ಹೊಸನಗರ: ಸುಮಾರು 40 ವರ್ಷಗಳ ಕಾಲ ಕಾಂಗ್ರೇಸ್ ಕಛೇರಿ ಗಾಂಧಿಮಂದಿರದಲ್ಲಿ ಕುಗ್ರಾಮಗಳಿಂದ ಬರುವಂತಹ ಬಡವರಿಗೆ ಸಾಮಾನ್ಯ ವರ್ಗದವರಿಗೆ ತಾಲ್ಲೂಕು ಕಛೇರಿ, ಸರ್ಕಾರಿ ವಿವಿಧ ಇಲಾಖೆ ಎಲ್ಲಿದೇಯೋ ಗೊತ್ತಿಲ್ಲದವರಿಗೆ ಯಾವ ಕಾರಣದಿಂದ ಬಂದಿದ್ದಾರೆ ಅವರಿಗೆ ಎನೂ ಸಹಾಯ ಮಾಡಬೇಕು ಎಂದು ಪೂರ್ಣ ಮಾಹಿತಿ ಪಡೆದು ಸಂಬಂಧಪಟ್ಟ ಕಛೇರಿಗೆ ಅವರೇ ಅರ್ಜಿ ಬರೆದುಕೊಂಡು ಹೋಗುವುದರ ಜೊತೆಗೆ ಯಾವುದೇ ಹಣ ಪಡೆಯದೇ ನಿಷ್ಟಾವಂತರಾಗಿ ಸೇವೆ ಸಲ್ಲಿಸುತ್ತಿದ್ದ ಆನೆಗದ್ದೆ ಜಯಪ್ಪನವರು (70) ಬುಧವಾರ ರಾತ್ರಿ ತಮ್ಮ ಸ್ವಂತಮನೆಯಾದ ಆನೆಗದ್ದೆಯಲ್ಲಿ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.
ಬಡವರ ಪಾಲಿನ ಆಶಾ ಕಿರಣ ಜಯಪ್ಪನವರನ್ನು ಕಳೆದುಕೊಂಡಿದ್ದೇವೆ: ಚಂದ್ರಮೌಳಿ ಗೌಡ
ಸುಮಾರು 40 ವರ್ಷಗಳಿಂದ ಕಾಂಗ್ರೇಸ್ ಕಛೇರಿ ಗಾಂಧಿಮಂದಿರದಲ್ಲಿ ಬೆಳಿಗ್ಗೆ 9ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಕುಗ್ರಾಮಗಳಿಂದ ಬಂದವರಿಗೆ ಮಾಹಿತಿ ನೀಡುವುದರ ಜೊತೆಗೆ ಯಾವ ಕೆಲಸಕ್ಕೆ ಬಂದಿದ್ದಾರೆ ಎಂದು ತಿಳಿದು ಅರ್ಜಿ ಬರೆದುಕೊಡುವುದರಿಂದ ಸರ್ಕಾರಿ ಕಛೇರಿಯ ಕೆಲಸವನ್ನು ಸ್ವಂತ ಹಣ ಖರ್ಚು ಮಾಡಿ ಕೆಲಸವನ್ನು ಮಾಡಿಕೊಡುತ್ತಿದ್ದು ಇವರು ಬಡವರ ಮಧ್ಯಮ ವರ್ಗದವರ ಆಶಾ ಕಿರಣರಾಗಿದ್ದರು ಎಂದು ಬ್ಲಾಕ್ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಚಂದ್ರಮೌಳಿ ಗೌಡರವರು ಹೇಳಿದರು.
ಹೊಸನಗರದ ಗಾಂಧಿಮಂದಿರದಲ್ಲಿ ಜಯಪ್ಪನವರ ಬಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಬಿ.ಜಿ. ನಾಗರಾಜ್, ಬಿ.ಆರ್ ಪ್ರಭಾಕರ್, ಪ್ರದಾನ ಕಾರ್ಯದರ್ಶಿಯಾದ ಸದಾಶಿವ ಶ್ರೇಷ್ಠಿ, ಎಂ.ಪಿ ಸುರೇಶ್, ಅಶ್ವಿನಿಕುಮಾರ್, ಎಂ.ಪಿ ಕೋಕೇಶ್, ನೇತ್ರಾವತಿ, ಜಯನಗರ ಗುರು, ಚನ್ನಬಸವ, ಚಂದ್ರಮೂರ್ತಿ, ಎಂ.ಪಿ ಲೋಹಿತ್, ನೂರ ಮೇಟಿಲ್ಡಾ ಸ್ವಿಕ್ವೇರಾ, ಉಬೇದ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.












Leave a Reply