ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

Addaheading 20260913 092945 0000 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ
Spread the love
img 20260913 wa00031319258223216385459 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

ರಿಪ್ಪನ್‌ಪೇಟೆ: ಕೇವಲ 500 ರೂಪಾಯಿ ಯಿಂದ  ಆರಂಭಿಸಿದ ಉದ್ಯಮ ಇಂದು ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿದ್ದು, ಗ್ರಾಮೀಣ ಮಹಿಳೆಯೊಬ್ಬರ ಪರಿಶ್ರಮ, ಆತ್ಮವಿಶ್ವಾಸ ಹಾಗೂ ಸ್ವಾವಲಂಬನೆಯ ಯಶೋಗಾಥೆಗೆ ಸಾಕ್ಷಿಯಾಗಿದೆ.

  ರಿಪ್ಪನ್‌ಪೇಟೆ ಸಮೀಪದ ಚಿಕ್ಕಜೇನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆತಾರಿಗ ಗ್ರಾಮದ ಸುಮಾ ಸುರೇಶ್ ಅವರು ‘ಎಸ್.ಎಸ್. ಹೋಂ ಪ್ರಾಡಕ್ಟ್ಸ್’ ಹೆಸರಿನಲ್ಲಿ ಮನೆಯಲ್ಲೇ ಆರಂಭಿಸಿದ ಗೃಹೋದ್ಯಮವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ, ಇಂದು ಸುಮಾರು 15 ಬಗೆಯ ಆಹಾರ ಉತ್ಪನ್ನಗಳನ್ನು ತಯಾರಿಸುವ ಉದ್ಯಮವಾಗಿ ರೂಪಿಸಿದ್ದಾರೆ. ಅಲ್ಲದೆ, ಐವರು ಮಹಿಳೆಯರಿಗೆ ನೇರ ಉದ್ಯೋಗ ಕಲ್ಪಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಕೊಡುಗೆ ನೀಡುತ್ತಿದ್ದಾರೆ.



  ITI ಶಿಕ್ಷಣದೊಂದಿಗೆ BA ಪದವಿ ಪಡೆದಿರುವ ಸುಮಾ ಅವರು ವಿವಿಧೆಡೆ ಉದ್ಯೋಗ ಮಾಡಿದ ಅನುಭವ ಹೊಂದಿದ್ದಾರೆ.ಪತಿಯ ಉದ್ಯೋಗದ ನಿಮಿತ್ತ ಸುರೇಶ್ ಅವರೊಂದಿಗೆ 2019ರವರೆಗೆ ಉಡುಪಿಯಲ್ಲಿ ವಾಸವಿದ್ದು , ಕೊರೋನಾ ಕಾಲಘಟ್ಟದ ಬಳಿಕ ಕೋಟೆತಾರಿಗಕ್ಕೆ ಬಂದು  ಪತಿಯ ಸಹಕಾರದೊಂದಿಗೆ ತಮ್ಮ ಆಸಕ್ತಿಯನ್ನೇ ಉದ್ಯಮವಾಗಿ ಪರಿವರ್ತಿಸಿಕೊಂಡು ಮನೆಯಲ್ಲೇ ಆಹಾರ ಉತ್ಪನ್ನಗಳ ತಯಾರಿಕೆ ಆರಂಭಿಸಿದರು.

409595427146384275453373 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

  ಆರಂಭದಲ್ಲಿ ಕೇವಲ ಎರಡು ಉತ್ಪನ್ನಗಳೊಂದಿಗೆ ಶುರುವಾದ ಉದ್ಯಮ ಇಂದು 15ಕ್ಕೂ ಹೆಚ್ಚು ಉತ್ಪನ್ನಗಳವರೆಗೆ ವಿಸ್ತರಿಸಿದೆ. ಆರಂಭದ ದಿನಗಳಲ್ಲಿ ಪತಿ ಸುರೇಶ್ ಅವರೊಂದಿಗೆ ವಾಹನದಲ್ಲಿ ತೆರಳಿ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಂಗಡಿಗಳಿಗೆ ಉತ್ಪನ್ನಗಳನ್ನು ಪರಿಚಯಿಸಿ ಮಾರಾಟ ಮಾಡುತ್ತಿದ್ದರು. ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ ಉತ್ಪಾದನೆ, ಗುಣಮಟ್ಟ ಹಾಗೂ ಗ್ರಾಹಕರ ವಿಶ್ವಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದರು.

   ಹಳ್ಳಿಯಿಂದ ವಿದೇಶಕ್ಕೂ ತಲುಪಿದ ಉತ್ಪನ್ನಗಳು:
ಕೋಟೆತಾರಿಗದಂತಹ ಗ್ರಾಮೀಣ ಪ್ರದೇಶದಲ್ಲಿ ಮನೆಯಲ್ಲೇ ತಯಾರಾಗುವ ‘ಎಸ್.ಎಸ್. ಹೋಂ ಪ್ರಾಡಕ್ಟ್ಸ್’ (S.S HOME PRODUCT )ಉತ್ಪನ್ನಗಳು ಇದೀಗ ಸ್ಥಳೀಯ ಮಾರುಕಟ್ಟೆಯನ್ನಷ್ಟೇ ಸೀಮಿತವಾಗದೆ ವಿದೇಶಗಳಿಗೂ ತಲುಪಿವೆ. ಆರೋಗ್ಯಕರ ಹಾಗೂ ರಾಸಾಯನಿಕ ಮುಕ್ತ ಆಹಾರ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವುದು ತಮ್ಮ ಪ್ರಮುಖ ಉದ್ದೇಶ ಎನ್ನುತ್ತಾರೆ.

img 20260913 wa00029184700306654310395 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

  ಬಾಣಂತಿ ಖಾರ ಹಾಗೂ ಬಾಣಂತಿ ಕಿಟ್‌ ಸೇರಿದಂತೆ ನಿಪ್ಪಟ್ಟು, ಚಕ್ಕುಲಿ, ಕೋಡುಬಳೆ, ರವೆ ಉಂಡೆ, ಹೋಳಿಗೆ, ಶಂಕರಪೋಳೆ, ಕಷಾಯ ಪುಡಿ, ಸಾಂಬಾರು ಪುಡಿ, ತಿಳಿಸಾರಿನ ಪುಡಿ ಸೇರಿದಂತೆ ಸುಮಾರು 15 ಬಗೆಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಸಾಂಪ್ರದಾಯಿಕ ಆಹಾರ ಪದಾರ್ಥಗಳಿಗೆ ಆಧುನಿಕ ಮಾರುಕಟ್ಟೆಯ ರೂಪ ನೀಡಿ ಗ್ರಾಹಕರಿಗೆ ತಲುಪಿಸುತ್ತಿರುವುದು ಉದ್ಯಮದ ವಿಶೇಷತೆಯಾಗಿದೆ.

ಪಿಎಂಎಫ್‌ಎಂಇ ಯೋಜನೆಯ ನೆರವು:
ಗ್ರಾಮೀಣ ಭಾಗದ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಉತ್ತೇಜನ ನೀಡುವ ಪಿಎಂಎಫ್‌ಎಂಇ ಯೋಜನೆಯಡಿ ದೊರೆತ ಸಾಲದ ಸಹಾಯವು ಉದ್ಯಮವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ನೆರವಾಯಿತು ಎಂದು ಸುಮಾ ಹೇಳಿ ಮೋದಿ ಅವರ ಯೋಜನೆಯನ್ನು ಸ್ಮರಿಸಿದ್ದಾರೆ.

ಮಕ್ಕಳಿಗೂ ವ್ಯಾವಹಾರಿಕ ಜ್ಞಾನದ ಪಾಠ:
ಉದ್ಯಮದ ಜೊತೆಗೆ ಮಕ್ಕಳಾದ ಸುಮಿತ್ ಮತ್ತು ಸಮನ್ವಿತ ಅವರಲ್ಲೂ ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರದೊಂದಿಗೆ  ದುಡಿಮೆಯ ಮಹತ್ವ ಹಾಗೂ ವ್ಯಾವಹಾರಿಕ ಜ್ಞಾನ ಬೆಳೆಸುವ ಉದ್ದೇಶವನ್ನು ಸುಮಾ ಹೊಂದಿದ್ದಾರೆ. ಮಕ್ಕಳ ವಯಸ್ಸಿಗೆ ತಕ್ಕಂತೆ ಉದ್ಯಮದ ಸಣ್ಣಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಂಡು, ಪ್ರತಿಯಾಗಿ ದಿನಕ್ಕೆ ₹20 ಸಂಬಳ ನೀಡುವ ಮೂಲಕ ದುಡಿಮೆಯ ಮೌಲ್ಯ, ಹಣದ ಬೆಲೆ ಹಾಗೂ ವ್ಯವಹಾರದ ಮೂಲಭೂತ ಅರಿವು ಮೂಡಿಸುತ್ತಿದ್ದಾರೆ.

ಪತಿ ಸುರೇಶ್, ಮಕ್ಕಳು ಹಾಗೂ ಕುಟುಂಬದ ಬೆಂಬಲದೊಂದಿಗೆ ಉದ್ಯಮವನ್ನು ಬೆಳೆಸಿರುವ ಸುಮಾ ಅವರ ಪಯಣ, ‘ಉದ್ಯೋಗಕ್ಕಾಗಿ ನಗರಗಳತ್ತ ಮುಖ ಮಾಡುವ ಬದಲು, ಅವಕಾಶವನ್ನು ತಾವೇ ಸೃಷ್ಟಿಸಿಕೊಳ್ಳಬಹುದು’ ಎಂಬುದಕ್ಕೆ ಮಾದರಿಯಾಗಿದೆ.

500ರಿಂದ ಆರಂಭವಾದ ಈ ಸಣ್ಣ ಪ್ರಯತ್ನ ಇಂದು ಹಲವು ಕುಟುಂಬಗಳಿಗೆ ಆದಾಯದ ಮೂಲವಾಗಿದ್ದು, ಗ್ರಾಮೀಣ ಮಹಿಳಾ ಸ್ವಾವಲಂಬನೆಯ ಪ್ರೇರಣಾದಾಯಕ ಯಶೋಗಾಥೆಯಾಗಿ ಗುರುತಿಸಿಕೊಂಡಿದೆ.

image editor output image 445960644 17892727213872373064481817015166 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

ಚಿಕ್ಕದಾಗಿ  ಆರಂಭಿಸಿದ ಉದ್ಯಮ ಇಂದು 15ಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸುವ ಮಟ್ಟಕ್ಕೆ ಬೆಳೆದಿರುವುದು ಸಂತಸ ತಂದಿದೆ. ಪತಿ ಹಾಗೂ ಕುಟುಂಬದ ಸಹಕಾರ, ಗ್ರಾಹಕರ ವಿಶ್ವಾಸ ಮತ್ತು ಗುಣಮಟ್ಟಕ್ಕೆ ನೀಡಿದ ಆದ್ಯತೆಯೇ ನಮ್ಮ ಯಶಸ್ಸಿನ ಕಾರಣ. ಗ್ರಾಮೀಣ ಮಹಿಳೆಯರು ತಮ್ಮ ಕೌಶಲ್ಯದಿಂದ ಸ್ವಂತ ಉದ್ಯಮ ಆರಂಭಿಸಿ ಸ್ವಾವಲಂಬಿಗಳಾಗಬೇಕು ಎಂಬುದು ನನ್ನ ಆಶಯ.
– ಸುಮಾಸುರೇಶ್, ಮಹಿಳಾ ಉದ್ಯಮಿ

image editor output image 1590119251 17892728814415795504356097674037 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ
file 000000003f5c8208a0b120fec3430d9d5646484094122607312 ರಿಪ್ಪನ್ ಪೇಟೆ:500 ರೂಪಾಯಿ ಯಿಂದ ಆರಂಭವಾದ ಕನಸು; ಇಂದು ಲಕ್ಷಾಂತರ ರೂಪಾಯಿ ವಹಿವಾಟು|ಗ್ರಾಮೀಣ ಮಹಿಳೆಯ ಯಶೋಗಾಥೆ

Leave a Reply

Your email address will not be published. Required fields are marked *

error: Content is protected !!