ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಭಾಗವಹಿಸಿದ ಶಿಶುಗಳು
ರಿಪ್ಪನ್ ಪೇಟೆ : ಗ್ರಾಮ ಪಂಚಾಯತಿಯಲ್ಲಿ 77ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣವನ್ನು ಗ್ರಾ.ಪಂ ಅಧ್ಯೆಕ್ಷೆ ಧನಲಕ್ಷ್ಮಿ ಗಂಗಾಧರ್ ನೇರವೇರಿಸಿ ಮಾತನಾಡಿದರು. ಉಪಾಧ್ಯಕ್ಷರು ಮತ್ತು ಸದಸ್ಯರು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.


ಪ್ರತಿ ವರ್ಷ ದಂತೆ ಈ ಬಾರಿಯ ಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರೋತ್ಥಾನ ಶಿಶು ಮಂದಿರದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಅಮೃತವಚನ ಮತ್ತು ದೇಶಭಕ್ತಿಗೀತೆ,ನೃತ್ಯ, ಮಕ್ಕಳಿಂದ ಭಾಷಣದ ಮೂಲಕ ಆಚರಣೆ ಮಾಡಲಾಯಿತು.ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಆಗಮಿಸಿದ್ದರು.ಬರುವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯರು ಧ್ವಜಾರೋಹಣ ನೇರವೇರಿಸಿದರು.

ಪೋಲಿಸ್ ಠಾಣೆಯಲ್ಲಿ ಪಿಎಸ್ ಐ ರಾಜುರೆಡ್ಡಿ ಅವರು ಧ್ವಜಾರೋಹಣ ನೇರವೇರಿಸಿದರು.ಪಟ್ಟಣದ ಗುಡ್ ಶೆಫರ್ಡ್ ಚರ್ಚ್ ,ಮೂಯ್ಯುದ್ದಿನ್ ಜುಮ್ಮಾ ಮಸೀದಿ, ಸರ್ಕಾರಿ ಆಸ್ಪತ್ರೆ, ಅನೇಕ ಕಡೆಗಳಲ್ಲಿ ಸಂಭ್ರಮದಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಹೆದ್ದಾರಿಪುರ: ಹೆದ್ದಾರಿ ಪುರ ಸರ್ಕಾರಿ ಪ್ರೌಢಶಾಲೆ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗಾರ್ಜುನ ಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಂದರ್ಭದಲ್ಲಿ ವಾಸಪ್ಪ ಗೌಡ, ವಿಶುಕುಮಾರ್, ಮುಖ್ಯ ಶಿಕ್ಷಕರಾದ ನಾಗರಾಜ ಎಸ್ ಪಿ, ಶಿಕ್ಷಕ ಸುರೇಶಪ್ಪ ಮತ್ತು ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮೂಗುಡ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ಯತೀಶ್ ಎಂ.ಎಸ್ ಧ್ವಜಾರೋಹಣ ನೆರವೇರಿಸಿದರು.ಉಪಾಧ್ಯಕ್ಷರು ಸುಮ, ಹಾಗೂ ಪೋಷಕರಾದ ರಾಘವೇಂದ್ರ ಆಚಾರ್ಯ, ಅಶ್ವಿನಿ, ಸುಶ್ಮಿತಾ, ಮಮತಾ, ಸುಪ್ರಿತಾ, ಕೃತಿ, ಹಳೆಯ ವಿದ್ಯಾರ್ಥಿಗಳಾದ ಜನಾರ್ಧನ್ ಆಚಾರ್ಯ, ಕಾರ್ತಿಕ್ ಜೆ ಎಂ, ಅರುಣ್ ಕುಮಾರ್ ಡಿ,ಮಹಾಬಲ ಮತ್ತು ಅನೇಕರಿದ್ದರು.













Leave a Reply