ಹಿಂದು ಸಂಗಮ – ಸಾಗರದಲ್ಲಿ ಭರದ ಸಿದ್ಧತೆ

12 20260107 161240 0009 ಹಿಂದು ಸಂಗಮ – ಸಾಗರದಲ್ಲಿ ಭರದ ಸಿದ್ಧತೆ
Spread the love

ಶೋಭಯಾತ್ರೆಯ ಮೂಲಕ ಹಿಂದು ಸಮಾಜೋತ್ಸವವು ಜನವರಿ 10,ಸಂಜೆ 4:00ಕ್ಕೆ ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ


ಸಾಗರ: ಪರಮ ವೈಭವದ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ಹಿಂದು ಸಮಾಜದ ಏಕತೆ, ಸಂಸ್ಕೃತಿ ಹಾಗೂ ಧಾರ್ಮಿಕ ಜಾಗೃತಿಯನ್ನು ಬಲಪಡಿಸುವ ಉದ್ದೇಶದಿಂದ ಹಿಂದು ಸಮಾಜೋತ್ಸವವನ್ನು ಸಾಗರದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಕೇವಲ ಧಾರ್ಮಿಕ ಉತ್ಸವವಲ್ಲದೆ, ಸಮಾಜದ ಏಕತೆ, ಸಂಸ್ಕೃತಿ ಉಳಿವು ಹಾಗೂ ಧಾರ್ಮಿಕ ಪ್ರಜ್ಞೆಯ ಪ್ರತೀಕವಾಗಿದ್ದು, ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವದ ಪ್ರಯತ್ನವಾಗಿದೆ.


    ಹಿಂದು ಸಂಗಮದ ಮುಖ್ಯ ಉದ್ದೇಶ ಹಿಂದು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವುದು, ಪುರಾತನ ಸಂಸ್ಕೃತಿಯನ್ನು ಉಳಿಸಿ ಮುಂದಿನ ಪೀಳಿಗೆಗೆ ತಲುಪಿಸುವುದು ಹಾಗೂ ಯುವಜನತೆಗೆ ಸನಾತನ ಧರ್ಮದ ಮೌಲ್ಯಗಳನ್ನು ಪರಿಚಯಿಸುವುದಾಗಿದೆ. ಜೊತೆಗೆ ಸಮಾಜದಲ್ಲಿ ಶಾಂತಿ, ಸಹಕಾರ, ಧಾರ್ಮಿಕ ಗೌರವ ಮತ್ತು ಸ್ವಾಭಿಮಾನವನ್ನು ಬೆಳೆಸುವ ಗುರಿಯನ್ನೂ ಈ ಕಾರ್ಯಕ್ರಮ ಹೊಂದಿದೆ.
    ಪಂಚ ಪರಿವರ್ತನೆಗಳಾದ ಸಾಮರಸ್ಯ, ಕುಟುಂಬ ಪ್ರಬೋಧನ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನ ಶೈಲಿ ಹಾಗೂ ನಾಗರಿಕ ಶಿಷ್ಟಾಚಾರಗಳ ಮೂಲಕ ಸ್ವಯಂ ಮತ್ತು ಸಮಾಜದ ಮೂಲಕ ದೇಶವನ್ನು ಬಲಿಷ್ಠಗೊಳಿಸುವ ಸಂಕಲ್ಪವನ್ನು ಹಿಂದು ಸಮಾಜೋತ್ಸವ ಮುಂದಿಟ್ಟಿದೆ.
ಕಾರ್ಯಕ್ರಮದ ಅಂಗವಾಗಿ ಭವ್ಯ ಶೋಭಾಯಾತ್ರೆ ಆಯೋಜಿಸಲಾಗಿದ್ದು, ಸಂಕೀರ್ತನೆಯೊಂದಿಗೆ ಮಾರಿಕಾಂಬ ದೇವಸ್ಥಾನ (ಗಂಡನಮನೆ)ದಿಂದ ಆರಂಭವಾಗಿ, ಸಾಗರ್ ಹೋಟೇಲ್ ಸರ್ಕಲ್ ಮೂಲಕ ಜೆ.ಸಿ. ರಸ್ತೆ ಹಾದಿಯಲ್ಲಿ ಗಾಂಧಿ ಮೈದಾನ ತಲುಪಲಿದೆ.

     ಈ ಸಂದರ್ಭದಲ್ಲಿ ಶ್ರೀ ಷ|| ಬ್ರ|| ಗುರುನೀಲಕಂಠ ಶಿವಾಚಾರ್ಯ ಸ್ವಾಮಿಗಳು, ಶ್ರೀ ಶೃಂಗೇಶ್ವರ ಮಠ, ಬಳಸಗೋಡು ಅವರ ದಿವ್ಯ ಸಾನಿಧ್ಯ ಇರಲಿದೆ.
ಮುಖ್ಯ ವಕ್ತಾರರಾಗಿ ಶ್ರೀ ಡಾ॥ ಜಯಪ್ರಕಾಶ್, ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯವಾಹ ಅವರು ಭಾಗವಹಿಸಲಿದ್ದಾರೆ.

ಹಿಂದು ಸಮಾಜೋತ್ಸವವು ದಿನಾಂಕ 10-01-2026ರಂದು ಸಂಜೆ 4:00ಕ್ಕೆ ಸಾಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.

   ಈ ಕಾರ್ಯಕ್ರಮದಲ್ಲಿ ಎಲ್ಲ ಹಿಂದು ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಹಿಂದು ಸಂಗಮ ಆಯೋಜನ ಸಮಿತಿಯ ಅಧ್ಯಕ್ಷ ಶ್ರೀ ರಾಘವೇಂದ್ರ ಹೆಚ್. ಶೇಟ್ ಅವರು ಮನವಿ ಮಾಡಿದ್ದಾರೆ.

   ಆಯೋಜನ ಸಮಿತಿಯಲ್ಲಿ ಉಪಾಧ್ಯಕ್ಷರಾಗಿ ಶ್ರೀ ಕೃಷ್ಣಮೂರ್ತಿ ಕೆ.ವಿ., ಶ್ರೀ ಸುರೇಶ್ ಜಿ., ಕಾರ್ಯದರ್ಶಿಗಳಾಗಿ ಶ್ರೀ ವಿಶಾಲ ಎಂ., ಶ್ರೀಮತಿ ಸವಿತಾ, ಜಂಟಿ ಕಾರ್ಯದರ್ಶಿಗಳಾಗಿ ಶ್ರೀ ರಾಕೇಶ್ ಬನ್ಸಾಲಿ, ಶ್ರೀ ದೀಪಕ್ ಗುಡಿಗಾರ್, ಶ್ರೀಮತಿ ಪ್ರತಿಮಾ ಜೋಗಿ, ಶ್ರೀ ಸುಮಿತ್ ಎಂ., ಖಜಾಂಚಿಯಾಗಿ ಶ್ರೀಮತಿ ವಾಸುಕಿ ರಾಘವೇಂದ್ರ,ಕಾರ್ಯನಿರ್ವಾಹಕ ಸದಸ್ಯರಾದ ಶ್ರೀ ಆರಗ ಚಂದ್ರಶೇಖರ್, ಶ್ರೀ ಜೀವನ್ ಬಾಂಬೊರೆ, ಶ್ರೀ ಗಿರೀಶ್ ಪ್ರಭು, ಶ್ರೀ ರಾಜೇಶ್, ಶ್ರೀ ಗಣೇಶ್ ಚೌದರಿ ಹಾಗೂ ಶ್ರೀ ಸದಾಶಿವ  ಸಮಿತಿಯ ಸದಸ್ಯರಿಂದ ಸರ್ವ ಹಿಂದೂ ಬಾಂಧವರು ಈ ಸಮಾಜದ ಜಾಗೃತಿಯ ಕಾರ್ಯಕ್ರಮದಲ್ಲಿ ಸೇರಬೇಕೆಂದು  ವಿನಂತಿಸಿದ್ದಾರೆ.


Spread the love

Leave a Reply

Your email address will not be published. Required fields are marked *