ಬೆಂಗಳೂರಿಗೆ ತೆರೆಳುತ್ತಿದ್ದ ಅನ್ನಪೂರ್ಣೇಶ್ವರಿ (SAT)ಎಂಬ ಖಾಸಗಿ ಬಸ್ ಶಿವಮೊಗ್ಗ -ಹೊಸನಗರ ತಾಲೂಕಿನ ಗಡಿಭಾಗವಾದ ಸೂಡೂರು ಸಮೀಪದಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ ಬಸ್ಸಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ ಕೆಲವೇ ನಿಮಿಷದಲ್ಲಿ ಬಸ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಘಟನಾ ಸ್ಥಳಕ್ಕೆ ವಿಷಯ ತಿಳಿದ ಕೂಡಲೇ ತಡರಾತ್ರಿ ಭೇಟಿ ನೀಡಿದ ತಹಶೀಲ್ದಾರ್ ಭರತ್ ರಾಜ್. ಬೆಂಕಿ ಅವಘಡದ ಪ್ರಕರಣದ ಕುರಿತು ಪಿ ಎಸ್ ಐ ರಾಜು ರೆಡ್ಡಿ ಅವರಿಂದ ಘಟನೆ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ಪಡೆದರು. ಅದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸೂಚನೆಯ ಮೇರೆಗೆ ಅವರ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಉಪಸ್ಥಿತರಿದ್ದರು.

ತದನಂತರ ರಿಪ್ಪನ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಆ ಸಂದರ್ಭದಲ್ಲಿ ಬಸ್ಸಿನೊಳಗಿನ ಪ್ರಯಾಣದ ಸಂದರ್ಭದಲ್ಲಿನ ಮಾಹಿತಿಯನ್ನು ಪಡೆದರು.
https://www.instagram.com/reel/DUCR-uzE8Ji/?igsh=eDZpdzM2dGR1andj
ಬಸ್ಸಿನಲ್ಲೆ ಇದ್ದ ವ್ಯಕ್ತಿಯ ಮಾಹಿತಿಯ ಪ್ರಕಾರ ಬಸ್ಸಿನಲ್ಲಿ ಮೊದಲು ಸುಟ್ಟವಾಸನೆ ಬರುತ್ತಿತ್ತು .ಕೆಲವೇ ನಿಮಿಷದಲ್ಲಿ ಜೋರಾದ ಚಿರಾಟ ಬಸ್ಸಿನಲ್ಲಿ ಕೇಳಿಸಿತು. ಬೆಂಕಿ ಮುಂಭಾಗದಲ್ಲಿ ಆವರಿಸಿತು ಎಂದು ಪ್ರಯಾಣಿಕ ತಿಳಿಸಿದ್ದಾನೆ.
















Leave a Reply