ತಿಂಗಳಿಗೆ 24,000 ವರೆಗೆ ಗೌರವಧನ
ರಿಪ್ಪನಪೇಟೆ : ರಿಪ್ಪನ್ ಪೇಟೆ ಘಟಕದಲ್ಲಿ ಖಾಲಿ ಇರುವ ಒಟ್ಟು 13 + ಪುರುಷ ಹಾಗು ಮಹಿಳಾ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವಾ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಯಾರೆಲ್ಲ ಅರ್ಹರು?
ಅರ್ಜಿದಾರರು ಭಾರತೀಯ ಪ್ರಜೆ ಆಗಿದ್ದು, 19ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ ಉತ್ತೀರ್ಣರಾದವರು, ಆರೋಗ್ಯದಲ್ಲಿ ಸಶಕ್ತರಾಗಿರುವವರು, ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿಲ್ಲದವರು ಅರ್ಜಿ ಸಲ್ಲಿಸಲು ಅರ್ಹರು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ?
ಅರ್ಜಿ ಸಲ್ಲಿಸಲು 2026 ರ ಫೆ. 3 ಕೊನೆಯ ದಿನವಾಗಿದೆ.
ಅರ್ಜಿ ಸಲ್ಲಿಸುವುದು ಹೇಗೆ?
ತಾಲೂಕು ಕೇಂದ್ರದ ಗೃಹರಕ್ಷಕ ದಳದ ಘಟಕದಲ್ಲಿ ಅಥವಾ ಉಪಘಟಕದಲ್ಲಿ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ರಿಪ್ಪನಪೇಟೆ ಗೃಹ ರಕ್ಷಕದಳದ ಘಟಕಾಧಿಕಾರಿ ಟಿ. ಶಶಿಧರ್ ಆಚಾರ್ಯ : 9741477689 ಅವರನ್ನು ಸಂಪರ್ಕಿಸಲು ಕೋರಲಾಗಿದೆ.















Leave a Reply