ಸೆಂಟ್ರಿಂಗ್ ಶೀಟ್ ಕದ್ದವನ ಬಂಧನ

ಗ್ರಾಮೀಣ ಯುವಕರಿಗಾಗಿ ಎರಡು ದಿನದ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ 1200 x 800 ಸೆಂಟ್ರಿಂಗ್ ಶೀಟ್ ಕದ್ದವನ ಬಂಧನ
Spread the love

ಪ್ರಕರಣ ಭೇದಿಸಿದ ಪೊಲೀಸರು

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕೂಡಿಗೆ ಗ್ರಾಮದಲ್ಲಿ ನಡೆದಿದ್ದ ಮನೆ ನಿರ್ಮಾಣ ಸಾಮಗ್ರಿ ಕಳ್ಳತನ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಬೈಂದೂರು ತಾಲೂಕಿನ ಶಿರೂರು ನಿವಾಸಿ ರಶೀದ್ ಅಲಿಯಾಸ್ ಮೊಹಿದ್ದೀನ್ (42) ಎಂಬಾತನನ್ನು ಬಂಧಿಸಿದ್ದಾರೆ.

ಕೂಡಿಗೆ ಗ್ರಾಮದ ಗಬಡಿಯ ಮೇಘರಾಜ್ ಎಂಬುವವರು ತಮ್ಮ ನೂತನ ಮನೆಯ ಎರಡನೇ ಮಹಡಿಯ ಸ್ಲಾಬ್ ಕೆಲಸಕ್ಕಾಗಿ ಅಂದಾಜು 45,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್‌ಗಳನ್ನು ಮನೆಯ ಪಕ್ಕದಲ್ಲೇ ಇರಿಸಿದ್ದರು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ರಾತ್ರೋ ರಾತ್ರಿ ಕಳ್ಳತನ ಮಾಡಲಾಗಿತ್ತು.

ಈ ಬಗ್ಗೆ ಮಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತೀರ್ಥಹಳ್ಳಿ ಡಿವೈಎಸ್ಪಿ ಅರವಿಂದ್ ಎನ್ ಕಲಗುಚ್ಚಿ ಮತ್ತು ಮಾಳೂರು ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಪಿಎಸ್ ಐ ಸುನೀಲ್ ಬಿ.ಸಿ ಹಾಗೂ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯಿಂದ ಅಂದಾಜು 1,00,000 ರೂ. ಮೌಲ್ಯದ 150 ಕಬ್ಬಿಣದ ಸೆಂಟ್ರಿಂಗ್ ಶೀಟ್ ಹಾಗೂ ಕೃತ್ಯಕ್ಕೆ ಬಳಸಿದ್ದ 1,00,000 ರೂ. ಮೌಲ್ಯದ ಟ್ರಕ್ ವಾಹನ ಜಪ್ತಿ ಮಾಡಲಾಗಿದೆ. ತನಿಖೆ ವೇಳೆ ವಶಪಡಿಸಿಕೊಂಡ ಶೀಟ್‌ಗಳಲ್ಲಿ 50 ಶೀಟ್‌ಗಳು ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನಕ್ಕೆ ಸಂಬಂಧಿಸಿದ್ದವು ಎಂಬುದು ಬಯಲಾಗಿದೆ.


Spread the love

Leave a Reply

Your email address will not be published. Required fields are marked *