ಹೊಸನಗರ: ತಾಲ್ಲೂಕಿನ ಗುಳ್ಳೆಕೊಪ್ಪ ಮೂಲದ ಉದ್ಯಮಿ ರವಿಕುಮಾರ್ ಎಸ್ ಅವರಿಗೆ ರಾಷ್ಟ್ರಮಟ್ಟದ ಬಿಸ್ನೆಸ್ ಎಕ್ಸಲೆಂಟ್ ಅವಾರ್ಡ್ National business excellent award –2026 ಲಭಿಸಿದೆ. ಮಾರ್ಚ್ 23, 2026ರಂದು ದೆಹಲಿಯಲ್ಲಿ ನಡೆದ ಎಂ.ಎಸ್.ಎಂ.ಇ MSME Chamber of Commerce and industry of India 2ನೇ ರಾಷ್ಟ್ರೀಯ ಮಟ್ಟದ ಬಿಸ್ನೆಸ್ ಎಕ್ಸಲೆಂಟ್ ಅವಾರ್ಡ್ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.
ಅಭಿವೃದ್ಧಿ ಕಂಟ್ರೋಲ್ ಬೆಂಗಳೂರು ಸಂಸ್ಥೆಯ CEO ಆಗಿರುವ ರವಿಕುಮಾರ್ ಎಸ್ ಹಾಗೂ ಸರಿತಾ ಆರ್ ಅವರಿಗೆ “ಮೇಕ್ ಇನ್ ಇಂಡಿಯಾ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇವರು ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದು, ತಮ್ಮ ಉದ್ಯಮದ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿ ಸಹ ಸಕ್ರಿಯರಾಗಿದ್ದಾರೆ.


ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡಾ. ಇಂದ್ರಜಿತ್ ಘೋಷ್, ಪದ್ಮಶ್ರೀ ಪುರಸ್ಕೃತ ಡಾ. ಕಾರ್ತಿಕೇಯ ಸಾರಾಭಾಯಿ ಹಾಗೂ ಡಾ. ಸಂದೀಪ್ ಪಾಂಡೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ಗೌರವಿಸಿದರು.

ಗುಳ್ಳೆಕೊಪ್ಪದಲ್ಲಿ ಜನಿಸಿ ಬೆಳೆದಿರುವ ರವಿಕುಮಾರ್ ಅವರು ತಮ್ಮ ಊರಿನ ಅಭಿವೃದ್ಧಿಗೆ ವಿಶೇಷ ಒತ್ತು ನೀಡುತ್ತಿದ್ದಾರೆ. ಪುರಪ್ಪೆಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಡೆಸ್ಕ್, ಕಂಪ್ಯೂಟರ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಒದಗಿಸಿರುವುದಲ್ಲದೆ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುತ್ತಿದ್ದಾರೆ. ಜೊತೆಗೆ ರಿಪ್ಪನ್‌ಪೇಟೆಯಲ್ಲಿ ರಕ್ತದಾನ ಶಿಬಿರಗಳ ಆಯೋಜನೆ ಸೇರಿದಂತೆ ಹಲವು ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬಡ ಮತ್ತು ಮಧ್ಯಮ ವರ್ಗದ ಜನರಿಗೆ ನೆರವು ನೀಡುವುದು, ವಿದ್ಯಾರ್ಥಿಗಳಿಗೆ ಶಿಕ್ಷಣ ಸಹಾಯ ಮಾಡುವುದು, ವೃದ್ಧಾಶ್ರಮಗಳಿಗೆ ಸಹಾಯ ನೀಡುವುದು ಸೇರಿದಂತೆ ಮಾನವೀಯ ಮೌಲ್ಯಗಳನ್ನು ಪಾಲಿಸಿಕೊಂಡು ಸಮಾಜ ಸೇವೆಯಲ್ಲಿ ತೊಡಗಿರುವ ಇವರ ಸಾಧನೆಗೆ ಸಂಸ್ಥೆಯ ಸಿಬ್ಬಂದಿ ಹಾಗೂ ಆತ್ಮೀಯ ವಲಯದಿಂದ ಅಭಿನಂದನೆಗಳು ವ್ಯಕ್ತವಾಗಿವೆ.
ಒಟ್ಟಾರೆ, ಹೊಸನಗರ ತಾಲ್ಲೂಕಿನ ಹೆಮ್ಮೆಯ ವ್ಯಕ್ತಿಯಾಗಿ ರವಿಕುಮಾರ್ ಎಸ್ ಸಮಾಜ ಮತ್ತು ಉದ್ಯಮ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.

















Leave a Reply