ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

20260223 135134 scaled ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 
Spread the love

ರಾಮ್ ಎಂದರೆ ಕಾಂಗ್ರೆಸ್ ಸಹಿಸಿಕೊಳ್ಳಲ್ಲ ಹರಿಕೃಷ್ಣ ಆಕ್ರೋಶ | ವಿಬಿ ಜಿ ರಾಮ್ ಜಿ ಮಾಹಿತಿ ಕಾರ್ಯಾಗಾರ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 px 20260223 203118 00006956261228963310619 ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

ರಿಪ್ಪನ್ ಪೇಟೆ: ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಮನ್ರೇಗಾ ಬದಲಾಗಿ ವಿಬಿ- ಜಿ ರಾಮ್ – ಜಿ (VB-G RAM G) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಗ್ರಾಮೀಣ ಜನತೆಗೆ ಉದ್ಯೋಗ ಭರವಸೆ ನೀಡುವ ಜೊತೆಗೆ, ಶಾಶ್ವತ ಜೀವನೋಪಾಯ ನಿರ್ಮಾಣಕ್ಕೂ ಒತ್ತು ನೀಡುತ್ತದೆ. “ವಿಕಸಿತ ಭಾರತ”ದ ದಿಸೆಯಲ್ಲಿ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.

 ರಿಪ್ಪನ್ ಪೇಟೆಯಲ್ಲಿ ನಡೆದ ಬಿಜೆಪಿ ಹೊಸನಗರ ಮಂಡಲದ ವತಿಯಿಂದ ನಡೆದ ವಿಬಿ-ಜಿ ರಾಮ್ ಜಿ  ಯೋಜನಾ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

 ವಿಬಿ-ಜಿ -ರಾಮ ಜಿ ಕುರಿತು ಗ್ರಾಮೀಣ ಭಾಗದ ಜನರಲ್ಲಿ ಕಾಂಗ್ರೆಸ್ ಮಾಡುತ್ತಿರುವ ಅಪಪ್ರಚಾರದ ಕುರಿತು ಮಾಹಿತಿಯನ್ನು ನೀಡಿ ಸತ್ಯವನ್ನು ಮತ್ತು ಯೋಜನೆಯ ಲಾಭವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯ ಎಂದರು.  ಈ ಭಾಗದಲ್ಲಿ ಬಿಜೆಪಿ ಮಾಡಿದಷ್ಟು ಅಭಿವೃದ್ಧಿ ಕಾಮಗಾರಿಗಳು ಇನ್ಯಾರು ಮಾಡಿಲ್ಲ ನಾವು ಮಾಡಿದ ಕೆಲಸಗಳನ್ನೇ ನಾನೇ ಮಾಡಿಕೊಂಡೆ ಎಂದು ಫ್ಲೆಕ್ಸ್ ಗಳನ್ನು ಹಾಕಿಕೊಂಡು ಕಾಮಗಾರಿ ಪ್ರಗತಿಯಲ್ಲಿದೆ ಎಂದು ಈಗ ಅಧಿಕಾರದಲ್ಲಿದ್ದವರು ಹೇಳಿಕೊಳ್ಳುತ್ತಿದ್ದಾರೆ. ರಿಪ್ಪನ್ ಪೇಟೆ ಸುಂದರವಾಗಿ ಕಾಣಬೇಕೆಂದು ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆ ರೂಪಿಸಿ ಹಣ ಬಿಡುಗಡೆಗೊಳಿಸಿ ನಾಲ್ಕು ರಸ್ತೆ ಚೆಂದಗಾಣಿಸಲು ಶ್ರಮ ವಹಿಸಿದ್ದೆವು ಎಂದು ಸ್ಮರಿಸಿದರು. ನಾವು ದುಡಿದ ಹಣದಲ್ಲಿ ದಾನ ಮಾಡುತ್ತೇವೆ, ಆದರೆ ಕೆಲವರು ಹಣ ಹೊಡೆದು ಹಣ ನೀಡುತ್ತಾರೆ ಅಂತಹವರನ್ನು ಕೊಡುಗೈದಾನಿ ಎಂದು  ಬಣ್ಣಿಸಲಾಗುತ್ತಿದೆ ಎಂದರು.

 ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ವಿಬಿ-ಜಿ ರಾಮ್  ಜಿ ಯೋಜನೆಯಿಂದ ಉದ್ಯೋಗದ ಗ್ಯಾರೆಂಟಿ ದೊರಕಿದೆ 100 ದಿನಗಳು ಇದ್ದ ಭರವಸೆಯನ್ನು 125 ದಿನಗಳವರೆಗೆ ವಿಸ್ತರಿಸಲಾಗಿದೆ. 60:40 ರೀತಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಣಕಾಸು ಹಂಚಿಕೊಳ್ಳಬೇಕು ಹಾಗಾಗಿ ಕಾಂಗ್ರೆಸ್ ತಗಾದೆ ಎತ್ತಿದೆ ಎಂದರು. ಗ್ರಾಮೀಣ ಕುಟುಂಬಗಳಿಗೆ ಉದ್ಯೋಗ ದೊರಕಿಸುವ ಕಾರ್ಯದಲ್ಲಿ ಈ ಯೋಜನೆ ಮಹತ್ವ ಪಡೆದಿದೆ ಎಂದು ಅಭಿಪ್ರಾಯಪಟ್ಟರು.

20260223 1207314409249220395973445 ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

 ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರಿಕೃಷ್ಣ ಮಾತನಾಡಿ ರಾಮ ಎಂದರೆ ಕಾಂಗ್ರೆಸ್ಸಿಗೆ ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಹಾಗಾಗಿ ವಿಬಿ ಜಿ ರಾಮ್ ಜಿ ಯೋಜನೆಯನ್ನು ಕೂಡ ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ವಿಕೇಂದ್ರೀಕರಣ ವ್ಯವಸ್ಥೆಯನ್ನು ಒಪ್ಪುವುದಿಲ್ಲ ಏಕೆಂದರೆ ಈಗ ನೇರ ಗ್ರಾಮ ಪಂಚಾಯಿತಿಯು ಅನುದಾನದ ಅಧಿಕಾರವನ್ನು ಹೊಂದಿದೆ ಈ ಹಿಂದೆ ಜಿಲ್ಲಾ ಪಂಚಾಯತ್ ನಲ್ಲಿ  ಪ್ರಭಾವಗಳನ್ನು ಬಳಸಿ ಹಣ ಬಿಡುಗಡೆ ಮಾಡಿಸಿಕೊಳ್ಳಬೇಕಾಗಿತ್ತು ಒಟ್ಟಾರೆ ಅಧಿಕಾರ ಅವರ ಕೈಯಲ್ಲಿ ಇರಬೇಕೆಂದು ಹಂಬಲ ಅವರದ್ದು  ಆದರೆ ಈಗ ಆ ಚಿಂತೆ ಇಲ್ಲ ಎಂದರು. ಅಂಬೇಡ್ಕರ್ ಹೆಸರು ಹೇಳಿಕೊಂಡು ರಾಜಕೀಯ ಮಾಡುವವರು ಅಂಬೇಡ್ಕರ್ ರಚಿಸಿದ ಸಂವಿಧಾನಕ್ಕೆ ಗೌರವ ಕೊಡುವ ಸಂಯಮವು ಕಾಂಗ್ರೆಸ್ಸಿಗೆ ಇಲ್ಲ, ಮಹಾತ್ಮ ಗಾಂಧಿಯವರ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆದರು ಆದರೆ ಗಾಂಧಿ ಪ್ರೀತಿಸಿದ ಗೌರವಿಸಿದ ರಾಮನನ್ನು ದ್ವೇಷಿಸಿದರು, ಗಾಂಧಿಯವರ ರಾಮರಾಜ್ಯದ ಕಲ್ಪನೆಯ ವಿರುದ್ಧವಾಗಿ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಅವರನ್ನು ಬಳಸಿಕೊಂಡರು.

“ಕಾಂಗ್ರೆಸ್ ಪಕ್ಷವು ದೇಶದ ಅಭಿವೃದ್ಧಿಗೆ ಅಡ್ಡಿಯಾಗುವ ರಾಜಕೀಯ ನಡೆಸುತ್ತಿದೆ. ಭಾರತ ಮುನ್ನಡೆಯಲು ಕೈಗೊಳ್ಳುವ ಪ್ರತಿಯೊಂದು ಯೋಜನೆಯನ್ನೂ ವಿರೋಧಿಸುವ ಮನೋಭಾವವೇ ಅವರ ಮೂಲ ಸ್ವಭಾವವಾಗಿದೆ. ರಾಷ್ಟ್ರ ಹಿತಕ್ಕಿಂತ ರಾಜಕೀಯ ಲಾಭವೇ ಅವರಿಗೆ ಮುಖ್ಯ,”
 -ಹರಿಕೃಷ್ಣ,ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಬಿಜೆಪಿ

ಕೇಂದ್ರ ಸರಕಾರ ಎಂತಹ ಒಳ್ಳೆಯ ಯೋಜನೆಯನ್ನು ತಂದರು ಸಹ ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವಂತಹ ಕೆಲಸವನ್ನು ಮಾಡುತ್ತದೆ ಅವರಿಗೆ ಭಾರತದ ಅಭಿವೃದ್ಧಿಯನ್ನು ಸಹಿಸಲು ಸಾಧ್ಯವಿಲ್ಲ, ಕಾಂಗ್ರೆಸ್ ಒಂದು ಭಾರತ ವಿರೋಧಿ ಮಾನಸಿಕತೆ ಹೊಂದಿದೆ ಎಂದು ಮೊನ್ನೆ ಅವರು ನಡೆಸಿದ ಅರೆ ನಗ್ನ ಪ್ರತಿಭಟನೆಯು ಮತ್ತೊಂದು ಸಾಕ್ಷಿ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

20260223 1353559133986255577471221 ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

ಮಂಡಲದ ಅಧ್ಯಕ್ಷ ಎನ್ ಸತೀಶ್ ಮಾತನಾಡಿ ಪಕ್ಷ ಸಂಘಟನೆಯ ಕುರಿತು ಈ ಯೋಜನೆಯ ಲಾಭವನ್ನು ಜನಸಾಮಾನ್ಯರಿಗೆ ತಿಳಿಸಲು ಕಾರ್ಯಕರ್ತರಿಗೆ ಕರೆ ಕೊಟ್ಟರು.

20260223 1359163088550741061366065 ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 
ಸಭೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪನವರು ಬಿಜೆಪಿಯ ನೂತನ ಮಹಾಶಕ್ತಿ ಕೇಂದ್ರ  ಅಧ್ಯಕ್ಷ ಸುಂದರೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಮತ್ತು ಬುಕ್ಕಿವರೆ ರಾಜೇಶ್ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.

ಕೆರೆಹಳ್ಳಿ ಹೋಬಳಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಸುಂದರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಸಿದ್ದಲಿಂಗಪ್ಪ ಉಪಸ್ಥಿತರಿದ್ದರು, ಬಿಜೆಪಿ ಮಂಡಲ ಪ್ರಭಾರಿ ಮಹೇಶ್, ಮಂಡಲ ಅಧ್ಯಕ್ಷರು ಎನ್ ಸತೀಶ್, ಎಂ.ಎನ್. ಸುಧಾಕರ, ಎ.ಟಿ ನಾಗರತ್ನಮ್ಮ,ಬೆಳ್ಳೂರು ತಿಮ್ಮಪ್ಪ  ಹಾಜರಿದ್ದರು.

 ಆರ್.ಟಿ ಗೋಪಾಲ ಪ್ರಾಸ್ತಾವಿಕ ಮಾತನಾಡಿದರು, ಕುಮುದಾ ಸಂಗಡಿಗರು ಪ್ರಾರ್ಥಿಸಿದರು, ಪ್ರಧಾನ ಕಾರ್ಯದರ್ಶಿ ಜಿ ಡಿ ಮಲ್ಲಿಕಾರ್ಜುನ ನಿರೂಪಿಸಿದರು, ಅರುಣ್ ಕಟ್ಟೆ ವಂದಿಸಿದರು

screenshot 20260223 203616 whatsapp8487334543267347121 ವಿಕಸಿತ ಭಾರತ ಬಿಜೆಪಿಯ ಕನಸು : ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ 

ಮುಖಂಡರಾದ ಆರ್. ರಾಘವೇಂದ್ರ, ನಾಗಾರ್ಜುನ ಸ್ವಾಮಿ, ಮೆಣಸೆ ಆನಂದ, ಕುಷನ್ ದೇವರಾಜ್,ಯೋಗೇಂದ್ರ ಕೊಳವಂಕ,ಮುರುಳಿ, ಸುಧೀಂದ್ರ ಪೂಜಾರಿ, ಓಮಿನಿ ಸುಧೀರ, ದೇವೇಂದ್ರಪ್ಪ ಗೌಡರು, ಕಗ್ಗಲಿ ಲಿಂಗಪ್ಪ, ಯೋಗೇಂದ್ರಪ್ಪಗೌಡರು,ರಾಮಚಂದ್ರ, ಮಂಜುನಾಥ ಗವಟೂರು, ಪ್ರದೀಪ್ ಗವಟೂರು, ಹೂವಪ್ಪ ಗವಟೂರು, ಕೇತಾರ್ಜಿ ರಾವ್, ಮಂಜುನಾಥ ಆಚಾರ್, ಆಟೋ ರಾಘು, ರಾಘವೇಂದ್ರ, ಮಂಜೋಜಿ ರಾವ್, ಮಸರೂರು ಉಮೇಶ್, ಮಹೇಶ್,ಸುರೇಶ, ಪಿ.ರಮೇಶ್,ಗಣೇಶ್,ಪವನ್, ಸಂತೋಷ ಮತ್ತು ಮಹಿಳಾ ಪ್ರಮುಖರಾದ ರೇಖಾ ರವಿ, ಮಂಜುಳಾ ಕೇತಾರ್ಜಿ, ನಾಗರತ್ನ ದೇವರಾಜ್,ದಾನಮ್ಮ ಮತ್ತು ಇತರರಿದ್ದರು.


Spread the love

Leave a Reply

Your email address will not be published. Required fields are marked *