ಹೃದಯವಿದ್ರಾವಕ ಮನವಿ: ಯುವಕನ ಜೀವ ಉಳಿಸಲು ನಿಮ್ಮ ಸಹಕಾರ ಅಗತ್ಯ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಿಳಕಿ ಗ್ರಾಮದ ನಿವಾಸಿ ನಿತ್ಯಾನಂದ (25 ವರ್ಷ) — ಬದುಕಿನ ಕನಸುಗಳನ್ನು ಕಟ್ಟಿಕೊಂಡು ಮುಂದೆ ಸಾಗುತ್ತಿದ್ದ ಯುವಕ. ಆದರೆ ವಿಧಿಯ ಕ್ರೂರ ಆಟಕ್ಕೆ ದಿನಾಂಕ 21-12-2025ರಂದು ಸಂಭವಿಸಿದ ಭೀಕರ ರಸ್ತೆ ಅಪಘಾತವು ಆ ಕನಸುಗಳಿಗೆ ಕತ್ತಲೆ ಎರಚಿದೆ.

ಅಪಘಾತದಲ್ಲಿ ನಿತ್ಯಾನಂದ ತೀವ್ರವಾಗಿ ಗಾಯಗೊಂಡು, ಪ್ರಸ್ತುತ ಶಿವಮೊಗ್ಗದ ಮ್ಯಾಕ್ಸ್ (Max) ಆಸ್ಪತ್ರೆಯಲ್ಲಿ ಪ್ರಾಣಾಪಾಯ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಮಾತಿನಂತೆ, ಜೀವ ಉಳಿಸಲು ತಕ್ಷಣ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಅದಕ್ಕೆ ಸುಮಾರು 15 ರಿಂದ 20 ಲಕ್ಷ ರೂಪಾಯಿ ವೆಚ್ಚವಾಗಲಿದೆ.
ದುರಂತವೆಂದರೆ, ನಿತ್ಯಾನಂದರ ಕುಟುಂಬವು ಕಡು ಬಡತನದಲ್ಲಿದ್ದು, ಈ ಅಪಾರ ಹಣವನ್ನು ಹೊಂದಿಸುವ ಸಾಮರ್ಥ್ಯವೇ ಇಲ್ಲ. ಆಸ್ಪತ್ರೆಯ ಕೊಠಡಿಯ ಹೊರಗೆ ಕಣ್ಣೀರಲ್ಲಿ ಮುಳುಗಿರುವ ತಂದೆ-ತಾಯಿ, “ನಮ್ಮ ಮಗ ಬದುಕಬೇಕು” ಎನ್ನುವ ಒಂದೇ ಒಂದು ಆಶಯದೊಂದಿಗೆ ಸಹಾಯಕ್ಕಾಗಿ ಕೈಚಾಚಿದ್ದಾರೆ.
ಇದು ಕೇವಲ ಒಂದು ಕುಟುಂಬದ ನೋವಲ್ಲ…
ಇದು ನಮ್ಮ ಸಮಾಜದ ಮುಂದೆ ನಿಂತಿರುವ ಮಾನವೀಯತೆಯ ಪರೀಕ್ಷೆ.
ದಯಮಾಡಿ ದಾನಿಗಳು, ಆರ್ಥಿಕವಾಗಿ ಸಬಲರಾಗಿರುವವರು, ಸಂಘ–ಸಂಸ್ಥೆಗಳು, ಹಿತೈಷಿಗಳು ನಿತ್ಯಾನಂದನ ಜೀವ ಉಳಿಸುವ ಈ ಹೋರಾಟದಲ್ಲಿ ಕೈಜೋಡಿಸಬೇಕೆಂದು ಮನವಿ ನಾಡಿ ನ್ಯೂಸ್ ಮಾಡುತ್ತದೆ.
ನಿಮ್ಮ ಒಂದು ಸಹಾಯ,
ನಿಮ್ಮ ಒಂದು ನೆರವಿನ ಕೈ,
ಒಬ್ಬ ಯುವಕನ ಬದುಕಿಗೆ ಹೊಸ ಉಸಿರು ನೀಡಬಹುದು.
ಮಾನವೀಯತೆ ಇನ್ನೂ ಜೀವಂತವಿದೆ ಎಂಬುದನ್ನು ತೋರಿಸೋಣ.
ನಿತ್ಯಾನಂದ ಆರೋಗ್ಯವಂತನಾಗಲಿ — ನಿಮ್ಮ ಸಹಕಾರದಿಂದ.














Leave a Reply