ. ಮಲಗುವ ಮುನ್ನ ಮನಸ್ಸನ್ನು ಶಾಂತವಾಗಿರಿಸಿಕೊಳ್ಳುವುದು ” ರಿಚಾರ್ಜ್ ” ಆದಂತೆ .ನಿಮ್ಮ ಕ್ರಿಯಾಶೀಲತೆಯನ್ನು ಹೆಚ್ಚಿಸುವುದಲ್ಲದೆ ,ಒತ್ತಡವನ್ನು ಕಡಿಮೆ ಮಾಡುತ್ತದೆ .
ನಾಳೆಯ ಹೊಸ ಸೂರ್ಯ ರಶ್ಮಿ ನಿಮಗಾಗಿ ಹೊಸ ಅವಕಾಶಗಳನ್ನು ಹೊತ್ತು ತರುತ್ತದೆ , ಹಾಗಾಗೀ ಚಿಂತಿಸದಿರಿ , ಈಗ ಎಲ್ಲವನ್ನೂ ಮರೆತು ಸುಖ ನಿದ್ರೆಗೆ ಜಾರಿ. ರಾಮ್ ರಾಮ್








Leave a Reply