ಹೊಸನಗರ: ಹೊಸನಗರ ತಾಲ್ಲೂಕಿನಲ್ಲಿರುವ ಬಡವರನ್ನು ಗುರುತಿಸುವುದರ ಜೊತೆಗೆ ಹೆಚ್ಚಿನ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾಶಾಸನ ನಮ್ಮ ಸಂಸ್ಥೆ ನೀಡುತ್ತಿರುವುದರಿಂದ ಬಡ ಕುಟುಂಬಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ ಎಂದು ಹೊಸನಗರ ತಾಲ್ಲೂಕು ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಯೋಜನಾಧಿಕಾರಿಯಾದ ಪ್ರದೀಪ್.ಕೆ ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ.) ಹೊಸನಗರ ತಾಲೂಕು ನಲ್ಲಿ 48 ಅಶಕ್ತರಿಗೆ ಪ್ರತಿ ತಿಂಗಳು ರೂ 1000/- ದಂತೆ ಪ್ರತಿ ತಿಂಗಳು ರೂ 48ಸಾವಿರ ಮೊತ್ತವನ್ನು ಮಾಶಾಸನ ರೂಪದಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುತ್ತಿದ್ದು ಆದರಂತೆ ಈ ಫಲಾನುಭವಿಗಳ ಪೈಕಿ ತೀರಾ ಸಂಕಷ್ಟದಲ್ಲಿರುವ ಫಲಾನುಭವಿಗಳಿಗೆ ವಾತ್ಸಲ್ಯ ಕಿಟ್ ಒದಗಿಸಲಾಗಿದ್ದು ಹೊಸನಗರ ತಾಲೂಕಿನಲ್ಲಿ 9 ಫಲಾನುಭವಿಗಳಿಗೆ ಈ ವಾತ್ಸಲ್ಯ ಕಿಟ್ ವಿತರಿಸಿ ಮಾತನಾಡಿದರು.
ವಾತ್ಸಲ್ಯ ಕಿಟ್ನ್ನು ಶಿವಮೊಗ್ಗ ಜಿಲ್ಲಾ ನಿರ್ದೇಶಕರಾದ ಶ್ರೀ ಮುರುಳೀಧರ್ ಶೆಟ್ಟಿರವರು ವಿತರಿಸಿದರು.
ಈ ಸಂದರ್ಭ ತಾಲೂಕು ಯೋಜನಾಧಿಕಾರಿ ಶ್ರೀ ಪ್ರದೀಪ್ ಆರ್, ಒಕ್ಕೂಟದ ಅಧ್ಯಕ್ಷರು & ಪದಾಧಿಕಾರಿಗಳು, ಊರಿನ ಗಣ್ಯರು, ಜ್ಞಾನವಿಕಾಸ ಸಮನ್ವಯಾಧಿಕಾರಿ, ಸೇವಾಪ್ರತಿನಿಧಿ ಹಾಗೂ ಸ್ವ-ಸಹಾಯ ಮತ್ತು ಪ್ರಗತಿಬಂಧು ಗುಂಪಿನ ಸದಸ್ಯರು ಉಪಸ್ಥಿತರಿದ್ದರು.












Leave a Reply