ಪೋಷಕರು ಕೂಡ ಜವಾಬ್ದಾರಿ ವಹಿಸಬೇಕು- ಕ್ಷೇತ್ರ ಶಿಕ್ಷಣಾಧಿಕಾರಿಗಳು
ರಿಪ್ಪನ್ ಪೇಟೆ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಗಣೇಶ್ ಎ.ವೈ ಸರ್ಕಾರಿ ಶಾಲೆ ಅತ್ಯಂತ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕೊಡುತ್ತಿದೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ನಮ್ಮ ಮಕ್ಕಳು ಸಾಧನೆ ಮಾಡುತ್ತಿದ್ದಾರೆ. ಶೈಕ್ಷಣಿಕ ಸಾಧನೆಗೆ ಪೋಷಕರ ಸಹಕಾರವು ಅಗತ್ಯ, ಮಕ್ಕಳು ಶಾಲೆಯಲ್ಲಿ 8 ಗಂಟೆ ಇದ್ದರೆ ಮನೆಯಲ್ಲಿ 16 ಗಂಟೆ ಇರುತ್ತಾರೆ. ಶಿಕ್ಷಕರ ಜವಾಬ್ದಾರಿ ಎಷ್ಟಿದೆಯೋ ಅದಕ್ಕಿಂತ ದುಪ್ಪಟ್ಟು ಜವಾಬ್ದಾರಿ ಪೋಷಕರದ್ದಾಗಿರುತ್ತದೆ ಮನೆಯಲ್ಲಿ ಮಕ್ಕಳ ಮೇಲೆ ನೀಗಾ ವಹಿಸಿ ,ಮೋಬೈಲ್ -ಸೋಷಿಯಲ್ ಮೀಡಿಯಾ ದಿಂದ ಮಕ್ಕಳನ್ನ ದೂರವಿಡಿಸಿ, ಮಕ್ಕಳ ಓದುವ ಆಸಕ್ತಿ ಕೂಡ ಹೆಚ್ಚಾಗುತ್ತದೆ ಪೋಷಕರು ಜವಾಬ್ದಾರಿ ವಹಿಸಿ ಎಂದು ವಿನಂತಿಸಿದರು.

ತಮ್ಮ ಅಧಿಕ ಒತ್ತಡದ ನಡುವೆಯು ಸರ್ಕಾರಿ ಶಾಲೆಯ ಕಾರ್ಯಕ್ರಮಕ್ಕೆ ಬರಲೆಬೇಕೆಂದು ತಡವಾದರೂ ಬಂದು ಸೇರಿದ ಮಾನ್ಯ ಶಾಸಕರು ಸಭೆಯನ್ನುದ್ದೇಶಿಸಿ ಮಾತನಾಡಿ ಖಾಸಗಿ ಶಾಲೆಗೆ ಕಡಿಮೆಯಿಲ್ಲದಂತೆ ನಮ್ಮ ಮಕ್ಕಳು ಸಾಧನೆ ಮಾಡುತ್ತಿದ್ದಾರೆ. 100% ಫಲಿತಾಂಶ ನಮ್ಮ ಸರ್ಕಾರಿ ಶಾಲೆಗಳು ನೀಡುತ್ತಿವೆ ಎಂದು ಹೆಮ್ಮೆಯಿಂದ ಹೇಳಿದರು.
ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗಾಗಿ ಎಲ್ಲಾ ರೀತಿಯ ಸೌಲಭ್ಯಗಳ ಜೊತೆ ಮೊಟ್ಟೆ,ಚಿಕ್ಕಿ,ಹಾಲು, ಬಿಸಿಯೂಟ ಎಲ್ಲವೂ ಕೊಟ್ಟು ಉತ್ತಮವಾದ ಉಚಿತ ಶಿಕ್ಷಣವನ್ನೂ ಸರ್ಕಾರ ನೀಡುತ್ತಿದ್ದು ಇಷ್ಟೆಲ್ಲ ವ್ಯವಸ್ಥೆ ಮಾಡಿ ಕೊಟ್ಟರೂ ಮಕ್ಕಳನ್ನ ಸರ್ಕಾರಿ ಶಾಲೆಗೆ ಪೋಷಕರು ಸೇರಿಸುವುದಿಲ್ಲವೆಂದಾಗ ಬೇಸರವಾಗುತ್ತದೆ. ನಾನೇನಾದರೂ ಮುಖ್ಯಮಂತ್ರಿ ಆದರೆ ಅಂತಹವರನ್ನ ಜೈಲಿಗೆ ಹಾಕುತ್ತೆನೆ ಎಂದು ತಮ್ಮ ಸರ್ಕಾರಿ ಶಾಲೆಯ ಮೇಲಿರುವ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸಿದರು.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಾಸಕರು ಪ್ರತಿಭಾ ಪುರಸ್ಕಾರ ಪೂರೈಸಿ ತುರ್ತು ಬೆಂಗಳೂರಿನ ಕಡೆಗೆ ತಮ್ಮ ಪ್ರಯಾಣ ಮುಂದುವರೆಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಎಂ ಸಿ ಅಧ್ಯಕ್ಷ ಮಂಜಪ್ಪ ವಹಿಸಿದ್ದರು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ , ಉಪಾಧ್ಯಕ್ಷ ಸುಧೀಂದ್ರ ಪೂಜಾರಿ ,ಗ್ರಾಪಂ ಸದಸ್ಯರಾದ ನಿರೂಪ್ ಕುಮಾರ್ , ಆಸೀಫ಼್ , ಮಹಾಲಕ್ಷ್ಮಿ ಅಣ್ಣಪ್ಪ , ದಾನಮ್ಮ , ಅಶ್ವಿನಿ ರವಿಶಂಕರ್, ಮಲ್ಲಿಕಾರ್ಜುನ್ ,ಗ್ಯಾರಂಟಿ ಸಮಿತಿ ಸದಸ್ಯ ರವೀಂದ್ರ ಕೆರೆಹಳ್ಳಿ ಹಾಗೂ ಶಿಕ್ಷಣ ಇಲಾಖೆಯ ಸೋಮಶೇಖರ್ ಬಂಡಿ , ಜಗದೀಶ್ ಕಾಗಿನೆಲೆ , ಕರಿಬಸಪ್ಪ , ನಾಗರಾಜ್ , ಶಿವಮೂರ್ತಿ ಸೇರಿದಂತೆ ಇನ್ನಿತರರು ಇದ್ದರು.
















Leave a Reply