ಪ್ರಥಮ ವರ್ಷದ ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ
ಹೊಸನಗರ: ತಾಲ್ಲೂಕಿನ ವಾರಂಬಳ್ಳಿ ಕಲ್ಯಾಣೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆ ಆದ 4ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಇದೆ ಬರುವ ಜನವರಿ 19, ಸೋಮವಾರ ನಡೆಯಲಿದೆ.
ಶ್ರೀ ಕಲ್ಯಾಣೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ವತಿಯಿಂದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅನೇಕ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆಗೊಂಡಿದೆ.

ಸಮಾಜಕ್ಕೆ ಪ್ರೇರಣೆ ಸಿಗುವಂತಹ ಕಾರ್ಯಕ್ರಮಗಳನ್ನು ಆಲೋಚಿಸಿ ಬೃಹತ್ ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಜನವರಿ 19ಕ್ಕೆ ಬೆಳಿಗ್ಗೆ 10 ಗಂಟೆಯಿಂದ ಸನ್ನಿಧಾನದಲ್ಲೆ ನಡೆಯಲಿದೆ.

ಶ್ರೀ ಕಲ್ಯಾಣೇಶ್ವರ ದೇವರ ವಾರ್ಷಿಕೋತ್ಸವದ ಪ್ರಯುಕ್ತ ಪ್ರಥಮ ವರ್ಷದ ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಿ ಸಮಾಜದಲ್ಲಿ ಸದ್ದಿಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಡಾ.ಪ್ರತಿಮಾ ವೈದ್ಯಾಧಿಕಾರಿಗಳು ತ್ರಿಣಿವೆ ಮತ್ತು ಶ್ರೀ ರಾಘವೇಂದ್ರ ಹೊಸನಗರದ ಗೋರಕ್ಷಕರು ಇವರಿಗೆ ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿಯನ್ನು ಅದೇ ದಿನ 11:30ಕ್ಕೆ ಪ್ರದಾನಿಸಲಾಗುತ್ತದೆ.
ಈ ಸಾಮಾಜಿಕ ಕಾರ್ಯಕ್ರಮದಲ್ಲಿ ಜೊತೆಯಾಗೋಣ ಎಂಬ ಸಂದೇಶದೊಂದಿಗೆ ಸರ್ವ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕಲ್ಯಾಣೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟಿನ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.













Leave a Reply