ಸೇವೆಯೇ ಧ್ಯೇಯ: ಪ್ರತಿಫಲಾಪೇಕ್ಷೆಯಿಲ್ಲದೆ, ಗೋಮಾತೆಗಾಗಿ ಬದುಕುತ್ತಿರುವ ಹೊಸನಗರದ  ರಾಘಣ್ಣ

NAADI NEWS 20260101 142926 0000 ಸೇವೆಯೇ ಧ್ಯೇಯ: ಪ್ರತಿಫಲಾಪೇಕ್ಷೆಯಿಲ್ಲದೆ, ಗೋಮಾತೆಗಾಗಿ ಬದುಕುತ್ತಿರುವ ಹೊಸನಗರದ  ರಾಘಣ್ಣ
Spread the love

10 ವರ್ಷಗಳ ಗೋ ಸೇವಾ ಯಾತ್ರೆ: 200ಕ್ಕೂ ಹೆಚ್ಚು ಗೋವುಗಳ ರಕ್ಷಣೆ ಮಾಡಿದ ರಾಘಣ್ಣ

ವಿಶೇಷ ವರದಿ: ನಾಗರಾಜ್ ಆರ್, ಹೊಸನಗರ
ಹೊಸನಗರ : ಸೇವೆಯಂಬ ಯಜ್ಞದಲ್ಲಿ ಸಮೀಧೇಯಂತೆ ಉರಿಯುವಾ..ಧ್ಯೇಯ ಮಹಾ ಜಲಧಿಯೆಡೆಗೆ  ಸಲೀಲವಾಗಿ ಹರಿಯುವಾ…ಎಂಬ ಧ್ಯೇಯದೊಂದಿಗೆ ಸುಮಾರು 10ವರ್ಷಗಳಿಂದ ಪಟ್ಟಣದ ಸುತ್ತಮುತ್ತ ಎಲ್ಲೆಯೇ ಆದರೂ ಬೀಡಾಡಿ ದನಗಳಿಗೆ ಅಪಘಾತವಾದರೆ ರಾತ್ರಿ ಹಗಲು ಎನ್ನದೆ ತಕ್ಷಣ ತನ್ನ ಸ್ನೇಹಿತರ ಒಡಗೂಡಿ ಆ ಗೋಮಾತೆಯ ಸೇವೆಗೆ ಸಿದ್ದರಾಗುವ ಈ ವ್ಯಕ್ತಿ ಯಾವುದೇ ಪ್ರತಿಫಲಾಪೇಕ್ಷೆ,  ಪ್ರಚಾರ ವಿಲ್ಲದೆ ತನ್ನ ಕುಟುಂಬದ ದುಡಿಮೆಯ ಒಂದು ಭಾಗವನ್ನೆ ಗೋ ಆರೈಕೆ ಗೆ ಮಿಸಲಿಡುತ್ತಾ ಗೋ ಸೇವೆಯನ್ನು ಮಾಡುತ್ತಿದ್ದಾರೆ. ಈಗಾಗಲೇ ಸುಮಾರು 200ಕ್ಕೂ ಹೆಚ್ಚು ಗೋವುಗಳನ್ನು ರಾಘಣ್ಣ ರಕ್ಷಣೆ ಮಾಡಿ ಅದರ ಆರೈಕೆ ಮಾಡಿದ್ದಾರೆ.

ದಿನಚರಿ
    ಬೆಳಗಿನ ಜಾವಾ 4ಗಂಟೆ ಇಂದಲೇ ತನ್ನ ದಿನಚರಿ ಆರಂಭಿಸುವ ಇವರು  ಸಂಜೆ ತನಕ ವಿಶ್ರಾಂತಿಯೇ ಇಲ್ಲ,ಸಣ್ಣದಾಗಿ ಪುಸ್ತಕದ ಅಂಗಡಿ ಇಟ್ಟುಕೊಂಡ ಇವರು ಗೋ ಸೇವೆಯ ಜೊತೆ ಜೊತೆಗೆ ಧಾರ್ಮಿಕ ಕಾರ್ಯಗಳಲ್ಲೂ ಅವರು ಒಂದು ಹೆಜ್ಜೆ ಮುಂದೆ ನಿಲ್ಲುತ್ತಾರೆ ಇವರ ಈ ಪುಣ್ಯ ಕಾರ್ಯದಲ್ಲಿ ತಮ್ಮ ಹರೀಶ್  ಹೊಸನಗರದಲ್ಲಿ ಸಣ್ಣ ಮೊಬೈಲ್ ಸರ್ವಿಸ್ ಮಾಡುತ್ತಾರೆ ಹಾಗೂ ತಂಗಿ ದೀಪಾ ದೂರದ ಊರಿನಲ್ಲಿ ವಕೀಲ ವೃತ್ತಿ ಮಾಡುತ್ತಾ ತನ್ನ ಅಣ್ಣನಿಗೆ ಇವರಿಬ್ಬರೂ ಬೆಂಬಲ ನೀಡುತ್ತಿದ್ದಾರೆ ಜೊತೆಗೆ ಸ್ನೇಹಿತ ರಾಖೇಶ್ ಕೂಡ ಸಹಕಾರ ನೀಡುತ್ತಿದ್ದಾರೆ.



ದಿನವೊಂದರ ಖರ್ಚು
   ಒಂದು ದನದಿಂದ ಸಾಗಿದ ಇವರ ಸೇವೆ ಇಂದು ತನ್ನ ಮನೆಯ ಪಕ್ಕದಲ್ಲಿ ಇರುವ ಸಣ್ಣ ಜಾಗದಲ್ಲಿ ಕಣ್ಣು ಕಾಣದ, ಕಾಲು ಮುರಿದ ಹಾಗೂ ದೇಹವೆಲ್ಲ ಕೊಳೆತಿರುವ  17 ಹಸುಗಳ ಆರೈಕೆ ಮಾಡುತ್ತಿದ್ದಾರೆ ಹಿಂದೆಲ್ಲ ಒಂದು ದಿನಕ್ಕೆ ನೂರು ಇನ್ನೂರೂ ರೂ ಗಳು ಇದರ ಆರೈಕೆ ಯಾಗುತ್ತಿತ್ತು ಈಗ ಅವುಗಳ ಲಾಲಾನೇ- ಪಾಲನೆ ಗೆ ಔಷಧಿ,ಹುಲ್ಲು, ಹಿಂಡಿ ಹೀಗೆ   1000 ರ ಕಿಂತಲೂ ಹೆಚ್ಚು ದಾಟಿದೆ ಆರ್ಥಿಕವಾಗಿ ಸಬಲ ರಲ್ಲದಿದ್ದರೂ ಕೂಡ ಗೋಮಾತೆ ಸೇವೆಯನ್ನು ತನ್ನ ತಾಯಿಯ ಸೇವೆಎಂದು ಶ್ರದ್ಧೆಯಿಂದ ಮಾಡುತಿದ್ದಾರೆ.

naadi news 20260101 140307 00007576380863777272303 ಸೇವೆಯೇ ಧ್ಯೇಯ: ಪ್ರತಿಫಲಾಪೇಕ್ಷೆಯಿಲ್ಲದೆ, ಗೋಮಾತೆಗಾಗಿ ಬದುಕುತ್ತಿರುವ ಹೊಸನಗರದ  ರಾಘಣ್ಣ



ಸೇವಾ ಭಾರತಿ ಸಾಥ್
   ಕೊರೋನ ಸಂದರ್ಭದಲ್ಲಿ ಹೊಸನಗರ  ತಾಲೂಕಿನಾದ್ಯಂತ ಸಾವಿರಾರು ಜನರಿಗೆ ಔಷಧೂಪಚಾರ, ಅನ್ನದಾನ ಹಾಗೂ ಅನಾಥ ಶವಗಳಿಗೆ ಮುಕ್ತಿ ನೀಡಿ  ಸೇವೆಯ ಸಮರ್ಪಣೆ ತೋರಿದ ಸೇವಾ ಭಾರತಿ ತಂಡದ ಮಿತ್ರರು ಇಂದಿಗೂ ಸೇವೆಯನ್ನು ಮುಂದುವರೆಸುತ್ತ ಈ ಗೊಸೇವೆಗೆ ಸಹಕಾರ ನೀಡುತ್ತಿದ್ದು ಅಂದಿನಿಂದ ಸೇವಾ ಭಾರತಿ ಗೋಶಾಲೆ ಎಂದು ನಾಮಕರಣ ಪಡೆಯುವುದರ ಜೊತೆಗೆ ಅದರ ಸದಸ್ಯರಾದ ಸುರೇಂದ್ರ ಕೋಟ್ಯಾನ್, ಗಣೇಶ್ ಮಧುಕರ್. ಕೆ. ವಿ ವಿನಯ್, ರಾಕೇಶ್, ಚಿಂಟು, ಶ್ರೇಯಸ್, ಮಾಧವ ಭಂಡಾರಿ, ಸಂತೋಷ್ ನಂದಿ, ಗುಂಡಾ, ಕಾರ್ತಿಕ್ ಭಂಡಾರಿ,ಚರಣ್, ಸುಪ್ರೀತ್, ವಿವೇಕ್,ಅನೂಪ್, ಸುಧೀಂದ್ರ ಪಂಡಿತ್,  ಪ್ರಶಾಂತ್ ಕಾಮತ್,ಎಂ. ಸಿ. ಐ ಮಾಲೀಕರು.ಪ್ರಶಾಂತ್ ಆಟೋ,ಭರತ್ ಸೇರಿದಂತೆ ಅನೇಕ ಸ್ವಯಂಸೇವಕರು  ರಾತ್ರಿ, ಹಗಲು ಎನ್ನದೆ ಸಹಕಾರ ನೀಡುತ್ತಿದ್ದಾರೆ ಎನ್ನುತ್ತಾರೆ ರಾಘಣ್ಣ.

ಹೋಟೆಲ್,ತರಕಾರಿ ಹಾಗೂ ಹಣ್ಣಿನ ಅಂಗಡಿಗಳ ಸಹಕಾರ
    ಪಟ್ಟಣದ ಕೆಲವೊಂದು ಹೋಟೆಲ್ ನ ಮಾಲೀಕರಾದ ದಿನೇಶ್ ಶಾನ್ಬೋಗ್ ಆಶೀರ್ವಾದ ಹೋಟೆಲ್,ತರಕಾರಿ ಹಣ್ಣಿನ ಅಂಗಡಿಗಳ  ಮಾಲೀಕರಾದ ಸುಧೀಂದ್ರ ಪಂಡಿತ್. ಗಣೇಶ್. ಸುರೇಶ್. ರೂಪ ತರಕಾರಿ,ಹಣ್ಣು, ಮುಸುರೆ ಗಳನ್ನು ನೀಡುವುದರ ಮೂಲಕ ಗೋ ಸೇವೆಗೆ ಸಹಕಾರ ನೀಡುತ್ತಿದ್ದಾರೆ ಹಾಗೂ ಊರಿನ ಗಣ್ಯರು ಕೆಲವೊಮ್ಮೆ ಹುಲ್ಲು, ಹಿಂಡಿ ತರಲು ಸಹಕಾರ ನೀಡುತ್ತಿದ್ದಾರೆ.


ವೈದಕೀಯ ಚಿಕಿತ್ಸೆ ಗೆ ಮಾನವೀಯತೆಯ ನೆರವಿನ ನಿರೀಕ್ಷೆ
   ಗೋ ಮಾತೆಯನ್ನು ಗುಣಪಡಿಸಲು ವೈದಕೀಯ ಚಿಕಿತ್ಸೆ ಗೆ ದಿನವೊಂದಕ್ಕೆ ರೂಪಾಯಿ1000/- ಮೇಲ್ಪಟ್ಟು ಖರ್ಚಾಗುತ್ತಿದ್ದು ಗೋ ಭಕ್ತರ ಸಹಕಾರದ ನಿರೀಕ್ಷೆ ಯಲ್ಲಿದ್ದಾರೆ.ಗೋವು ಭಾರತೀಯ ಸಂಸ್ಕೃತಿ, ಕೃತಿ ಮತ್ತು ಧರ್ಮದಲ್ಲಿ ಪ್ರಮುಖ ಸ್ಥಾನ ಪಡೆದಿದ್ದು ಅಂತಹ ಗೋಮಾತೆಯ ಸೇವೆಗೆ ನಾವು-ನೀವು ಜೊತೆಗೂಡಿ ಸಹಕಾರ ನೀಡೋಣ.

   ಅವರ ಈ ಸೇವೆಯನ್ನು ಗುರುತಿಸಿದ ಪಟ್ಟಣದ ಹೆಸರಾಂತ ಖಾಸಗಿ ಶಿಕ್ಷಣ ಸಂಸ್ಥೆಯಾದ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಸ್ಕೂಲ್ ನವರು ತಮ್ಮ ಶಾಲಾ ವಾರ್ಷಿಕೋತ್ಸವ ದಿನದಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮದರ್ಶಿಗಳಾದ ಶ್ರೀ ಮಾರುತಿ ಗುರೂಜಿ ಅವರು ಸನ್ಮಾನಿಸಿದ್ದಾರೆ.

ಸೇವಾದಾರರಾಗಲು ಈ ಕೆಳಗಿನ ದೂರವಾಣಿಯನ್ನು ಸಂಪರ್ಕಿಸಿ.
ರಾಘಣ್ಣ                    :7259392656
ಹರೀಶ್                    :9900787809
ಗಣೇಶ್ ಮಧುಕರ್     :9480007470
ಸುರೇಂದ್ರ ಕೋಟ್ಯಾನ್ :9535213320


ಮಾತಿಲ್ಲದ ಜೀವಗಳಿಗೆ ಮಾತಾದ ಶ್ರೀ ರಾಘವೇಂದ್ರ (ರಾಘಣ್ಣ) ಅವರ ನಿಸ್ವಾರ್ಥ ಗೋಸೇವೆ ಮಾನವೀಯತೆಯ ಜೀವಂತ ಉದಾಹರಣೆ. ಸ್ವಂತಕ್ಕೆ ಸ್ವಲ್ಪ – ಸಮಾಜಕ್ಕೆ ಸರ್ವಸ್ವ ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಅವರ ಸೇವೆಗೆ ನಾಡಿ ನ್ಯೂಸ್ ತಂಡವು ಅತ್ಯಂತ ಗೌರವದ ನಮನ ಸಲ್ಲಿಸುತ್ತದೆ. ಈ ಸೇವಾ ಯಜ್ಞ ಹೀಗೆ ಮುಂದುವರೆಯಲಿ ಎಂಬುದು ನಮ್ಮ ಹಾರೈಕೆ.

– ಎನ್.ಕಾರ್ತಿಕ್ ಕೌಂಡಿನ್ಯ, ನಾಡಿನ್ಯೂಸ್


Spread the love

Leave a Reply

Your email address will not be published. Required fields are marked *