ರಿಪ್ಪನ್ ಪೇಟೆ: ಗವಟೂರು ಗ್ರಾಮದ ಹೊಳೆ ಸಿದ್ಧೇಶ್ವರ ದೇವಸ್ಥಾನದಲ್ಲಿ ಸಮಿತಿಯ ವತಿಯಿಂದ ಶುಕ್ರವಾರ ಶ್ರೀ ಹೊಳೆ ಸಿದ್ಧೇಶ್ವರ ಹಾಗೂ ಶ್ರೀ ಬಸವಣ್ಣ ದೇವರಿಗೆ ” ರುದ್ರಾಭಿಷೇಕ ” ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರೀ ಶ್ರೀ ಶ್ರೀ ಷ||ಬ್ರ||ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀಮದ್ ರಂಭಾಪುರಿ ಖಾಸಾ ಶಾಖಾ ಶ್ರೀಮನ್ ಮಹಾ ಸಂಸ್ಥಾನ ಮಳಲಿಮಠ ಇವರ ದಿವ್ಯ ಸಾನಿಧ್ಯದಲ್ಲಿ ಧರ್ಮ ಸಭೆ ಮತ್ತು ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
ಭಕ್ತಾದಿಗಳು ಆಗಮಿಸಿ ಶ್ರೀ ಸಿದ್ಧೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಹೊಳೆಸಿದ್ಧೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ವಿನಂತಿಸಿದ್ದಾರೆ.















Leave a Reply