ಫೆ.7 ಕ್ಕೆ ರಿಪ್ಪನ್ ಪೇಟೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

NAADI NEWS 20260205 121144 0000 ಫೆ.7 ಕ್ಕೆ ರಿಪ್ಪನ್ ಪೇಟೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ
Spread the love

ರಿಪ್ಪನ್ ಪೇಟೆ : ಪಟ್ಟಣದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀರಾಮ ಸಭಾ ಭವನದಲ್ಲಿ  ಇದೆ ಬರುವ ಫೆ.7 ಶನಿವಾರ, ಬೆಳಿಗ್ಗೆ 09-00 ರಿಂದ 1-00ರವರೆಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರವು  ನಡೆಯಲಿದೆ.

   ರೋಟರಿ ಕ್ಲಬ್ ಮತ್ತು ಗೌಡ ಸಾರಸ್ವತ ಬ್ರಾಹ್ಮಣ ಸಮಾಜ, ಬಸವನ ಬ್ಯಾಣದ ಅಯ್ಯಪ್ಪ ಮೆಮೋರಿಯಲ್ ಟ್ರಸ್ಟ್, ಶ್ರೀ ವ್ಯಾಸ ಮಹರ್ಷಿ ಗುರುಕುಲ ಮತ್ತು  ಸಂಘ – ಸಂಸ್ಥೆಗಳು, ರಿಪ್ಪನ್ ಪೇಟೆ ಹಾಗೂ ರೋಟರಿ ರಕ್ತ ನಿಧಿ, ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ.

img 20260204 wa00041512215033010815943 ಫೆ.7 ಕ್ಕೆ ರಿಪ್ಪನ್ ಪೇಟೆಯಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

  ಅದೇ ವೇಳೆಯಲ್ಲಿ ಅದೇ ಸ್ಥಳದಲ್ಲಿ ರೋಬೋಟ್ ತಂತ್ರಜ್ಞಾನ ದಿಂದ ಮೊಣಕಾಲಿನ ಬದಲಿ ಶಸ್ತ್ರ ಚಿಕಿತ್ಸೆ ಮತ್ತು ಸ್ಪೋರ್ಟ್ಸ್ ಇಂಜುರಿ ಕುರಿತಾದ ತಪಾಸಣಾ ಶಿಬಿರವು ಇರುತ್ತದೆ.

ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕೆಂದು ರೋಟರಿ ಕ್ಲಬ್ ರಿಪ್ಪನ್ ಪೇಟೆ ಕೋರಿದೆ.


Spread the love

Leave a Reply

Your email address will not be published. Required fields are marked *