ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ ಘೋಷಿಸಲು ಆಗ್ರಹಿಸಿ ತಹಶೀಲ್ದಾರರಿಗೆ  ಗ್ರಾಮಸ್ಥರ ಮನವಿ

D 20 RPT 3P ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ ಘೋಷಿಸಲು ಆಗ್ರಹಿಸಿ ತಹಶೀಲ್ದಾರರಿಗೆ  ಗ್ರಾಮಸ್ಥರ ಮನವಿ
Spread the love

ರಿಪ್ಪನ್‌ಪೇಟೆ: ಮುಂಬರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿ ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಸರೂರು  ಭಾಗದ ಚುನಾವಣೆ ಸ್ಪರ್ಧೆಗೆ ಪರಿಶಿಷ್ಟ ಜನಾಂಗಕ್ಕೆ ಮೀಸಲಾತಿ ಘೋಷಿಸುವಂತೆ ಒತ್ತಾಯಿಸಿ ಹೊಸನಗರ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿ ಭರತ್‌ರಾಜ್ ಇವರಿಗೆ ಮಸರೂರು ಗ್ರಾಮದ  ಪರಿಶಿಷ್ಟ ಜನಾಂಗದ ಮುಖಂಡರು ಮನವಿ ಮೂಲಕ ಒತ್ತಾಯಿಸಿದ್ದಾರೆ.


  ಕೆಂಚನಾಲ ಗ್ರಾಮ ಪಂಚಾಯಿತ್ ವ್ಯಾಪ್ತಿಯ ಮಸರೂರು ಗ್ರಾಮದ ಮತದಾರರಾಗಿದ್ದು ಪರಿಶಿಷ್ಟ ಜನಾಂಗಕ್ಕೆ ಸೇರಿದವರಾಗಿರುತ್ತೇವೆ.ಕ್ಷೇತ್ರ ಸಂಖ್ಯೆ 117 ಸಾಗರ ವಿಧಾನಸಭಾ ವಿಭಾಗದ ಸಂಖ್ಯೆ 192 ರ ಮಸರೂರು ಗ್ರಾಮದಲ್ಲಿ ಜನಸಂಖ್ಯೆ 640 ಇರುತ್ತದೆ. ಇದರಲ್ಲಿ ಶೇಕಡಾ ೪೦ ರಷ್ಟು ಪರಿಶಿಷ್ಟ ಜಾತಿಯವರಾಗಿದ್ದು 190 ಮತದಾರರು ಇರುತ್ತೇವೆ.ಹೊಸನಗರ ತಾಲ್ಲೂಕಿನ ಕೆಂಚನಾಲ ಗ್ರಾಮ ಪಂಚಾಯಿತ್ ಮಸರೂರು ಗ್ರಾಮದಲ್ಲಿ ಹೆಚ್ಚಿನ ಪರಿಶಿಷ್ಟ ಜಾತಿಯವರು ಇರುತ್ತೇವೆ.ಹೊಸನಗರ ತಾಲ್ಲೂಕಿನಲ್ಲಿ ಬರುವ ಪುರುಷ ಪರಿಶಿಷ್ಟ ಜಾತಿ ಮೀಸಲಾತಿಯ ನಮ್ಮ  ಮಸರೂರು ಗ್ರಾಮಕ್ಕೆ ಈವರೆಗೂ ದೊರಕಿರುವುದಿಲ್ಲ.ಗ್ರಾಮದಲ್ಲಿ ಮತದಾರರ ಸಂಖ್ಯೆ  ಹೆಚ್ಚು ಇರುವುದರಿಂದ ಈ ಭಾರಿಯಲ್ಲಿ ಮಸರೂರು ವಾರ್ಡ್ಗೆ ಪರಿಶಿಷ್ಟ ಜನಾಂಗದವರಿಗೆ ಮೀಸಲಾತಿಯನ್ನು ನೀಡುವ ಮೂಲಕ ರಾಜಕೀಯ ಮುನ್ನಲೆಗೆ ತರಬೇಕೆಂದು ವಿವರಿಸಿ ಮನವಿಯನ್ನು ಸಲ್ಲಿಸಿದ್ದಾರೆ.


ನಮ್ಮ ಮನವಿಯನ್ನು ಪುರಸ್ಕರಿಸದೆ ಇದ್ದಲ್ಲಿ ನಾವುಗಳು ನ್ಯಾಯಾಂಗದ ಮೊರೆ ಹೋಗುವುದು ಅನಿರ್ವಾಯವೆಂದು ಸಹ ಮನವಿಯ ಜೊತೆ ಮತದಾರರ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಯವರ ಅಂಕೆ ಸಂಖ್ಯೆಯನ್ನು ಗುರುತಿಸಿಕೊಂಡು ಗ್ರಾಮಸ್ಥರು ಹೊಸನಗರ ತಹಶೀಲ್ದಾರ್ ಹಾಗೂ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.


ಈ ಸಂದರ್ಭದಲ್ಲಿ ಹುಲಿಯಪ್ಪ,ರಾಘವೇಂದ್ರ,ಎಂ.ನಾಗೇಂದ್ರ,ಸತೀಶ, ಮಧು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

#hosanagara #shivamogga #rippanpete


Spread the love

Leave a Reply

Your email address will not be published. Required fields are marked *