ಆಸಕ್ತಿ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ: ಮಳಲಿ ಮಠ ಶ್ರೀಗಳು

NAADI NEWS 20260118 165259 0000 ಆಸಕ್ತಿ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ: ಮಳಲಿ ಮಠ ಶ್ರೀಗಳು
Spread the love

ರಿಪ್ಪನ್‌ಪೇಟೆ:ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಓದಿನೊಂದಿಗೆ ಹೆಚ್ಚು ಅಂಕಗಳಿಸುವ೦ತೆ ಪೋಷಕರು ಶಿಕ್ಷಕರು ಒತ್ತಡ ಹಾಕದೆ ಅವರ ಆಸಕ್ತಿ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕ ಪೋಷಕರದಾಗ ಬೇಕು ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

img 20260110 wa00002443020274785766701 ಆಸಕ್ತಿ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ: ಮಳಲಿ ಮಠ ಶ್ರೀಗಳು

ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿನ ಶ್ರೀಶಿವರಾಮಕೃಷ್ಣ ಇಂಟರ್‌ನ್ಯಾಷನಲ್ ಸ್ಕೂಲ್ ಪೂರ್ವ ಪ್ರಾಥಮಿಕ ಹಿರಿಯ ಆಂಗ್ಲಮಾಧ್ಯಮ ಶಾಲಾ ವಾರ್ಷೀಕೋತ್ಸವ ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ ಮಕ್ಕಳನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು.ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಮೂಲಕ ಒಳ್ಳೆಯ ಮೌಲ್ಯಾಧಾರಿತ ಶಿಕ್ಷಣ ನೀಡಿ ಅವರನ್ನು ಸುಸಂಸ್ಕೃತರನ್ನಾಗಿ ಮಾಡುವುದರೊಂದಿಗೆ ಗುರು ಹಿರಿಯರನ್ನು ತಂದೆ ತಾಯಿಯರನ್ನು ಪ್ರೀತಿಸಿ ಗೌರವಿಸುವಂತೆ ಮಾಡುವ ಹೊಣೆ ಶಿಕ್ಷಕ ಪೋಷಕರದ್ದಾಗಬೇಕು ಎಂದರು.


ಜಿಲ್ಲಾ ಪಂಚಾಯಿತ್ ಮಾಜಿ ಆಧ್ಯಕ್ಷ ಕಲಗೋಡು ರತ್ನಾಕರ್ ಕಾರ್ಯಕ್ರಮ ಉದ್ಘಾಟಿಸಿದರು.ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯೆ ಹಾಗೂ ಜಿಲ್ಲಾ ಮಹಿಳ ಕಾಂಗ್ರೆಸ್ ಆಧ್ಯಕ್ಷೆ ಶ್ವೇತಾ ಆರ್.ಬಂಡಿ, ಪ್ರತಿಭಾ ಪುರಸ್ಕಾರ ವಿತರಿಸಿದರು.
ಶಿವರಾಮಕೃಷ್ಣ ಇನ್ಸ್ಟೆಟ್ಯೂಟ್ ಫಾರ್ ಸೋಷಿಯಲ್ ಅವೇರೆನೆಸ್ ಸಂಸ್ಥಾಪಕ ಸಿ.ಕೆ.ಶಿವರಾಮ ಸಮಾರಂಭದ ಆಧ್ಯಕ್ಷತೆಯನ್ನು ವಹಿಸಿದ್ದರು.ಜಿಲ್ಲಾ ಪಂಚಾಯಿತ್ ಮಾಜಿ ಸದಸ್ಯ ಬಂಡಿ ರಾಮಚಂದ್ರ,ಶಾಲಾ ಸಲಹಾ ಸಮಿತಿ ಅಧ್ಯಕ್ಷ ಚಂದಪ್ಪಗೌಡ, ಉಪಾಧ್ಯಕ್ಷ ಪ್ರಸನ್ನಕೊಳವಳ್ಳಿ, ಕಾರ್ಕಳ ಕ್ರಿಯೇಟಿವ್ ಪ್ರತಿಷ್ಟಾನ ಸಂಸ್ಥಾಪಕ ಎಸ್.ಎಲ್.ಆಶ್ವತ್,ತಾಲ್ಲೂಕ್ ಪಂಚಾಯಿತ್ ಮಾಜಿ ಆಧ್ಯಕ್ಷ ವಾಸಪ್ಪಗೌಡ, ಎಪಿಎಂಸಿ ಮಾಜಿ ಆಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡಹಾರೋಹಿತ್ತಲು, ಹೆದ್ದಾರಿಪುರ ಗ್ರಾಮ ಪಂಚಾಯಿತ್ ಸದಸ್ಯ ಹೆಚ್.ಕೆ.ನಾಗರಾಜ್, ಕೆಂಚನಾಲ ಗ್ರಾಮ ಪಂಚಾಯಿತ್ ಮಾಜಿ ಆಧ್ಯಕ್ಷ ನಾಗೇಶ್, ಅಮೃತ ಗ್ರಾಮ ಪಂಚಾಯಿತ್ ಅಧ್ಯಕ್ಷ ಸಚಿನ್‌ಗೌಡ,ಕೆಂಚನಾಲ ಗ್ರಾಮ ಪಂಚಾಯಿತ್ ಸದಸ್ಯ ಕೃಷ್ಣೋಜಿರಾವ್,ಜಿ.ಜಿ.ಸದಾನಂದ ಜಂಬಳ್ಳಿ, ಉಪಾಧ್ಯಕ್ಷೆ ಅಪೂರ್ವ ಹಾಗೂ ಮುಖ್ಯ ಶಿಕ್ಷಕಿ ವಿನುತ ಇನ್ನಿತರರು ಭಾಗವಹಿಸಿ ಮಾತನಾಡಿದರು.ವಿನಾಯಕ ಸ್ವಾಗತಿಸಿದರು.ತಜ್ಮೀಯಾ ಅನುಶ್ರೀ ನಿರೂಪಿಸಿದರು,ವಿದ್ಯಾ ವಾರ್ಷೀಕ ವರದಿ ವಾಚನ ಮಾಡಿದರು.ರಶ್ಮಿ ವಂದಿಸಿದರು.

img 20260116 wa00012726536012956856212 ಆಸಕ್ತಿ ಅನುಗುಣವಾಗಿ ಶಿಕ್ಷಣ ಕೊಡುವುದರೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿ: ಮಳಲಿ ಮಠ ಶ್ರೀಗಳು

Spread the love

Leave a Reply

Your email address will not be published. Required fields are marked *