ಆನಂದಪುರದಲ್ಲಿ ಮಾರಿಕಾಂಬ ಜಾತ್ರೆ ಸಂಭ್ರಮ: ಭಾರಿ ಮಳೆಯಿಂದ ಸ್ವಲ್ಪ ಅಡಚಣೆ

IMG 20260316 WA0036 scaled ಆನಂದಪುರದಲ್ಲಿ ಮಾರಿಕಾಂಬ ಜಾತ್ರೆ ಸಂಭ್ರಮ: ಭಾರಿ ಮಳೆಯಿಂದ ಸ್ವಲ್ಪ ಅಡಚಣೆ
Spread the love

ಆನಂದಪುರ: ಈ ವರ್ಷದ ಕಡ್ಲೇ ಹಂಕ್ಲು ಮಾರಿಕಾಂಬ ಜಾತ್ರೆ ಅತ್ಯಂತ ಅದ್ದೂರಿಯಾಗಿ ನಡೆಯುತ್ತಿದ್ದು, ಪೆಂಡಾಲ್, ಲೈಟಿಂಗ್ ವ್ಯವಸ್ಥೆ ಹಾಗೂ ಅಂಗಡಿ ಮುಂಗಟ್ಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಜಾತ್ರೆಯ ಮೆರಗು ಹೆಚ್ಚಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಭಾನುವಾರ ಆನಂದಪುರದಲ್ಲಿ ನಡೆಯುತ್ತಿರುವ ಕಡ್ಲೇ ಹಂಕ್ಲು ಮಾರಿಕಾಂಬ ಜಾತ್ರೆಯಲ್ಲಿ ಭಾಗವಹಿಸಿ ತಾಯಿ ಮಾರಿಕಾಂಬ ದೇವಿಯ ದರ್ಶನ ಪಡೆದ ನಂತರ ಅವರು ಮಾತನಾಡಿದರು.

ಭಾನುವಾರ ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇತ್ತು. ಆದರೆ ಮಳೆ ಸುರಿದ ಕಾರಣ ಕೆಲವು ಅಡಚಣೆಗಳು ಉಂಟಾಗಿವೆ. ಜಾತ್ರೆಗೆ ಅಂಗಡಿ ಮುಂಗಟ್ಟುಗಳನ್ನು ಹಾಕಿದ ವ್ಯಾಪಾರಿಗಳಿಗೆ ಮಳೆಯಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಇನ್ನೂ ಸುರಿದ ಭಾರಿ ಮಳೆಯಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಾನಿ ಸಂಭವಿಸಿರುವ ಮಾಹಿತಿ ಕೂಡ ಲಭ್ಯವಾಗಿದೆ. ಮಳೆ ಬರುವುದು ಒಳ್ಳೆಯದೇ ಆದರೆ ಈ ರೀತಿಯಾಗಿ ಅಧಿಕ ಪ್ರಮಾಣದಲ್ಲಿ ಸುರಿದಿರುವುದು ವಿಷಾದಕರ ಸಂಗತಿ ಎಂದು ಹೇಳಿದರು

ಯಾರಿಗೂ ತೊಂದರೆ ಆಗದಂತೆ ಎಲ್ಲರಿಗೂ ಸುಖ, ಶಾಂತಿ ಮತ್ತು ನೆಮ್ಮದಿ ದೊರಕಲಿ. ತಾಯಿ ಮಾರಿಕಾಂಬ ದೇವಿ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು, ಮುಖಂಡರು ಹಾಗೂ ಜಾತ್ರಾ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *