
ಶಿವಮೊಗ್ಗ:ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಶಿವಮೊಗ್ಗದಲ್ಲಿ ಗದ್ದಲದ ಘಟನೆಯೊಂದು ನಡೆದಿದೆ. ಹೊಸವರ್ಷವನ್ನು ಸಂಭ್ರಮದಿಂದ ಆಚರಿಸಲು ಸೇರಿದ್ದ ಎರಡು ಗುಂಪುಗಳ ನಡುವೆ ಮೊದಲಿಗೆ ಸಣ್ಣ ಕಿರಿಕ್ ಉಂಟಾಗಿ, ಅದು ಕೆಲವೇ ಕ್ಷಣಗಳಲ್ಲಿ ಹೊಡೆದಾಟಕ್ಕೆ ತಿರುಗಿದೆ.
ನಗರದ ಅಡಕೆ ಮಂಡಿ ಕ್ಲಬ್‌ನಲ್ಲಿ ಈ ಗಲಾಟೆ ನಡೆದಿದ್ದು, ಕುರ್ಚಿಗಳನ್ನೇ ಹಿಡಿದುಕೊಂಡು ಪರಸ್ಪರ ಹೊಡೆದಾಡಿಕೊಂಡ ಘಟನೆ ಕೆಲಕಾಲ ಆತಂಕ ಸೃಷ್ಟಿಸಿತು. ಮಾಹಿತಿ ಪಡೆದ ತಕ್ಷಣ ತುಂಗಾನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗುಂಪನ್ನು ಚದುರಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಶಿವಮೊಗ್ಗ ಎಎಸ್‌ಪಿ ಕಾರಿಯಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಶಾಂತಿ ಕಾಪಾಡುವ ಉದ್ದೇಶದಿಂದ ಒಂದು ಗಂಟೆಯೊಳಗೆ ನ್ಯೂ ಇಯರ್ ಸಂಭ್ರಮಾಚರಣೆಯನ್ನು ಮುಕ್ತಾಯಗೊಳಿಸಲು ಸೂಚನೆ ನೀಡಿದರು. ಘಟನೆಗೆ ಸಂಬಂಧಿಸಿದಂತೆ ಮುಂದಿನ ತನಿಖೆ ಮುಂದುವರಿದಿದೆ.















Leave a Reply