ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ಸ್ಪಷ್ಟನೆ
ಹೊಸನಗರ: ಇತ್ತೀಚಿನ ದಿನಗಳಲ್ಲಿ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮತ್ತು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ “ಕಿಸಾನ್ ಟ್ರ್ಯಾಕ್ಟರ್ ಯೋಜನೆ” ಅಡಿಯಲ್ಲಿ ರೈತರಿಗೆ ಟ್ರ್ಯಾಕ್ಟರ್ ಖರೀದಿಸಲು 50% ಸಹಾಯಧನ ನೀಡಲಾಗುತ್ತಿದೆ ಎಂಬ ಬಗ್ಗೆ ಮತ್ತು ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಯೋಜನೆಯ ನಕಲಿ ಅಪ್ಲಿಕೇಶನ್ ಬಗ್ಗೆ ಜಾಹೀರಾತುಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಈ ಪ್ರಕಟಣೆಗಳು ಸಂಪೂರ್ಣವಾಗಿ ಸುಳ್ಳು ಮತ್ತು ಜನರನ್ನು ವಂಚಿಸುವ ಉದ್ಧೇಶದಿಂದ ಕೂಡಿದೆ ಎಂದು ಹೊಸನಗರ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಸಚಿನ್ ಹೆಗಡೆ ತಿಳಿಸಿದರು.
ಹೊಸನಗರದ ಕೃಷಿ ಇಲಾಖೆಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಕಲಿ ವೆಬ್ಸೈಟ್ಗಳ ವಂಚಕರು ಸರ್ಕಾರಿ ವೆಬ್ಸೈಟ್ಗಳಂತೆಯೇ ಕಾಣುವ ನಕಲಿ ಲಿಂಕ್ಗಳನ್ನು ಸೃಷ್ಠಿಸಿ ರೈತರಿಂದ ವೈಯಕ್ತಿಕ ಮಾಹಿತಿ ಮತ್ತು ಹಣವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಅರ್ಜಿ ಸಲ್ಲಿಕೆಯ ಹೆಸರಿನಲ್ಲಿ ಅಥವಾ ನೋಂದಣಿ ಶುಲ್ಕದ ಹೆಸರಿನಲ್ಲಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಹಣವನ್ನು ಪಾವತಿಸಬಾರದು. ಯಾವುದೇ ಸಬ್ಸಿಡಿ ಅಥವಾ ಕೃಷಿ ಯೋಜನೆಗಳ ಬಗ್ಗೆ ನಿಖರ ಮಾಹಿತಿಗಾಗಿ ರೈತರು ಯಾವಾಗಲೂ ಅಧಿಕೃತ ಕೃಷಿ ಇಲಾಖೆಯ ವೆಬ್ಸೈಟ್ ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬೇಕು. ಸಾಮಾಜಿಕ ಜಾಲತಾಣದಲ್ಲಿ ಬರುವ ಇಂತಹ ಸೈಬರ್ ವಂಚನೆಗಳಿಂದ ಆಮಿಷಕ್ಕೆ ಒಳಗಾಗಿ ನಿಮ್ಮ ಬ್ಯಾಂಕ್ ವಿವರಗಳನ್ನು ಅಥವಾ ಹಣವನ್ನು ಯಾರಿಗೂ ನೀಡಬೇಡಬಾರದು ಇಂತಹ ಸಂಶಯಾಸ್ಪದ ಲಿಂಕ್ಗಳ ಮೇಲೆ ಕ್ಲಿಕ್ ಮಾಡಬಾರದು ಸಬ್ಸಿಡಿ ಯೋಜನೆಗಳು ಯಾವಾಗಲೂ ಸರ್ಕಾರದ ಅಧಿಕೃತ ಪೋರ್ಟಲ್ಗಳ ಮೂಲಕ ಮಾತ್ರ ಜಾರಿಗೆ ಬರುತ್ತವೆ.
ಕೃಷಿ ಇಲಾಖೆಯ ಯಾವುದೇ ಯೋಜನೆಗಳ ಬಗ್ಗೆ ಖಚಿತಪಡಿಸಿಕೊಳ್ಳಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಕಛೇರಿಗಳನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬಹುದಾಗಿದೆ ಎಂದರು.












Leave a Reply