ರಿಪ್ಪನ್ ಪೇಟೆ: ಸಮೀಪದ ತಳಲೆ ಗ್ರಾಮದಲ್ಲಿ ಶ್ರೀ ದುರ್ಗಾ ಪರಮೇಶ್ವರಿ ವಾಲಿಬಾಲ್ ಕ್ಲಬ್ ವತಿಯಿಂದ 3ನೇ ವರ್ಷದ ಗ್ರಾಮಾಂತರ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ನಿನ್ನೆ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ ಯುವಕರು ಕ್ರೀಡಾಸಕ್ತಿಯಿಂದ ಸಕ್ರಿಯ ,ಕ್ರೀಯಾಶೀಲರಾಗಿರಲು ಸಾಧ್ಯ ,ದೇಹದ ಜಡತ್ವ ಹೊಗಲಾಡಿಸಿ ಸದಾ ಉತ್ಸಾಹ ದಿಂದಿರಲು ಕ್ರೀಡೆ ನಮಗೆ ಶಕ್ತಿ ನೀಡುತ್ತದೆ. ಯುವಕರೇ ಈ ದೇಶದ ಭವಿಷ್ಯ, ತಳಲೆ ಗ್ರಾಮದ ಯುವಕರ ವಾಲಿಬಾಲ್ ಟೂರ್ನಮೆಂಟ್ ಅತ್ಯುನ್ನತವಾಗಿ ಆಯೋಜಿಸಿದ್ದಾರೆ ನಿಮ್ಮ ಉತ್ಸಾಹ ನನಗೆ ತುಂಬಾ ಖುಷಿ ತಂದಿದೆ ಎಂದರು.
ಈ ಪಂದ್ಯಾವಳಿಯ ಅಂಗವಾಗಿ ಸುತ್ತಮುತ್ತಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ,
ಶ್ರೀ ವೀರಭದ್ರಪ್ಪ – ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿಗಳು
ಶ್ರೀ ಗಣಪತಿ – ನಿವೃತ್ತ ಶಿಕ್ಷಕರು
ಶ್ರೀ ಭೋಜಪ್ಪ ಬಿ. – ರಾಷ್ಟ್ರ ಪ್ರಶಸ್ತಿ ಪುರಸ್ಕೃತರು
ಶ್ರೀಮತಿ ಶಿಲ್ಪಾ – ಜಿಲ್ಲಾ ಅತ್ಯುತ್ತಮ ಶಿಕ್ಷಕಿ
ಶ್ರೀ ಗಂಗಾಧರ – ಮೆಸ್ಕಾಂ ನೌಕರರು
ಕು. ಸೊನಾಲಿ – ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು
ಕು.ಆಯಿಶ್ರೀ – ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಶ್ರೇಯಸ್ ಚೂಡಾಮಣಿ ವಹಿಸಿದ್ದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪಿ.ಎಸ್.ಐ ರಾಜು ರೆಡ್ಡಿ, ಗ್ರಾ.ಪಂ ಸದಸ್ಯರಾದ ಶ್ರೀಮತಿ ನಾಗರತ್ನ ಶ್ಯಾಮಸುಂದರ್, ಶ್ರೀ ವಿಶುಕುಮಾರ್, ಶ್ರೀ ದಿನೇಶ್ ಗೌಡ್ರು ಹೊಳೇನಕೊಪ್ಪ, ಶ್ರೀ ದೇವರಾಜ್ ಮಳವಳ್ಳಿ, ಶ್ರೀ ಚೇತನ್ ವರನಹೊಂಡ,ಸಾಮಾಜಿಕ ಕಾರ್ಯಕರ್ತ ಕಗ್ಗಲಿ ಲಿಂಗಪ್ಪ, ಯೂತ್ ಕಾಂಗ್ರೇಸ್ ಅಧ್ಯಕ್ಷ ವಿಜಯ ಮಳವಳ್ಳಿ ,ಶ್ರೀಧರ,ಪ್ರವೀಣ್ ಸುಳಗೋಡು,ಬೇಕರಿ ಸುರೇಶ್,ಮುಖಂಡರಾದ ಎನ್ ಚಂದ್ರೇಶ್ ಇನ್ನಿತರರಿದ್ದರು.
ಅನೇಕ ಭಾಗಗಳಿಂದ ವಾಲಿಬಾಲ್ ತಂಡಗಳು ಉತ್ಸಾಹ ದಿಂದ ಭಾಗವಹಿಸಿದ್ದವು. ಪಂದ್ಯಾವಳಿಯನ್ನು ಯಶಸ್ವಿಯಾಗಿ ನಡೆಸಿದ ವಾಲಿಬಾಲ್ ಕ್ಲಬ್ ಕಾರ್ಯಕಾರಿ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕ್ಲಬ್‌ನ ಉಪಾಧ್ಯಕ್ಷರಾಗಿ ಆಸೀಫ್ ಮೂಗುಡ್ತಿ, ಕಾರ್ಯದರ್ಶಿಯಾಗಿ ಶ್ರೀ ವೆಂಕಟೇಶ್, ಖಜಾಂಚಿಯಾಗಿ ಶ್ರೀ ರಾಕೇಶ್ (ಕಗ್ಗಲಿ) ,ಶ್ರೀ ಅರುಣ್, ವಿಜಯ್ ರಾಜ್ ಮತ್ತು ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ಸಮಸ್ಥ ಸದಸ್ಯರು ಮತ್ತು ಗ್ರಾಮಸ್ಥರ ಸಹಕಾರ ದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.












Leave a Reply