ಜ.14ರಿಂದ ಸಿಗಂದೂರು ಜಾತ್ರೆ – ಯಕ್ಷದ್ರುವಪಟ್ಲ ಸತೀಶ್ ಶೆಟ್ಟಿ ಅವರಿಂದ  ದೇವಿಲಲಿತೋಪಖ್ಯಾನ

NAADI NEWS 20260103 122745 0000 ಜ.14ರಿಂದ ಸಿಗಂದೂರು ಜಾತ್ರೆ - ಯಕ್ಷದ್ರುವಪಟ್ಲ ಸತೀಶ್ ಶೆಟ್ಟಿ ಅವರಿಂದ  ದೇವಿಲಲಿತೋಪಖ್ಯಾನ
Spread the love

ಸಿಗಂದೂರು:ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ ಜನವರಿ 14 ಮತ್ತು 15 ರಂದು ಸಂಕ್ರಾಂತಿ ಪ್ರಯುಕ್ತ ಜಾತ್ರಾ ಮಹೋತ್ಸವ ಜರುಗಲಿದೆ. ಸಿಗಂದೂರು ಚೌಡೇಶ್ವರಿ ಸೇತುವೆ ಲೋಕಾರ್ಪಣೆಯಾದ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದೆ.

  ಎರಡು ದಿನ ಧಾರ್ಮಿಕ ವಿಧಿವಿಧಾನಗಳೊಂದಿಗೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಾನಪದ ಕಲಾ ತಂಡಗಳ ಪ್ರದರ್ಶನ ನೆರೆವೇರಲಿದೆ ಎಂದು ಧರ್ಮದರ್ಶಿ ಡಾ.ಎಸ್.ರಾಮಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಹೆಚ್.ಆರ್.ರವಿಕುಮಾರ್ ತಿಳಿಸಿದ್ದಾರೆ. ಜನವರಿ 14 ರಂದು ಬೆಳಗ್ಗೆ 4 ಗಂಟೆಗೆ ಮಹಾಭಿಷೇಕ, ಹೂವು ಮತ್ತು ಆಭರಣ ಆಲಂಕಾರ, 5 ಗಂಟೆಗೆ ಗೋಪೂಜೆ, 6 ಗಂಟೆಗೆ ಗುರುಪೂಜೆ, 7 ಗಂಟೆಗೆ ದೇವಿ ಪಾರಾಯಣ, 8 ಗಂಟೆಗೆ ರಥಪೂಜೆಯ ಮೂಲಕ ರಥ ಮತ್ತು ಪಲ್ಲಕ್ಕಿಯು ದೇವಿಯ ಮೂಲ ಸ್ಥಾನಕ್ಕೆ ಹೊರಡಲಿದೆ. ಬೆಳಕ್ಕೆ 8.30 ಕ್ಕೆ ಚಂಡಿಕಾ ಹೋಮ ಆರಂಭವಾಗಲಿದೆ. ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಾಲಯ ಪ್ರವೇಶ ಮಾಡಲಿದೆ. 12.30ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ನೆರವೇರಲಿದೆ. 1.15ಕ್ಕೆ ಧರ್ಮಸಭೆ ನಡೆಯಲಿದೆ. ಮಧ್ಯಾಹ್ನ 3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. 6 ಗಂಟೆಗೆ ಗಂಗಾರಥಿ ನೆರವೇರಲಿದೆ.

ಶಿವಧೂತ ಗುಳಿಗ ನಾಟಕ: ಸಂಜೆ 7 ಗಂಟೆಯಿಂದ ಶಿವಧೂತ ಗುಳಿಗ ನಾಟಕ
ಪ್ರದರ್ಶನವಿದೆ. ಬಳಿಕ ಗಾನ ಮಯೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಸರಿಗಮಪ ಮತ್ತು ಎದೆತುಂಬಿ ಹಾಡಿದೆನು ಸೇರಿದಂತೆ ವಿವಿಧ ಸಂಗೀತ ಶೋಗಳಲ್ಲಿ ಭಾಗಿಯಾಗಿರುವ ಕಲಾವಿದರ ಕಂಠ ಸಿರಿಯಲ್ಲಿ ಕಾರ್ಯಕ್ರಮ ಮೂಡಿಬರಲಿದೆ.

ಜನವರಿ 15 ರಂದು ಮುಂಜಾನೆಯಿಂದ ಮಹಾಭಿಷೇಕ, ಅಲಂಕಾರ , ಮಹಾಪೂಜೆ ಗುರುಪೂಜೆ, ದೇವಿ ಪಾರಾಯಣಗಳು ನಡೆಯಲಿದೆ. 8 ಗಂಟೆಗೆ ನವಚಂಡಿಕಾ ಹೋಮ ಹಾಗೂ ಮಧ್ಯಾಹ್ನ3 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಸಂಜೆ 5 ಗಂಟೆಗೆ ಶ್ರೀಚಕ್ರ ಸಹಿತ ದುರ್ಗಾ ದೀಪ ಪೂಜೆ, ರಂಗಪೂಜೆ ಬಳಿಕ ಸಂಜೆ 6 ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ. 7 ಗಂಟೆಯಿಂದ ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಭಾಗವತಿಕೆಯಲ್ಲಿ ಪಾವಂಜಿ ಮೇಳದಿಂದ ದೇವಿಲಲಿತೋಪಖ್ಯಾನ ಎಂಬ ಯಕ್ಷಗಾನ ಪ್ರದರ್ಶನವಿದೆ.


Spread the love

Leave a Reply

Your email address will not be published. Required fields are marked *