ರಿಪ್ಪನ್ ಪೇಟೆ : 30 ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಯಾತ್ರೋತ್ಸವದ ಪ್ರಯುಕ್ತ ನಾಳೆ ದಿ.14-01-2026 ರ ಬುಧವಾರ ಬೆಳಿಗ್ಗೆ 7-00 ರಿಂದ 9-00 ರ ವರೆಗೆ ಶ್ರೀ ಗಣಪತಿ, ಶ್ರೀ ಸುಬ್ರಹ್ಮಣ್ಯ, ಶ್ರೀ ದುರ್ಗಾಪರಮೇಶ್ವರಿ ದೇವರ ಪ್ರಾರ್ಥನೆಯೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಗೆ ಅಲಂಕಾರ ಹಾಗೂ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ 1-30 ಕ್ಕೆ ಸಾಮೂಹಿಕ ಅನ್ನ ಸಂತರ್ಪಣೆ ಇರಲಿದೆ.

ಅದೇ ದಿನ ಸಂಜೆ 6-40 ಕ್ಕೆ ಶ್ರೀ ಸ್ವಾಮಿಯ ಸನ್ನಿಧಾನದಿಂದ ಶ್ರೀ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದವರೆಗೆ ರಾಜಬೀದಿ ಮೆರವಣಿಗೆ, ಈ ರಾಜಬೀದಿ ಮೇರವಣಿಗೆಯಲ್ಲಿ ಡೊಳ್ಳುಕುಣಿತ ಹಾಗೂ ಭಜನಾ ಕಾರ್ಯಕ್ರಮವಿರುತ್ತದೆ. ನಂತರ ಸ್ವಾಮಿಗಳು ಶ್ರೀ ಕ್ಷೇತ್ರ ಶಬರಿಮಲೆಗೆ ಯಾತ್ರೆಗೆ ಹೊರಡಲಿದ್ದಾರೆ.

ಆದ್ದರಿಂದ ಭಕ್ತಾಧಿಗಳು ಈ ಮೇಲ್ಕಂಡ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರೊಂದಿಗೆ ಶ್ರೀ ಅಯ್ಯಪ್ಪಸ್ವಾಮಿಯ ಕೃಪೆಗೆ ಪಾತ್ರರಾಗಲು ಶ್ರೀ ತೀರ್ಥೇಶ್ ಸ್ವಾಮಿ ಹಾಗೂ ಶ್ರೀ ರಮೇಶ್ ಸ್ವಾಮಿ, ಗುರುಸ್ವಾಮಿಗಳು ಶ್ರೀ ಹಾಗೂ ಮರಿಸ್ವಾಮಿಗಳು ಮತ್ತು ಭಕ್ತವೃಂದ, ವಿನಾಯಕ ನಗರ ಇವರಿಂದ ಕೋರಲಾಗಿದೆ.















Leave a Reply