ರಿಪ್ಪನ್ ಪೇಟೆ: ತೀರ್ಥಹಳ್ಳಿ ಎಳ್ಳಮವಾಸ್ಯೆ ಜಾತ್ರೆಯಲ್ಲಿ ಶ್ರೀ ಪರಶುರಾಮ ಕ್ಲಾಸಿಕ್ ಅವರ ವತಿಯಿಂದ ಶ್ರೀ ರಾಮೇಶ್ವರ ದೇವಸ್ಥಾನ ಜಾತ್ರಾ ಸಮಿತಿ ತೀರ್ಥಹಳ್ಳಿ ಇವರ ಸಹಭಾಗಿತ್ವದೊಂದಿಗೆ ಮತ್ತು ಆರ್.ಜಿ ಪಿಟ್ನೆಸ್ & ಕರ್ನಾಟಕ ಅಸೋಸಿಯೇಷನ್ ಆಫ್ ಬಾಡಿ ಬಿಲ್ಡರ್ಸ್ ಇವರ ನೇತೃತ್ವದಲ್ಲಿ ರಾಜ್ಯ ಮಟ್ಟದ ದೇಹ ದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿತ್ತು.
ರಾಜ್ಯದ ಬಹುತೇಕ ಜಿಲ್ಲೆಗಳಿಂದ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದರು.
ಅದರಲ್ಲಿ ರಿಪ್ಪನ್ ಪೇಟೆಯ ಕೆರೆಹಳ್ಳಿ ನಿವಾಸಿ ಗಣೇಶ್ ಎಸ್ ರಾವ್ ದೇಹಾದಾರ್ಢ್ಯ ಸ್ಪರ್ಧೆಯಲ್ಲಿ ಮಿಂಚಿದ್ದಾರೆ. ಟಾಪ್ 5 ಪ್ರಶಸ್ತಿಗಳಲ್ಲಿ ಪಂಚಮವನ್ನು ತಮ್ಮದಂತಾಗಿಸಿಕೊಂಡಿದ್ದಾರೆ.

ಅನೇಕ ವರ್ಷಗಳಿಂದ ನಿರಂತರವಾಗಿ ಹವ್ಯಾಸಿ ಫಿಟ್ನೆಸ್ ಮಾಸ್ಟರ್ ಆಗಿ ಸೇವೆಯನ್ನು ಸಲ್ಲಿಸುತ್ತಿದ್ದು. ರಾಜ್ಯದ ನಾನಾ ಭಾಗಗಳಲ್ಲಿ ನಡೆಯುವ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದು ಬಂದಿರುತ್ತಾರೆ.
ಈ ಹಿಂದೆ ನಡೆದ ಶಿವಮೊಗ್ಗ ದಸರಾ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿಜೇತರಾಗಿ MR.ಶಿವಮೊಗ್ಗ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ರಿಪ್ಪನ್ ಪೇಟೆಯ ಪ್ರತಿಭೆಗಳು ಇತ್ತಿಚೆಗೆ ರಾಜ್ಯಾದ್ಯಂತ ಸದ್ದು ಮಾಡುತ್ತಿರುವುದು ನಮ್ಮೂರಿನ ಹೆಮ್ಮೆಯ ಸಂಗತಿಯಾಗಿದೆ.















Leave a Reply