ರಿಪ್ಪನ್ ಪೇಟೆ: ಪಟ್ಟಣದ ಪ್ರಮುಖ ವಸತಿ ಪ್ರದೇಶಗಳಲ್ಲಿ ಹೋಳಿ ಹಬ್ಬ ಸಂಭ್ರಮ, ಸಡಗರ ಮತ್ತು ಸೌಹಾರ್ದದ ವಾತಾವರಣದಲ್ಲಿ ಆಚರಿಸಲಾಯಿತು. ಯುವಕರು, ಕಿರಿಯರು ಮತ್ತು ಮಕ್ಕಳು ಪರಸ್ಪರ ಬಣ್ಣಗಳನ್ನು ಎರಚಿಕೊಂಡು ಹಬ್ಬದ ಸಂತಸವನ್ನು ಹಂಚಿಕೊಂಡರು. ನಗೆ, ಹರ್ಷೋದ್ಗಾರ ಮತ್ತು ಬಣ್ಣಗಳ ಕಂಡುಬಂದಿತು.

ನಿನ್ನೆ ಸಂಜೆ ಗಾಂಧಿನಗರದ ನಿವಾಸಿಗಳು ಒಟ್ಟುಗೂಡಿ ಸಂಪ್ರದಾಯಬದ್ಧವಾಗಿ ಕಾಮಣ್ಣನ ದಹನ ನೆರವೇರಿಸಿದರು. ದುಷ್ಟತೆಯ ಮೇಲೆ ಸತ್ಯದ ಜಯವನ್ನು ಪ್ರತೀಕಿಸುವ ಈ ಆಚರಣೆ ಭಕ್ತಿಭಾವದೊಂದಿಗೆ ನಡೆಯಿತು. ಮಹಿಳೆಯರು ಪೂಜೆ ಸಲ್ಲಿಸಿದರು , ಮಕ್ಕಳು ಹಾಗೂ ಯುವಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಗಾಂಧಿನಗರ, ಶಬರೀಶ್ ನಗರ ಮತ್ತು ವಿನಾಯಕ ನಗರದ ನಿವಾಸಿಗಳು ಹೋಳಿಯನ್ನು ಅತ್ಯಂತ ಉತ್ಸಾಹದಿಂದ ಆಚರಿಸಿದರು. ಬೆಳಗ್ಗಿನಿಂದಲೇ ಯುವಕರ ಗುಂಪುಗಳು ಬಣ್ಣಗಳೊಂದಿಗೆ ಬೀದಿಗಿಳಿದು ಸಂಭ್ರಮಿಸಿದರು. ಹಿರಿಯರು ಮಕ್ಕಳಿಗೆ ಶುಭಾಶಯ ಕೋರಿದರೆ, ಮಕ್ಕಳು ಪರಸ್ಪರ ಬಣ್ಣ ಹಚ್ಚಿಕೊಂಡು ಖುಷಿಪಟ್ಟರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಎಲ್ಲಾ ಗುಂಪುಗಳ ಮೇಲೆ ನಿಗಾವಹಿಸಿದ್ದು, ಸ್ವಾಭಾವಿಕವಾಗಿ ಎಂದಿನಂತೆ ಶಾಂತಯುತವಾಗಿ ಆಚರಣೆಗಳು ನಡೆದವು.













Leave a Reply