ರೈತರ ಹಿತವನ್ನೇ ಮರೆತ ಸರ್ಕಾರಗಳು, ರೈತರು ಒಗ್ಗಟ್ಟಾಗಿ ತಮ್ಮ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿದೆ :ಗಣೇಶ್ ಬೆಳ್ಳಿ

NAADI NEWS 20260120 181030 0000 ರೈತರ ಹಿತವನ್ನೇ ಮರೆತ ಸರ್ಕಾರಗಳು, ರೈತರು ಒಗ್ಗಟ್ಟಾಗಿ ತಮ್ಮ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿದೆ :ಗಣೇಶ್ ಬೆಳ್ಳಿ
Spread the love

ಹೊಸನಗರ: ರೈತರ ಹಿತ ಪಾಪಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಫಲವಾಗಿದ್ದು ಹೊಸನಗರ ತಾಲ್ಲೂಕಿನ ರೈತರು ಒಗ್ಗಟ್ಟಾಗಿ ತಮ್ಮ ರಕ್ಷಣೆಗಾಗಿ ಸಂಘಟಿತರಾಗಬೇಕಾಗಿದೆ ಎಂದು ವಿಶ್ವ ನಿಸರ್ಗ ಪುನರ್ ನಿರ್ಮಾಣ ಸಂಸ್ಥೆ ಅಧ್ಯಕ್ಷರಾದ ಗಣೇಶ್ ಬೆಳ್ಳಿಯವರು ಹೇಳಿದರು. 

ಹೊಸನಗರದ ಆರ್ಯಈಡಿಗರ ಸಭಾಭವನದ ಆವರಣದಲ್ಲಿ ಹೊಸನಗರ ತಾಲ್ಲೂಕು ರೈತರ ಸಭೆ ಮಾಹಿತಿ ಸಭೆಯನ್ನು ಕರೆಯಲಾಗಿದ್ದು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ಹೊಸನಗರ ತಾಲೂಕು ಅರಣ್ಯ ಭೂಮಿ ಮತ್ತು ಸರ್ಕಾರಿ ಭೂ ಒತ್ತುವರಿ ಸಮಸ್ಯೆಗಳ ಹಿಂದಿನಿಂದಲ್ಲೂ ನಡೆಯುತ್ತಿದ್ದು ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ ಅದರೇ ಎನೂ ಪ್ರಯೋಜನವಾಗಿಲ್ಲ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಗಳು ಕೋರ್ಟಿಗೆ ಹಾಕಿದ್ದಾರೆ ಸರಕಾರ ರಚನೆ ಮಾಡಿದ ಎಸ್ಐಟಿಯ ಬಗ್ಗೆ ಅದರ ಕಾರ್ಯ ವೈಖರಿಯ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕಾಗಿದೆ  ರೈತರ ಹಿತ ಕಾಪಾಡಲು ರಾಜ್ಯ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿದ್ದು, ರೈತರು ಒಗ್ಗಟ್ಟಾಗಿ ತಮ್ಮ ರಕ್ಷಣೆಗಾಗಿ ಈ ಸಂದರ್ಭದಲ್ಲಿ ಒಂದಾಗಬೇಕಾಗಿದೆ ದೇಶದಲ್ಲಿಯೇ ಅತಿ ಹೆಚ್ಚು ಅಣೆಕಟ್ಟುಗಳಿಂದ ಅನ್ಯಾಯಕ್ಕೆ ಒಳಗಾದ ಜಿಲ್ಲೆ ಶಿವಮೊಗ್ಗವಾಗಿದ್ದು ಸರ್ಕಾರದ ಯೋಜನೆಗಳಿಂದ ೭೫,೦೦೦ ಎಕರೆ ಅರಣ್ಯ ನಾಶವಾಗಿದೆ ಸರ್ಕಾರ ಇಲ್ಲಿಯವರೆವಿಗೆ ಭೂಮಿ ಕಳೆದುಕೊಂಡ ರೈತರಿಗೆ ಭೂಮಿ ನೀಡಿಲ್ಲ  ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಒಗ್ಗೂಡಿ ನ್ಯಾಯಾಲಯಕ್ಕೆ ಹೋಗುವ ತೀರ್ಮಾನಕ್ಕೆ ಬರಬೇಕಾಗಿದ್ದು ನಾವು ನಿವೇಲ್ಲರೂ ಒಟ್ಟಿಗೆ ನ್ಯಾಯಾಲಯಕ್ಕೆ ಹಾಜರಾಗೋಣ ಎಂದರು.

  ಈ ಸಭೆಯಲ್ಲಿ ತಾಲೂಕು ಸಮಿತಿಯಲ್ಲಿ ಗ್ರಾಮವಾರು ಸಂಘಟಕರನ್ನು ಆಯ್ಕೆ ಮಾಡಿಕೊಂಡಿದ್ದು ಸಮಿತಿಯಲ್ಲಿ ಬೆಳ್ಳೂರು ತಿಮ್ಮಪ್ಪ, ಬಿ.ಪಿ.ರಾಮಚಂದ್ರ, ಏರಿಗೆ ಉಮೇಶ್, ಎಂ.ಪಿ ರಾಜು, ರವೀಂದ್ರ ಮಾಸ್ತಿಕಟ್ಟೆ, ಬಿ.ಜಿ ನಾಗರಾಜ, ರಮೇಶ್ ಹೆಚ್.ಬಿ ಗರ್ತಿಕೆರೆ, ಗಿರೀಶ್ ಚಿಕ್ಕಜೇನಿ, ಸತೀಶ್ ನೆನೆಬಸ್ತಿ, ಮಂಜಪ್ಪ ಯಡಗುಡ್ಡೆ, ಭಾಷಾಸಾಬ್ ಅರಸಾಳು, ರಮೇಶ ನಿಲ್ಸ್ಕಲ್, ಚಂದ್ರಶೇಖರ್ ತ್ರಿಣಿವೆ, ಚಂದ್ರಶೇಖರ್ ಸಾಲ್ತೋಡಿ, ಎಂ.ಪಿ ಲೋಕೇಶ್,  ಮಳಲಿ ಧರ್ಮಪ್ಪ, ವಾಸವಿ ಕೌಶಿಕ್, ಜಿ.ಎಚ್.ಕೆ ಸ್ವಾಮಿ ಹೆಬ್ಬಳ್ಳಿ, ಆಯ್ಕೆಯಾಗಿದ್ದು ಉಳಿದಂತೆ ಗ್ರಾಮ ಹಿತರಕ್ಷಣಾ ಸಮಿತಿಗಳ ರಚನೆಯ ನಂತರದಲ್ಲಿ ತಾಲೂಕು ಸಮಿತಿಯನ್ನು ಇನ್ನಷ್ಟು ಬಲಪಡಿಸಬೇಕೆಂದು ಈ ಸಭೆಯಲ್ಲಿ ಕೇಳಿಕೊಂಡರು.

                                                              


Spread the love

Leave a Reply

Your email address will not be published. Required fields are marked *