ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!

NAADI NEWS 20260128 014340 0000 ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!
Spread the love

ನಡೆದಿದ್ದೇನು?

ಬೆಂಗಳೂರಿಗೆ ತೆರೆಳುತ್ತಿದ್ದ ಅನ್ನಪೂರ್ಣೇಶ್ವರಿ ಎಂಬ ಖಾಸಗಿ ಬಸ್ ಶಿವಮೊಗ್ಗ -ಹೊಸನಗರ ತಾಲೂಕಿನ ಗಡಿಭಾಗವಾದ ಸೂಡೂರು ಸಮೀಪದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಕೆಲವೇ ನಿಮಿಷದಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

20260127 2308043994265135518374522 ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!

ನಿಟ್ಟೂರಿನಿಂದ ಬೆಂಗಳೂರಿಗೆ ತೆರೆಳುತ್ತಿದ್ದ ಸ್ಲೀಪರ್ ಕೋಚ್  ಬಸ್ ನಲ್ಲಿ 36 ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಲಿಸುವಾಗಲೇ ಬೆಂಕಿ ಕಾಣಿಸಿಕೊಂಡಗ ಚಾಲಕನ ಸಮಯ ಪ್ರಜ್ಞೆಯಿಂದ  ಚಾಲಕ ಮರಕ್ಕೆ ಡಿಕ್ಕಿ ಹೊಡೆಸಿ ಬಸ್ ನಿಲ್ಲಿಸಿದ್ದಾನೆ. ಕೂಡಲೇ ಕೆಲವರು ಎಕ್ಸಿಟ್ ಡೋರ್ ನಿಂದ ಜಿಗಿದಿದ್ದಾರೆ. ಅನೇಕರಿಗೆ ಗಾಯಗಳಾಗಿವೆ, ಬ್ಯಾಗು, ಮೊಬೈಲು, ದಾಖಲೆಗಳು ಸಂಪೂರ್ಣ ಬೆಂಕಿಗೆ ಆಹುತಿ ಆಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ.

20260127 2338464921826874829770635 ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!
ಸುಟ್ಟು ಕರಕಲಾದ ಬಸ್

ಬಸ್ಸಿನಲ್ಲೆ ಇದ್ದ ವ್ಯಕ್ತಿಯ ಮಾಹಿತಿಯ ಪ್ರಕಾರ ಬಸ್ಸಿನಲ್ಲಿ ಮೊದಲು ಸುಟ್ಟವಾಸನೆ ಬರುತ್ತಿತ್ತು .ಕೆಲವೇ ನಿಮಿಷದಲ್ಲಿ ಜೋರಾದ ಚಿರಾಟ ಬಸ್ಸಿನಲ್ಲಿ ಕೇಳಿಸಿತು. ಬೆಂಕಿ ಮುಂಭಾಗದಲ್ಲಿ ಆವರಿಸಿತು ಎಂದು ಪ್ರಯಾಣಿಕ ತಿಳಿಸಿದ್ದಾನೆ.

image editor output image448006806 17695464114069146105561040052984 ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!
ಪ್ರಾಥಮಿಕ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳು

ಘಟನೆಯ ವೇಳೆ 31 ಜನರಿಗೆ ಗಾಯಗಳಾಗಿದ್ದು ಅದರಲ್ಲಿ 8ಜನರಿಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

20260127 2339596185341569872744106 ಬೆಂಗಳೂರಿಗೆ ತೆರೆಳುತ್ತಿದ್ದ ಬಸ್ ಬೆಂಕಿಗಾಹುತಿ!!
ಬೆಂಕಿ ನಂದಿಸುತ್ತಿರುವ ಅಗ್ನಿಶಾಮಕ ದಳ ಸಿಬ್ಬಂದಿ

ಆ ಪ್ರದೇಶವೂ ಸಂಪೂರ್ಣ  ಅರಣ್ಯ ಪ್ರದೇಶವಾಗಿದ್ದು ಸಂಪರ್ಕಿಸಿದ ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬಂದಿದೆ ಹಾಗೂ ತಕ್ಷಣ ಪಿ.ಎಸ್.ಐ ರಾಜು ರೆಡ್ಡಿ ಮತ್ತು ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಚರಣೆ ಕೈಗೊಂಡರು. ಅಗ್ನಿಶಾಮಕದಳದವರು ಆಗಮಿಸಿ ಬೆಂಕಿ ನಂದಿಸಿದರು.


Spread the love

Leave a Reply

Your email address will not be published. Required fields are marked *