ಕಳೆದುಹೋದ ಮೊಬೈಲ್ ಪತ್ತೆ – ಮಾಲೀಕರಿಗೆ ಹಸ್ತಾಂತರಿಸಿದ ರಿಪ್ಪನ್ ಪೇಟೆ ಪೊಲೀಸರು

IMG 20260219 WA0169 ಕಳೆದುಹೋದ ಮೊಬೈಲ್ ಪತ್ತೆ – ಮಾಲೀಕರಿಗೆ ಹಸ್ತಾಂತರಿಸಿದ ರಿಪ್ಪನ್ ಪೇಟೆ ಪೊಲೀಸರು
Spread the love

ರಿಪ್ಪನ್ ಪೇಟೆ: 2024ರಲ್ಲಿ ಆನಂದಪುರ ಸಮೀಪದ ಇಸ್ಲಾಂಪುರ ನಿವಾಸಿ ಆಸೀಮ್ ಅವರ ಮೊಬೈಲ್ ಫೋನ್ ಕಳೆದುಹೋಗಿದ್ದು, ಈ ಕುರಿತು ಅವರು ರಿಪ್ಪನ್ ಪೇಟೆ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು CEIR (Central Equipment Identity Register) ವ್ಯವಸ್ಥೆಯಲ್ಲಿ ಮೊಬೈಲ್ ಅನ್ನು ಬ್ಲಾಕ್ ಮಾಡಿ ಶೋಧ ಕಾರ್ಯ ಆರಂಭಿಸಿದ್ದರು.


  ಇದೀಗ ಕಳೆದುಹೋದ ಮೊಬೈಲ್ ಪತ್ತೆಯಾಗಿದ್ದು, ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ASI ಹಾಲಪ್ಪ ಅವರು ಮೊಬೈಲ್ ಫೋನ್ ಅನ್ನು ಮಾಲಿಕ ಆಸೀಮ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಪ್ರವೀಣ್ ಸೇರಿದಂತೆ ಠಾಣೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.


  ಸಾರ್ವಜನಿಕರು ತಮ್ಮ ಮೊಬೈಲ್ ಫೋನ್ ಕಳೆದುಹೋದರೆ ತಕ್ಷಣ ಸಮೀಪದ ಪೊಲೀಸ್ ಠಾಣೆಗೆ ದೂರು ನೀಡಿ CEIR ವ್ಯವಸ್ಥೆಯಲ್ಲಿ ಬ್ಲಾಕ್ ಮಾಡಿಸಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.


Spread the love

Leave a Reply

Your email address will not be published. Required fields are marked *