ರಿಪ್ಪನ್ ಪೇಟೆ: ಸಮೀಪದ ದೂನ ಗ್ರಾಮದಲ್ಲಿ ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿದೆ.ಟಿವಿಎಸ್ ಎಕ್ಸೆಲ್ ಮತ್ತು ಬಜಾಜ್ ಪಲ್ಸರ್ ಬೈಕುಗಳು ಎಂದು ಮಾಹಿತಿ ತಿಳಿದುಬಂದಿದ್ದು.ಗುಬ್ಬಿಗ ಗ್ರಾಮದ ಸತ್ಯನಾರಾಯಣ ಭಟ್ ಗಂಭೀರ ಗಾಯಗಳಾಗಿ ತೀವ್ರ ರಕ್ತಸ್ರಾವ ಆಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಇನ್ನೋರ್ವರು ಹೊಸನಗರರ ಭಾಗದ ರಾಕೇಶ್ ಎಂದು ತಿಳಿದುಬಂದಿದ್ದು.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಗಾಯಾಳುಗಳನ್ನು ಆಂಬುಲೆನ್ಸ್ ಮುಖಾಂತರ ಶಿವಮೊಗ್ಗ ಜಿಲ್ಲಾ ಕೇಂದ್ರದ ಆಸ್ಪತ್ರೆ ದಾಖಲಿಸಲಾಗಿದೆ. ಪಿಎಸ್ಐ ರಾಜು ರೆಡ್ಡಿ ಮತ್ತು ತಂಡ ಸ್ಥಳ ಪರಿಶೀಲಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ.















Leave a Reply