ಅಮಾನವೀಯ ಘಟನೆ;ಒಂದು ಗೋವು ಸಾವು
ನಾಲ್ಕು ಗೋವಿನ ರಕ್ಷಣೆ

IMG 20251208 WA0065 ಅಮಾನವೀಯ ಘಟನೆ;ಒಂದು ಗೋವು ಸಾವು<br>ನಾಲ್ಕು ಗೋವಿನ ರಕ್ಷಣೆ
Spread the love

ರಿಪ್ಪನ್‌ಪೇಟೆ :ಪಟ್ಟಣದಲ್ಲಿ ಭಾನುವಾರ ಮುಂಜಾನೆ 5:15 ರ ಅಸುಪಾಸಿ ಗೋಗಳ್ಳರು ಅಕ್ರಮವಾಗಿ ಗೋವುಗಳನ್ನು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ಅಟ್ಟಹಾಸ ಮೆರೆದಿದ್ದಾರೆ.ಹೊಸನಗರ-ಶಿವಮೊಗ್ಗ ರಸ್ತೆಯಲ್ಲಿ ಐದು ಗೋವುಗಳನ್ನು ಟಾಟಾಏಸ್ (KA40B1570) ವಾಹನದಲ್ಲಿ ತುಂಬಿಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಗೋವೊಂದು ವಾಹನದಿಂದ ಆಕಸ್ಮಿಕವಾಗಿ ಕೆಳಗೆ ಬಿದ್ದಾಗ ಗೋಗಳ್ಳರು ಅದನ್ನು ಗಮನಿಸದೆ ಸುಮಾರು 8 ಕಿ.ಮೀ. ದೂರ ಎಳೆದುಕೊಂಡು ಬಂದ ಹಿನ್ನಲೆಯಲ್ಲಿ ಗೋವಿನ ಮೈಮೇಲಿನ ಚರ್ಮ ಕಿತ್ತು ಹೋಗಿ ರಸ್ತೆಯ ತುಂಬ ರಕ್ತದ ಕೋಡಿ ಹರಿದ ಹೃದಯ ವಿದ್ರಾವಕ ಅಮಾನವೀಯ ಘಟನೆಯೂ ನಡೆದಿರುವುದು ಸಿಸಿಟಿವಿ ದೃಶ್ಯಗಳು ಲಭ್ಯವಾಗಿದೆ.

ಮಾಹಿತಿಯ ಮೇರೆಗೆ ತಕ್ಷಣಕ್ಕೆ ಆಗಮಿಸಿದ ಪೋಲಿಸ್ ಸಿಬ್ಬಂದಿ ಆರೋಪಿತರನ್ನ ವಶಕ್ಕೆ ಪಡೆದು ವಾಹನದಲ್ಲಿದ್ದ 4 ಗೋವುಗಳನ್ನು ರಕ್ಷಿಸಿ,ಸಾವಿಗೀಡಾದ ಗೋವಿನ ಸಂಸ್ಕಾರ ಪೂರೈಸಿದ್ದಾರೆ. ಪಿ.ಎಸ್.ಐ ರಾಜುರೆಡ್ಡಿ ಮತ್ತು ತಂಡದ ನೇತೃತ್ವದಲ್ಲಿ ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

img 20251208 wa00649204798268435880491 ಅಮಾನವೀಯ ಘಟನೆ;ಒಂದು ಗೋವು ಸಾವು<br>ನಾಲ್ಕು ಗೋವಿನ ರಕ್ಷಣೆ
ಜೆಸಿಬಿ ಬಳಸಿ ಅಂತ್ಯ ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುತಿರರುವುದು

ಆರೋಪಿಗಳು ಚಿಕ್ಕಬಳ್ಳಾಪುರ ಜಿಲ್ಲೆಯ ಸಿಡ್ಲಗಟ್ಟ ಅನಿಲ್ ಬಿನ್ ಲಘಮಪ್ಪ (27) ಹಾಗೂ ಚಿಂತಾಮಣಿ ಸುರೇಶ್ ಬಿನ್ ನರಸಿಂಹಮೂರ್ತಿ ಎಂದು ಗುರುತಿಸಲಾಗಿದೆ.

ಪೋಲಿಸರ ವೈಫಲ್ಯ ?
ಗವಟೂರಿನಿಂದ ಅರಸಾಳಿನ ತನಕ ಸುಮಾರು 8 ಕಿಮೀ ಹಸು ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದರು ವಿನಾಯಕವೃತ್ತದಲ್ಲಿರಬೇಕಾದ ಗಸ್ತು ಪೋಲಿಸರು ಅದನ್ನು ಗಮನಿಸದೆ ಇರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಯಿತು.

ಸ್ಥಳೀಯರು ಅಕ್ರಮ ಗೋ ಸಾಗಣೆಯು ಈ ಪ್ರದೇಶದಲ್ಲಿ ಹೆಚ್ಚಾಗಿರುವುದನ್ನು ಗಂಭೀರವಾಗಿ ಪರಿಗಣಿಸಿ, ಅಧಿಕಾರಿಗಳು ಗಡಿ ತಪಾಸಣೆ ಕೇಂದ್ರಗಳಲ್ಲಿ ಹೆಚ್ಚಿನ ನಿಗಾವಹಿಸಬೇಕು, ವಾಹನಗಳ ಪರಿಶೀಲನೆಯನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.


Spread the love

Leave a Reply

Your email address will not be published. Required fields are marked *